ಸೇನಾ ಸಿಬ್ಬಂದಿ ಪಾರ್ಥಿವ ಶರೀರ ರವಾನಿಸುತ್ತಿದ್ದ ಅಂಬುಲೆನ್ಸ್ ಅಪಘಾತ..!

ಚೆನ್ನೈ: ನಿನ್ನೆ ನಡೆದ ದುರಂತ ಎಲ್ಲರನ್ನು ಮೂಕರನ್ನಾಗಿಸಿದೆ. ಯಾಕಿಂತ ಸಾವು ಎಂಬ ಪ್ರಶ್ನೆ ಮೂಡುವಂತೆ ಮಾಡದೆ. ಯಾಕಂದ್ರೆ ಆ ಜಾಗದಲ್ಲಿ ಉಸಿರು ಚೆಲ್ಲಿದವರು ಈ ದೇಶದ ಸೇನೆ ನೋಡಿಕೊಳ್ಳುತ್ತಿದ್ದ ಮುಖ್ಯಸ್ಥ ಬಿಪಿನ್ ರಾವತ್. ಅವರ ಜೊತೆಗೆ 11 ಮಂದಿ ಸೇನಾ ಸಿಬ್ಬಂದಿಯೂ ನಿಧನರಾದರೂ. ಈ ಘಟನೆಯಲ್ಲಿ ಮಡಿದವರ ಪಾರ್ಥಿವ ಶರೀರವನ್ನ ರವಾನಿಸುತ್ತಿದ್ದ ವೇಳೆ ಆ್ಯಂಬುಲೆನ್ಸ್ ಕೂಡ ಅಪಘಾತಕ್ಕೀಡಾದ ಘಟನೆ ತಮಿಳುನಾಡಿನ ಮೆಟ್ಟುಪಾಳಯಂ ನಲ್ಲಿ ನಡೆದಿದೆ.

ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ಪತನಗೊಂಡಿತ್ತು. ಬಳಿಕ ಅಲ್ಲಿಂದ ಪಾರ್ಥಿವ ಶರೀರಗಳನ್ನ ಆಂಬುಲೆನ್ಸ್ ಮೂಲಕ ಸೂಳೂರು ಏರ್ ಬೇಸ್ ಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಬೆಂಗಾವಲು ಪಡೆ ವಾಹನ ಅಪಘಾತಕ್ಕೀಡಾಗಿದ್ದು, ಪ್ರಾರ್ಥಿವ ಶರೀರ ಹೊತ್ತ ಆ್ಯಂಬುಲೆನ್ಸ್ ಕೂಡ ಅಪಘಾತಕ್ಕೀಡಾಗಿದೆ. ರಸ್ತೆ ಬದಿಯ ಗುಡ್ಡಕ್ಕೆ ಆಂಬುಲೆನ್ಸ್ ಗುದ್ದಿದೆ. ಮುಂಭಾಗ ಸಂಪೂರ್ಣ ಜಖಂ ಆಗಿದೆ. ಪಾರ್ಥೀವ ಶರೀರಗಳನ್ನ ಬೇರೆ ವಾಹನಕ್ಕೆ ಶಿಫ್ಟ್ ಮಾಡಿ ಸಾಗಿಸಲಾಗಿದೆ. ಹೀಗಾಗಿ ಸಂಚಾರ ತಡವಾಗಿದೆ.

ಈ ಘಟನೆಯಿಂದ ಅಲ್ಲಿದ್ದ ಏಳು ಮಂದಿ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Share This Article
Leave a Comment

Leave a Reply

Your email address will not be published. Required fields are marked *