Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರೀ ಮಳೆಗೆ ಮೆಣಸಿನಕಾಯಿಯೆಲ್ಲಾ ಹಾಳು : ರೈತ ಕಂಗಾಲು..!

Facebook
Twitter
Telegram
WhatsApp

ಬಳ್ಳಾರಿ: ದಿನವಿಡೀ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಬೆಳೆದ ಬೆಳೆಯೆಲ್ಲಾ ನೀರಿಗೆ ಆಹುತಿಯಾಗುತ್ತಿದೆ. ಈಗಾಗಲೇ ರೈತರ ಬೆಳೆಯೆಲ್ಲಾ ಹೊಲದಲ್ಲಿ ಮಲಗಿದೆ. ಎಷ್ಟೋ ರೈತರ ಜಮೀನಲ್ಲಿ ನೀರು ತುಂಬಿ ಕೈಗೆ ಬರಬೇಕಿದ್ದ ಫಸಲು ಅಲ್ಲಿಯೇ ಕೊಳೆಯುತ್ತಿದೆ. ಈಗ ರೈತರೊಬ್ಬರ ಮೆಣಸಿನಕಾಯಿ ನೀರು ಪಾಲಾಗಿದೆ.

ಜಿಲ್ಲೆಯ ಕುರಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 9 ಲಕ್ಷಕ್ಕೂ ಅಧಿಕ ಮೌಲ್ಯದ ಮೆಣಸಿನಕಾಯಿ ಬೆಳೆ ನೀರು ಪಾಲಾಗಿದ್ದು, ಬೆಳೆ ಬೆಳೆದ ರೈತ ತಲೆ‌ ಮೇಲೆ ಕೈ ಹೊತ್ತು ಕುಳಿತಂತಾಗಿದೆ.

ಗ್ರಾಮದ ರೈತರು ಮೆಣಸಿನಕಾಯಿಯನ್ನ ಕಟಾವು ಮಾಡಿದ್ದಾರೆ. ಆ ಬಳಿಕ ಒಣಗಲು ಪಾಂಡುರಂಗ ದೇವಾಲಯದ ಆವರಣದಲ್ಲಿ ಹಾಕಲಾಗಿದೆ. ಮೂವತ್ತಕ್ಕೂ ಹೆಚ್ಚು ರೈತರು ಮೆಣಸಿ‌ನ ಕಾಯಿ ಬೆಳೆಯನ್ನೇ ನಂಬಿದ್ದರು. ಸರಿಯಾದ ಸಮಯಕ್ಕೆ ಕಟಾವು ಮಾಡಿ, ಮಾರಾಟ ಮಾಡಲು ಒಣಗಲು ಹಾಕಿದ್ದರು. ಆದ್ರೆ ವರುಣರಾಯ ಅಲ್ಲಿಯೂ ಬಿಡಲಿಲ್ಲ. ನಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಒಣಗಲು ಹಾಕಿದ್ದ ಮೆಣಸಿನಕಾಯಿ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ‌. ರೈತ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಜ್ಜು : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ : ಏಪ್ರಿಲ್ 16  : ಏಪ್ರಿಲ್ 26ರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಶಾಖೆಯು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ

ದ್ವಾರಕೀಶ್ ಗಾಡ್ ಫಾದರ್ ಆಗಿದ್ದರು ಚಿತ್ರದುರ್ಗದ ಜಾಫರ್ ಶರೀಫ್ : ಜಾಫರ್ ನಿಧನದ ದಿನ ದ್ವಾರಕೀಶ್ ಏನ್ ಹೇಳಿದ್ರು ಗೊತ್ತಾ..?

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಇಂದು ದ್ವಾರಕೀಶ್ ಅವರು ಇಲ್ಲ. ಜಾಫರ್ ಶರೀಫ್ ಅವರೂ ಇಲ್ಲ. ಆದರೆ ಅವರಿಬ್ಬರ ಬಾಂಧವ್ಯ ಗಟ್ಟಿಯಾಗಿತ್ತು. ಆತ್ಮೀಯತೆ ಹೆಚ್ಚಾಗಿತ್ತು. ಅಣ್ಣ ತಮ್ಮಂದಿರಂತೆ ಸಂಬಂಧ ಹೊಂದಿದ್ದವರು. ವಯೋಸಹಜ ಕಾಯಿಲೆಯಿಂದ

50 ಸಾವಿರ ಗಡಿದಾಟಿದ ಅಡಿಕೆ ಧಾರಣೆ : ರೈತರ ಮೊಗದಲ್ಲಿ ಸಂತಸ

ದಾವಣಗೆರೆ: ಅಡಿಕೆ ದರ ದಿನೇ ದಿನೇ ಏರಿಕೆ ಇಳಿಕೆಯಾಗುತ್ತಲೆ ಇದೆ. ಕಳೆದ ಕೆಲವು ತಿಂಗಳಿನಿಂದ ಒಂದೇ ರೀತಿಯಿದ್ದ ಅಡಿಕೆ ಬೆಲೆ ಕಂಡು ರೈತರು ನಿರಾಸೆಗೊಂಡಿದ್ದರು. ಆದರೆ ಇದೀಗಕ್ವಿಂಟಾಲ್ ಅಡಿಕೆ ಬೆಲೆ 50 ಸಾವಿರ ಗಡಿ

error: Content is protected !!