in

ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ : ಹೆಚ್ ಡಿ ಕುಮಾರಸ್ವಾಮಿ

suddione whatsapp group join

ಬೆಂಗಳೂರು: ಕಲಬುರಗಿ‌ ಮಹಾನಗರ ಪಾಲಿಕೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಈಗ ಕಾಂಗ್ರೆಸ್ ಪರಿಸ್ಥಿತಿ ದಯನೀಯವಾಗಿದೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಅವರು ಜೆಡಿಎಸ್ ಪಕ್ಷವನ್ನ ಮುಗಿಸಲು ಹೊರಟಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆ ವಿಚಾರದಲ್ಲಿ ನಮ್ಮ ನಿರ್ಧಾರವನ್ನ ನಾವೀನ್ನು ತಿಳಿಸಿಲ್ಲ. ನಮಗೆ ಸ್ಥಳೀಯ ಮಟ್ಟದಲ್ಲಿ ಅಧಿಕಾರ ಹಿಡಿಯೋದು ಮುಖ್ಯವಲ್ಲ ಎಂದಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಕೇವಲ ಸ್ಥಳೀಯ ವಿಚಾರಕ್ಕಷ್ಟೇ ಮಾತನಾಡಿದ್ದಾರೆ. ಅದು ಸ್ಥಳೀಯ ತೀರ್ಮಾನವಷ್ಟೇ, ರಾಜ್ಯಮಟ್ಟದ ತೀರ್ಮಾನವಲ್ಲ. ಖರ್ಗೆ ಮಾತಾಡಿದ ತಕ್ಷಣ ರಾಜ್ಯ ಕಾಂಗ್ರೆಸ್ ತೀರ್ಮಾನವಾಗೋದಿಲ್ಲ. ಅವರ ಪಕ್ಷದ ಶಾಸಕಾಂಗ ನಾಯಕರೇನು ಆಕಾಶದಲ್ಲಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನವರು ಈಗಲೇ ಅಧಿಕಾರಕ್ಕೆ ಬಂದು ಬಿಡುತ್ತೇವೆಂಬ ಭ್ರಮೆಯಲ್ಲಿದ್ದಾರೆ. ನಾವೇನು ಅವರ ಅಡಿಯಾಳುಗಳಾ..? ಖರ್ಗೆಯವರದ್ದು ವೈಯಕ್ತಿಕ ಮನವಿಯಷ್ಟೇ..ಕಾಂಗ್ರೆಸ್ ನಾಯಕರ ಮನವಿಯಲ್ಲ ಎಂದು ಗುಡುಗಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸೆಪ್ಟೆಂಬರ್ 20ಕ್ಕೆ ನೀನಾಸಂ ಸತೀಶ್ ಅಭಿನಯದ ಪೆಟ್ರೋ ಮ್ಯಾಕ್ಸ್ ಟ್ರೈಲರ್ ರಿಲೀಸ್

ನಿವೃತ್ತಿ ಘೋಷಿಸಿದ ಶ್ರೀಲಂಕಾ ಹಿರಿಯ ವೇಗಿ ಮಲಿಂಗ