ನವದೆಹಲಿ : ನಿನ್ನೆ ಮಧ್ಯಾಹ್ನದ ವೇಳೆ ದೇಶದ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಇದ್ದಂತ ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಕಾಡಿನಲ್ಲಿ ಹೆಲಿಕಾಪ್ಟರ್ ಬಿದ್ದಾಗ ಬಿಪಿನ್ ಇನ್ನು ಜೀವಂತವಾಗಿದ್ದರು. ಆದ್ರೆ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದರು ಅವರು ಬದುಕುಳಿಯಲಿಲ್ಲ.
ಅಪಘಾತ ನಡೆದಾಗ ಅಲ್ಲಿದ್ದ ಸ್ಥಳೀಯರು ಹೆಲಿಕಾಪ್ಟರ್ ನಿಂದ ಹೊರ ಬಿದ್ದವರನ್ನ ಬದುಕುಳಿಸುವ ಯತ್ನ ಮಾಡಿದ್ರು. ಆ ಘಟನೆಯನ್ನ ಕಣ್ಣಾರೆ ಕಂಡವರೊಬ್ಬರು ಖಾಸಗಿ ಚಾನೆಲ್ ವೊಂದಕ್ಕೆ ಮಾತನಾಡಿದ್ದಾರೆ. ಅವರು ಹೇಳಿದ್ದು ಹೀಗೆ. ಮಧ್ಯಾಹ್ನದ ಸಮಯದಲ್ಲಿ ಭಾರೀ ಶಬ್ಧ ಕೇಳಿಸಿತು. ಆಗ ಹೊರ ಬಂದು ನೋಡಿದಾಗ, ಹೆಲಿಕಾಪ್ಟರ್ ಮರದ ಕೊಂಬೆಗಳಿಗೆ ತಾಗಿ ಬಿದ್ದು ಬೆಂಕಿ ಹೊತ್ತಿಕೊಂಡಯ ಉರಿಯುತ್ತಿತ್ತು.
ತಕ್ಷಣ ಅಲ್ಲಿಗೆ ಓಡಿದೆವು. ಚೀರಾಟದ ಸದ್ದು ಕೇಳುತ್ತಿತ್ತು. ಹೊರಗೆ ಬಿದ್ದವರನ್ನ ರಕ್ಷಿಸಲು ಮುಂದಾಗಿದ್ದರಂತೆ. ಈ ಸಮಯದಲ್ಲಿ ಜನರಲ್ ಬಿಪಿನ್ ಆ ವ್ಯಕ್ತಿಯ ಬಳಿ ನೀರು ಕೇಳಿದ್ದರಂತೆ. ನೀರು ತರುವಷ್ಟರಲ್ಲಿ ಸೇನಾಧಿಕಾರಿಗಳು ಅವರನ್ನ ಆಸ್ಪತ್ರೆಗೆ ದಾಖಲಿಸಿಲು ಕರೆದುಕೊಂಡು ಹೊಇದರು ಎಂದು ಅಲ್ಲಿನ ಘಟನೆಯನ್ನ ವಿವರಿಸಿದ್ದಾರೆ.