Connect with us

Hi, what are you looking for?

ಪ್ರಮುಖ ಸುದ್ದಿ

ಬ್ರಿಟನ್ ನಲ್ಲಿ ಹಬ್ಬುತ್ತಿರುವ ಅಪಾಯಕಾರಿ ವೈರಸ್, ತುರ್ತು ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾಗೆ ಇನ್ನೇನು ಲಸಿಕೆ ಸಿಕ್ಕೆ ಬಿಡ್ತು ಅನ್ನೋ ಸಂತಸದಲ್ಲಿದ್ದ ಜನರಿಗೆ ಬ್ರಿಟನ್ ನಲ್ಲಿ ಹರಡುತ್ತಿರುವ ಹೊಸ ಕೋವಿಡ್ ತಲೆ ನೋವಾಗಿ ಪರಿಣಮಿಸಿದೆ. ಬ್ರಿಟನ್ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಶೇಕಡ 70 ಹೆಚ್ಚು ಅಪಾಯಕಾರಿಯಾಗಿದೆ. ಹೀಗಾಗಿ ಕಾರಣಕ್ಕೆ ಕೇಂದ್ರ ಸರ್ಕಾರ ತುರ್ತು ಸಭೆಯನ್ನು ಆಯೋಜಿಸಿದೆ. ಆರೋಗ್ಯ ಸಚಿವಾಲಯದ ಜಾಯಿಂಟ್ ಮಾನಿಟರಿಂಗ್ ಗ್ರೂಪ್ನ ಸದಸ್ಯರ ತುರ್ತುಸಭೆ ಕರೆದಿದೆ.

ಬ್ರಿಟನ್ನಲ್ಲಿ ಹೊಸ ಮಾದರಿಯ ಕೋವಿಡ್ 19 ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಕಾರಣ ಅಲ್ಲಿನ ಸರ್ಕಾರ ಈಗಾಗಲೇ ಕಠಿಣ ನಿರ್ಬಂಧಗಳನ್ನು ಹೇರಿದೆ. ಲಂಡನ್ ಮತ್ತು ಸದರ್ನ್ ಇಂಗ್ಲೆಂಡ್ ಪ್ರದೇಶಗಳಲ್ಲಿ ಮತ್ತೊಂದು ಆವೃತ್ತಿ ಬಹುತೇಕ ಲಾಕ್ಡೌನ್ ಸ್ಥಿತಿ ನಿರ್ಮಾಣವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಈ ಕಾರಣ ಕೇಂದ್ರ ಸರ್ಕಾರ ಮುಂಜಾಗ್ರತ ಕ್ರಮವಾಗಿ ಸಭೆ ಕರೆದಿದ್ದು, ಈ ಸಭೆಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಡಾ.ರೊಡೆರಿಕೋ ಎಚ್ ಓಫ್ರಿನ್ ಅವರು ಭಾಗವಹಿಸಲಿದ್ದಾರೆ. ಇವರು ಕೂಡ ಜಾಯಿಂಟ್ ಮಾನಿಟರಿಂಗ್ ಗ್ರೂಪಿನ ಸದಸ್ಯರಾಗಿರುತ್ತಾರೆ. ಸಭೆಯಲ್ಲಿ ಬ್ರಿಟನ್ನಲ್ಲಿ ಉದ್ಭವಿಸಿರುವ ಹೊಸ ಮಾದರಿ ಕೋವಿಡ್ 19 ಸೋಂಕಿನ ವಿಚಾರ ಚರ್ಚಿಸಲ್ಪಡಲಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಅವರ ಪ್ರತಿಭಟನೆಗೆ ಪಾಕಿಸ್ತಾನ ಮೂಲದ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಬೆಂಬಲ ಸೂಚಿಸಿದ್ದಾರೆ. ಜೈಪುರ...

ಪ್ರಮುಖ ಸುದ್ದಿ

ನವದೆಹಲಿ: ದೇಶದೆಲ್ಲೆಡೆ ಕೊರೊನಾ‌ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ಮೊದಲ ಹಂತ ಮುಗಿದಿದ್ದು, ಎರಡನೇ ಹಂತದ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಿದೆ. ಇದೀಗ ಪ್ರಧಾನ ಮಂತ್ರಿ ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ಇಂದು ಪ್ರಧಾನಿ...

ಪ್ರಮುಖ ಸುದ್ದಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಹಣ ಸಂಗ್ರಹಿಸಲಾಗುತ್ತಿತ್ತು. ಈ ವಿಚಾರ ರಾಜಕೀಯ ವ್ಯಕ್ತಿಗಳ ಕಿತ್ತಾಟಕ್ಕೂ ಕಾರಣವಾಯ್ತು. ಇದೀಗ 44 ದಿನಗಳ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿದ್ದ ಕೆಲಸ ಮುಕ್ತಾಯವಾಗಿದೆ....

ಪ್ರಮುಖ ಸುದ್ದಿ

ನವದೆಹಲಿ : ಮಾರ್ಚ್‌ನಲ್ಲಿ ದೇಶಾದ್ಯಂತದ ಬ್ಯಾಂಕುಗಳಿಗೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜಾ ದಿನಗಳು ಸೇರಿದಂತೆ ಒಟ್ಟು 11 ದಿನಗಳ ಕಾಲ ರಜೆ ಬಂದಿದೆ . ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಇಯರ್...

ಪ್ರಮುಖ ಸುದ್ದಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸೃಷ್ಟಿಸುತ್ತಿರುವ ಅವಾಂತರ ಹೆಚ್ಚಾಗಿದೆ. ಸಾಮಾಜಿಕ ಸ್ವಾಸ್ಥದ ದೃಷ್ಟಿಯಿಂದ ಚಿಂತನೆ ನಡೆಸಿದ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್...

ಪ್ರಮುಖ ಸುದ್ದಿ

8 ಕೋಟಿ ಜನರು ಭಾಗವಹಿಸುವ ಸಾಧ್ಯತೆ ರೈತರ ಮಾಡಿದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ದಿಗ್ಬಂಧನಗೊಳಿಸುವ ಯೋಜನೆ ಪೆಟ್ರೋಲಿಯಂ ಬೆಲೆಗಳು, ಇ-ವೇ ಬಿಲ್ ನಿಬಂಧನೆಗಳ ವಿರುದ್ಧ ಪ್ರತಿಭಟನೆ ನವದೆಹಲಿ:  ದಿನದಿಂದ ದಿನಕ್ಕೆ ಏರುತ್ತಿರುವ, ಶತಕದ...

ಪ್ರಮುಖ ಸುದ್ದಿ

ನವದೆಹಲಿ : ಯೋಗ ಗುರು ಮತ್ತು ಪತಂಜಲಿ ಸಂಸ್ಥೆಯ ಸಂಸ್ಥಾಪಕ ರಾಮದೇವ್ ಬಾಬಾ ಅವರನ್ನು ಬಂಧಿಸುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.  ಕರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಪತಂಜಲಿ ಇತ್ತೀಚೆಗೆ ‘ಕೊರೊನಿಲ್’ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಈ...

ಪ್ರಮುಖ ಸುದ್ದಿ

ವಾರದಲ್ಲಿ 87 ಸಾವಿರ ಹೊಸ ಪ್ರಕರಣಗಳು ವ್ಯಾಕ್ಸಿನೇಷನ್ ತ್ವರಿತಗೊಳಿಸಲು ರಾಜ್ಯಗಳಿಗೆ ಕೇಂದ್ರ ಪತ್ರ ಮತ್ತೊಮ್ಮೆ ಲಾಕ್‌ಡೌನ್ ನತ್ತ ಮಹಾರಾಷ್ಟ್ರ ಸರ್ಕಾರದ ಚಿತ್ತ ಜನರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದ ಆರೋಗ್ಯ ಇಲಾಖೆ ನವದೆಹಲಿ: ಕರೋನಾ...

ಕ್ರೀಡಾ ಸುದ್ದಿ

ಚೆನ್ನೈ : ಐಪಿಎಲ್ 2021 ಮಿನಿ ಹರಾಜಿನಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮೌನ...

error: Content is protected !!