ಬಾಗಲಕೋಟೆ: ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ, ಮಲಪ್ರಭಾ ನದಿ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಗೋವನ ಕೊಪ್ಪ ಬಳಿಯ ಹಳೆಯ ಸೇತುವೆ ಜಲಾವೃತವಾಗಿದೆ. ನದಿ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದಿದ್ದ ಕಬ್ಬು, ತೋಟಗಾರಿಕಾ ಬೆಳೆ ನೀರನಿಂದ ಆವೃತವಾಗಿದೆ.
ಇನ್ನು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಬಾರೀ ಮಳೆಯಿಂದಾಗಿ ಶಾಲಾ ಕಟ್ಟಡ ಕುಸಿದು ಬಿದ್ದಿದೆ. ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲಾ ಕಟ್ಟಡ ಕುಸಿದು ಬಿದ್ದಿದ್ದರು ಶಿಕ್ಷಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಶಿಥಿಲಗೊಂಡ ಕಟ್ಟಡದಲ್ಲಿಯೇ ಮಕ್ಕಳಿಗೆ ಪಾಠ ನಡೆಯುತ್ತಿದೆ. ಈ ಸಂಬಂಧ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಳೆ ನಿಂತರು ಪರದಾಟ ಮಾತ್ರ ನಿಂತಿಲ್ಲ. ಸೇತುವೆ ಕುಸಿದು ಮುಕ್ಕೊಡ್ಲು – ಹೆಮ್ಮತ್ತಾಳು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಮೂರು ವರ್ಷಗಳ ಹಿಂದೆಯೇ ಪ್ರವಾದಿಂದಾಗಿ ಈ ಸೇತುವೆ ಕುಸಿದು ಬಿದ್ದಿತ್ತು. ಪ್ರಾಣ ಪಣಕ್ಕಿಟ್ಟು ಗ್ರಾಮಸ್ಥರು ಸೇತುವೆ ದಾಟುತ್ತಾರೆ. ಶಾಸಕ ಅಪ್ಪಚ್ಚು ರಂಜನ್ ಕ್ಷೇತ್ರದಲ್ಲಿಯೇ ಇಂಥಹ ಸ್ಥಿತಿ ಇದೆ.