ಬೇಸಿಗೆ ಇನ್ನು ಮುಗಿದಿಲ್ಲ. ಆದರೆ ಆಗಲೇ ಮಳೆ ಶುರುವಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಣ್ಣನೆಯ ಗಾಳಿ ಬೀಸಿದಂತಾಗಿದೆ. ಇನ್ನು ಮಳೆರಾಯ ನಾಳೆಯೂ ದರ್ಶನ ಕೊಡಲಿದ್ದಾನೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು – ಬಿರುಗಾಳಿ ಹಾಗೂ ಮಳೆಯ ಅಬ್ಬರ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಚಂಡಮಾರುತ. ತಮಿಳುನಾಡು ಹಾಗೂ ನೆರೆಹೊರೆಗಳಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತ ಇದೆ. ಇನ್ನೊಂದೆಡೆ ದಕ್ಷಿಣ ಅಂಡಮಾನ್ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆ ಇದೆ. ಹೀಗಾಗಿ ರಾಜ್ಯದ ಹಕವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ವಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಬೇರೆ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿನೆ ಇರಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಕ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.
ಇನ್ನು ನಾಳೆಯಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ. ಏಪ್ರಿಲ್ 5ರ ತನಕ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಹಗುರವಾದ ಮಳೆಯಾಗಲಿದೆ. ಆದರೂ ಹೊರಗೆ ಹೋಗುವವರು ಕೊಂಚ ಎಚ್ಚರದಿಂದ ಇರುವುದು ಒಳಿತು. ಮುಂಜಾಗ್ರತ ಕ್ರಮವಾಗಿ ಕೊಡೆಯನ್ನ ತೆಗೆದುಕೊಂಡು ಹೋಗಿ. ವಾಹನ ಸವಾರರಂತು ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವಗ ಮಳೆಯಾಗಲಿದೆ ಅನ್ನೋದೆ ತಿಳಿಯುವುದಿಲ್ಲ. ಹೀಗಾಗಿ ಮಳೆಯಿಂದ ಬಚಾವ್ ಆಗುವುದಕ್ಕೆ ಸಾಧ್ಯವಾದಷ್ಟು ರೇನ್ ಕೋಟ್ ಎಲ್ಲಾ ತೆಗೆದುಕೊಂಡು ಹೋಗಿ.
ಸಾಕಷ್ಟು ವೀಕ್ಷಕರು ಕಾಯುತ್ತಾ ಇದ್ದ ದಿನ ಬಂದೇ ಬಿಟ್ಟಿದೆ. ವೈಷ್ಣವಿ ಗೌಡ ಮದುವೆ ಆಗ್ತಾ ಇದಾರೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ಸನ್ನಿದಿಯಾಗಿ…
ಸುದ್ದಿಒನ್ : ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸದಿರುವುದು, ಕಡಿಮೆ ಫೈಬರ್…
ಈ ರಾಶಿಯ ನೌಕರರಿಗೆ ಧನ ಪ್ರಾಪ್ತಿ ಯೋಗ, ಉದ್ಯೋಗದಲ್ಲಿ ಪ್ರಮೋಷನ್ ಭಾಗ್ಯ, ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ, ಮಂಗಳವಾರದ…
ಸುದ್ದಿಒನ್ : ಹರಿಯಾಣದ ಕೈಥಾಲ್‌ನ ರಾಂಪಾಲ್ ಕಶ್ಯಪ್, 14 ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೂ ಶೂ ಧರಿಸುವುದಿಲ್ಲ ಎಂದು…
ಬೆಂಗಳೂರು; ಇಂದು ಕೂಡ ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಮಧ್ಯಾಹ್ನದ ವೇಳೆಗೆ ವಾತಾವರಣ ತಣ್ಣಗಾಗಿತ್ತು. ಸಂಜೆ ವೇಳೆಗೆ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 14 :…