ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಏನಂದ್ರು..?

suddionenews
2 Min Read

 

ಬೆಂಗಳೂರು: ಕಾಂಗ್ರೆಸ್ ನಾಯಕರ ಆಂತರಿಕ ಸಮೀಕ್ಷೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆ ಗೆಲುವು ಎನ್ನುವುದಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಆಂತರಿಕ ವರದಿ ನೋಡಿದ್ದೇನೆ. ಆ ವರದಿಯಲ್ಲಿ ಮೂರು ರೀತಿ ಪ್ರತಿಕ್ರಿಯೆ ಇದೆ. ಕಾಂಗ್ರೆಸ್ ನಾಯಕರ ಪರಿಸ್ಥಿತಿ ಏನಿದೆ ಅಂತ ಗೊತ್ತಿದೆ. ಬಿಎಸ್ ವೈ ಅವರ ಮುಂದಿನ ನಡೆ ಮೇಲೆ ಅವರು ಅವಲಂಬಿಸಿದ್ದಾರೆ. ಅವರ ಮುಂದೆ ಏನು ಮಾಡ್ತಾರೆ ಅನ್ನೋದನ್ನ ನೋಡಿಕೊಂಡು ಹೀಗೆ ಮಾಡ್ತಾ ಇದ್ದಾರೆ. ಹಿಂದೆ ಬಿಎಸ್ ವೈ ಬೇರೆ ಪಕ್ಷ ಮಾಡಿದ್ದ ದಿನದ ಲೆಕ್ಕಾಚಾರ ಹಾಕಿದ್ದಾರೆ. ನಾವು ಒಂದು ಸ್ಥಾನ ಇಲ್ಲದೇ ಇದ್ದಾಗಲೂ ನಾವು ಗೆದ್ದಿದ್ದೇವೆ. ಎಮ್ ಎಲ್ ಸಿ ಚುನಾವಣೆ ಬೇರೆ ಎಮ್ ಎಲ್ ಎ ಚುನಾವಣೆ ಬೇರೆ. ಅವರು ಆಂತರಿಕ ಸಮೀಕ್ಷೆ ಮಾಡಲಿ. ನಮಗೆ ಯಾವುದೇ ಆತಂಕ ಇಲ್ಲ. ನಾವು ನಮ್ಮ ಗುರಿ ಮುಟ್ಟುತ್ತೇವೆ. ಅವರ ಆಂತರಿಕ ಸಮೀಕ್ಷೆ ಬಗ್ಗೆ ಮಾತಾಡಲ್ಲ. ಅವರ ಒಳ ಒಪ್ಪಂದ ರಾಜ್ಯಸಭೆಯಲ್ಲಿ ಆಯ್ತು. ಬಿಟೀಂ ಅನ್ನೋದು ಯಾರು ಅಂತ ಗೊತ್ತಾಗಿದೆ.

ಎಸಿಬಿ ಗೆ ಕೋರ್ಟ್ ಚಾಟಿ ವಿಚಾರವಾಗಿ ಮಾತನಾಡಿ, ಈ ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿಯಿಂದಾಗಲಿ ನಡೆದ ದಾಳಿ ಪ್ರಯೋಜನವಿಲ್ಲ. ಸಾವಿರಾರು ದಾಳಿ ಆಗಿದೆ. ಎಷ್ಟು ಜನರ ಮೇಲೆ ಆಕ್ಷನ್ ಆಗಿದೆ. ರಾಜ್ಯದ ಗೌರವಾನ್ವಿತ ನ್ಯಾಯಾಲಯದಲ್ಲಿ ಎಸಿಬಿ ಮುಖ್ಯಸ್ಥರೇ ಭ್ರಷ್ಟರು ಅಂತ ಹೇಳಿದ್ದಾರೆ. ಇದಕ್ಕಿಂತ ನಾಚಿಕೆಪಡುವ ಪ್ರಸಂಗ ಮತ್ತೊಂದಿಲ್ಲ.

ಎಡಿಜಿಪಿನೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಅಂತಾರೆ ಅಂದ್ರೆ ಏನಿದೆ. ಕೆಜಿ, ರಾಶಿಗಟ್ಟಲೆ ಚಿನ್ನ ಬೆಳ್ಳಿ ತೋರಿಸ್ತಾರೆ. ಯಾವುದಾದ್ರೂ ಒಂದು ಕ್ರಮ ಆಗಿದೆಯಾ ಅಧಿಕಾರಿಗಳ ಮೇಲೆ. ರಾಜಕಾರಣಿಗಳ ಮೇಲೆ ಅಥವಾ ಚಿಕ್ಕ ಪುಟ್ಟ ಕೆಲಸದವರು ಸಿಕ್ತಾರೆ. ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡಿದೆ. ಮಂಡ್ಯ, ರಾಮನಗರ ಪ್ರಾಧಿಕಾರ ದಲ್ಲಿ ಕೋಟಿಗಟ್ಟಲೆ ಆಯ್ತಲಾ. ಒಂದು ರೂಪಾಯಿಯಾದ್ರೂ ವಾಪಸ್ ಬಂತ. ಸರ್ಕಾರಿ‌ ಭೂಮಿ ವಾಪಸ್ ಬಂತಾ..?.

ಇದು ಈ ರಾಜ್ಯದ ವ್ಯವಸ್ಥೆ. ಇದು ಆಶ್ವರ್ಯ ವಿಚಾರ ಅಲ್ಲ ನಿರಂತರ ನಡೆದುಕೊಂಡು ಬರ್ತಾ ಇದೆ. ಸಿದ್ದರಾಮಯ್ಯ ಸಿಎಂ ಆದಾಗ ಒಬ್ಬ ಐಎಎಸ್ ಅಧಿಕಾರ ಮನೆ ಮೇಲೆ 5 ಕೋಟಿ ಸೀಸ್ ಆಯ್ತು. ಮನೆಗೆ ಕಳ್ಸಿದ್ರಾ ಆಗ, ಹುನ್ನತ ಹುದ್ದೆ ಕೊಟ್ಟಿದ್ದಾರೆ. ಮುಂದಿನ ದಿನ ಜನತೆ ಮುಂದೆ ಇಡ್ತೀವಿ. ಲೋಕಾಯುಕ್ತ, ಎಸಿಬಿ ಕ್ಲೋಸ್ ಮಾಡಿ‌ ಅನ್ನಲ್ಲ. ಆದರೆ ಪ್ರಾಮಾಣಿಕ ಅಧಿಕಾರಿಗಳು ಇರಬೇಕು. ಯಾರ ಹಸ್ತಕ್ಷೇಪ ಇಲ್ಲದಂತೆ ಅಧಿಕಾರ ಮಾಡಬೇಕು.

 

ಸಿದ್ದರಾಮಯ್ಯ ಅವರ ಸಂಪರ್ಕ ದಲ್ಲಿ ವಿಶ್ವಾಸದಲ್ಲಿ ಇರಬಹುದು. ಆದರೆ ಅವರಲ್ಲೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರ ಬರುತ್ತದೆ. ದೇಶದಲ್ಲಿ ಮುಳುಗಿ‌ಹೋದ ಹಡಗಿನಲ್ಲಿ ಹೋದರೆ ಏನು ಪ್ರಯೋಜನ. ವಾಸ್ತವಾಂಶ ಹೇಳ್ತಾ ಇದಿನಿ. 123 ಗುರಿಯಲ್ಲಿ ಹಲವಾರು ಸಮಸ್ಯೆ ಇವೆ ಇಲ್ಲ ಅಂತ ಹೇಳಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *