Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೇ.10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ವಿಶೇಷ ಲೇಖನ ; ಲಕ್ಷ್ಮೀಪತಿ.ಡಿ

Facebook
Twitter
Telegram
WhatsApp

ಸಂತ ಶಿಶುನಾಳ ಶರೀಫ ಮೆಚ್ಚಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ

15 ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾಳೆ. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬುದಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, ಸಾಕ್ಷಾತ್ಕರಿಸಿಕೊಂಡ ಸಾಧ್ವಿ ಮಲ್ಲಮ್ಮ. ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವಳು. ಹೇಮರೆಡ್ಡಿ ಮಲ್ಲಮ್ಮನ ಪವಾಡ ಹಾಗೂ ಭಕ್ತಿಯ ಕುರಿತು ಹಲವು ಪ್ರತೀತಿ ಹಾಗೂ ಕಥನಗಳಿವೆ. ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮಳನ್ನು ರೆಡ್ಡಿ ಕುಲದ ಉದ್ಧಾರಕಳು ಎಂದು ಬಣ್ಣಿಸಿದ್ದಾರೆ.

ಆಂದ್ರಪ್ರದೇಶದ ಶ್ರೀಶೈಲದ ದಕ್ಷಿಣ ದಿಕ್ಕಿನಲ್ಲಿರುವ ವೆಲ್ಲಟೂರು ಬಳಿಯ ರಾಮಪುರ ಗ್ರಾಮದ ಸುಸಂಸ್ಕೃತ ಮನೆತನದ ರಾಮರೆಡ್ಡಿ ಹಾಗೂ ಗೌರಮ್ಮ ದಂಪತಿಗಳಿಗೆ ಮಗಳಾಗಿ ಹೇಮರೆಡ್ಡಿ ಮಲ್ಲಮ್ಮ ಜನಿಸಿದಳು. ಚಿಕ್ಕಂದಿನಿಂದಲೂ ಶಿವಭಕ್ತೆಯಾದ ಮಲ್ಲಮ್ಮ ತನ್ನ ಹದಿನಾರನೆ ವಯಸ್ಸಿಗೆ ಸಿದ್ದಾಪುರ ಸಂಸ್ಥಾನದ ಒಡೆಯ ಹೇಮರಡ್ಡಿ ಅವರ ಮೂರನೆ ಮಗ ಭರಮರೆಡ್ಡಿಯನ್ನು ಮದುವೆಯಾದಳು. ಮುಗ್ಧ, ಹಾಗೂ ಸಾಧು ಸ್ವಭಾವದ ಭರಮರೆಡ್ಡಿ ಲೋಕರೂಢಿಯ ವ್ಯವಹಾರದಲ್ಲಿ ಕಡಿಮೆ ಜ್ಞಾನ ಹೊಂದಿದವನು. ಇವನ ತಮ್ಮ ವೇಮನ ಮದ್ಯವೆಸನಿ ಹಾಗೂ ಸ್ತ್ರೀಯರ ಲಂಪಟನಾಗಿದ್ದ. ಇಂತಗ ಸಂದಿಗ್ಧ ಮನೆತನದಲ್ಲಿ ತನ್ನ ಸಂಸಾರ ನಡೆಸಿದ ಮಲ್ಲಮ್ಮ ಮನೆಯ ಎಲ್ಲಾ ಸದಸ್ಯರಲ್ಲೂ ಪರಿವರ್ತನೆ ತರುತ್ತಾಳೆ. ದಾನ ಚಿಂತಾಮಣಿಯಾದ ಮಲ್ಲಮ್ಮ ಕಾಯದಲ್ಲಿ ದೇವರನ್ನು ಕಾಣುವ ಮಾರ್ಗವನ್ನು ತೋರಿದಳು.

ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮ ಜೀವನ ಹಾಗೂ ಔದಾರ್ಯ ಗುಣಗಳನ್ನು ಹೊಗಳಿ ರಚಿಸಿದ ಗೀತೆ ಜನರ ಬಾಯಲ್ಲಿ ನಲಿದಾಡುತ್ತಿದೆ. ಸಮಸ್ತ ರೆಡ್ಡಿ ಕುಲದ ಧರ್ಮ ಉದ್ಧಾರ ಮಾಡಲು ಅವತರಿಸಿದ ಶರಣೆ ಎಂದು ಕರೆದಿದ್ದಾರೆ. ಮಲ್ಲಮ್ಮ ಭಕ್ತಿ ಗಂಡನ ಮೇಲಿನ ಪ್ರೇಮ ಅಗಾಧವಾದು. ವೇಮನ ತತ್ವಜ್ಞಾನಿಯಾಗಿ ಬದಲಾಗಲು ಕಾರಣಳಾದ ಹೇಮರೆಡ್ಡಿ ಮಲ್ಲಮ್ಮ ಸಾಕ್ಷತ್ ಶ್ರೀಶೈಲ ಮಲ್ಲಿಕಾರ್ಜುನ ಅನುಗ್ರಹಕ್ಕೆ ಪಾತ್ರಳಾದವಳು ಎಂದು ಶಿಶುನಾಳ ಶರೀಫರು ಮಲ್ಲಮ್ಮ ಗರಿಮೆ ಹಾಡಿ ಹೊಗಳಿದ್ದಾರೆ.

ರುದ್ರಕವಿ ಹೇಮರೆಡ್ಡಿ ಮಲ್ಲಮ್ಮನ ಪುರಾಣವನ್ನು ಹಾಗೂ ಲೇಖಕ ಸಂ.ಹನುಮಂತಪ್ಪ ಅಂಡಗಿ ಮಲ್ಲಮ್ಮನ ಕುರಿತು ಮೂಗುತಿ ಮಹಿಮೆ ರಚಿಸಿದ್ದಾರೆ. ಶರಣೆ ಹೇಮರೆಡ್ಡಿ ಮಲ್ಲಮ್ಮನ ಪವಾಡಗಳ ಕುರಿತು ಅನೇಕ ರೀತಿಯ ಚಲನಚಿತ್ರಗಳು ಮೂಡಿ ಬಂದಿವೆ. 1946 ರಲ್ಲಿ ಗುಬ್ಬಿ ವೀರಣ್ಣನವರ ನಿರ್ಮಾಣ ಹಾಗೂ ಎಸ್. ಸೌಂದರ್ಯ ರಾಜನ್ ನಿರ್ದೇಶನದಲ್ಲ್ಲಿ ಬಿ.ಜಯಮ್ಮ , ಹೊನ್ನಪ್ಪ ಭಾಗವತರ್ , ವೀರಣ್ಣ ಮತ್ತು ಸಿ.ಬಿ.ಮಲ್ಲಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಹೇಮರೆಡ್ಡಿ ಮಲ್ಲಮ್ಮ ಚಲನಚಿತ್ರ ಬಿಡುಗಡೆಯಾಗಿ ಜನರ ಮೆಚ್ಚಿಗೆ ಪಾತ್ರವಾಗಿದೆ.

ಜನಪದ ಸಾಹಿತ್ಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜೀವನದ ಬಗ್ಗೆ ಕರುಹುಗಳಿವೆ. “ರಾಂಪುರದ ರಾಮರೆಡ್ಡಿ-ಗೌರಮ್ಮರ ಸುಪುತ್ರಿ, ಹೇಮರೆಡ್ಡಿ ಮಲ್ಲಮ್ಮ ಸಿದ್ದಾಪುರದ ಸೊಸಿ, ಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿ, ಅತ್ತೆ-ನೆಗೆಣ್ಣಿಯರ ಕಾಟ ಸಹಿಸಿ, ಮಬ್ಬು ಗಂಡನ ಮಹಾದೇವನೆಂದು ಮನ್ನಿಸಿ, ಮತಿಗೇಡಿ ಮೈದುನನ ಯೋಗಿ ವೇಮನನ ಮಾಡಿ, ಮಹಾಯೋಗಿಯ ಮಹಾತಾಯಿಯಾಗಿ, ಮಲ್ಲಮಾಂಬೆ ಬೆಳಗಿದಳು ರೆಡ್ಡಿಕುಲವ” ಎಂದು ಜನರು ಮಲ್ಲಮ್ಮನ ಕುರಿತು ಹಾಡಿದ್ದಾರೆ.

ಲೇಖನ: ಲಕ್ಷ್ಮೀಪತಿ.ಡಿ ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ ಚಿತ್ರದುರ್ಗ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮೋದಿ ಅಬ್ಬರ : ಅಭ್ಯರ್ಥಿಗಳ ಗೆಲುವಿಗೆ ಮತಯಾಚನೆ

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ‌. ರಾಜ್ಯಕ್ಕೆ ಬಂದಿರುವ ಪ್ರಧಾನಿ ಮೋದಿ ಅಭ್ಯರ್ಥಿಗಳ ಪರವಾವಿ ಮತಯಾಚನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಸಂಚಾರ ನಡೆಸಿ, ಮತಯಾಚನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದ

ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ಹೋರಾಟ ಅನಿವಾರ್ಯ : ಬಿ.ಎನ್.ಚಂದ್ರಪ್ಪ

ಸುದ್ದಿಒನ್,  ಚಿತ್ರದುರ್ಗ: ಏ.20 :  ಕೇಂದ್ರ ಬಿಜೆಪಿ ಸರ್ಕಾರದ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು. ಹಿರಿಯೂರು ತಾಲೂಕಿನ ಕೋಡಿಹಳ್ಳಿ

ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ 25 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20  : ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಿ.ಯೋಗೇಶ್‍ಬಾಬು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಎಸ್.ಬಸವರಾಜು, ಕೆ.ಚಂದ್ರಣ್ಣ,

error: Content is protected !!