ಅಂದು ನನಗೆ ಪುಷ್ಪಾರ್ಚನೆ ಮಾಡಿದವರೇ ನಂತರ ನನ್ನ ಮರೆತರು : ಮಾಜಿ ಸಿಎಂ ಕುಮಾರಸ್ವಾಮಿ ಬೇಸರ

2 Min Read

 

ಬೆಂಗಳೂರು ನಗರದ ಅಭಿವೃದ್ಧಿ ಹೆಸರಿನಲ್ಲಿ ನಾಗರೀಕರ ತೆರಿಗೆ ಹಣ ಲೂಟಿ ಆಗ್ತಾ ಇದೆ. ಚಂಬಲ್ ಕಣಿವೆಯ ರೀತಿ ಹಣ ಲೂಟಿ ಆಗ್ತಾ ಇದೆ. ಜನರ ನೋವಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಈ ಕಾರ್ಯಕ್ರಮಿದೆ. ಜನತಾ ಮಿತ್ರ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಲಾಗ್ತಿದೆ. 15 ವಾಹನಗಳಿಗೆ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

 

ನಗರದ ನಾಗರೀಕರಿಗೆ ಈ‌ ನಗರದ ಬೆಳವಣಿಗೆ ಹಾಗೂ ಇದಕ್ಕೆ ಕಾರಣ ಏನು ಕೊಡುಗೆ ಕೊಟ್ಟಿದ್ದಾರೆ ಅದನ್ನು ಹೇಳಲಾಗುತ್ತದೆ. ನಮಗೆ ಶಕ್ತಿ ಇಲ್ಲ ಅನ್ನೋದನ್ನ ಮೊದಲು ತೆಗೆದು ಹಾಕಿ. ಬೆಂಗಳೂರು ನಗರದ ನಾಗರೀಕರ ಮತ ಪಡೆಯಲು ನೀವು ನಾಯಕರಾಗಿ ಮೊದಲು. ಒಂದಿಷ್ಟು ಲೋಪಗಳು ನಿಮ್ಮಲ್ಲು ಇದೆ ಅನ್ಸುತ್ತೆ. ಹಾಗಾಗಿ ಮೊದಲು ಅದನ್ನು ತೆಗದು ಹಾಕಿ. ಒಂದೊಂದು ಕ್ಷೇತ್ರದ್ದು ವಿವರಣೆ ಕೊಡಬಲ್ಲೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ದಾಸರಹಳ್ಳಿಯಲ್ಲಿ ಕಾರ್ಯಕರ್ತರು ದುಡಿದಿದ್ದಾರೆ. ಒಂದು ಕಾಲದಲ್ಲಿ ನಮ್ಮ ಪಕ್ಷಕ್ಕೆ ಚಾಮರಾಜಪೇಟೆಲಿ ಮೂರು ಸಾವಿರ ಮತ ಇತ್ತು. ಆದರೆ ಒಂದು ಉಪ ಚುನಾವಣೆಯಲ್ಲಿ ದೇವೇಗೌಡರು ಸಭೆ ಮಾಡಿ‌ದ ನಂತರ ಕ್ಷೇತ್ರ ಗೆದ್ದರು. ಕುಮಾರಸ್ವಾಮಿ ಸಿಎಂ ಆಗೋದು ಮುಖ್ಯವಲ್ಲ. ದೈವ ಕೃಪೆಯಿಂದ 37 ಕ್ಷೇತ್ರದಲ್ಲಿ ಗೆದ್ದು ಎರಡು ಬಾರಿ ಸಿಎಂ ಆಗಿದ್ದೀನಿ. ಲೂಟಿಯನ್ನು ತಪ್ಪಿಸೋದಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು.

ನಮ್ಮ ಪಕ್ಷದ ಕಾರ್ಯಕರ್ತರು ಅಕ್ರಮವಾಗಿ ಬಂದವರಲ್ಲ. ಅಕ್ರಮವಾಗಿ ಹಣ ಮಾಡಿಲ್ಲ. ಬೆಂಗಳೂರು ನಗರದಲ್ಲಿ ಈ ಕಾರ್ಯಕ್ರಮ 16 ದಿನಗಳ ಕಾಲ ನಡೆಯಲಿದೆ. ಅದಕ್ಕೆ ನಿಮ್ಮ ದುಡುಮೆ ಮುಖ್ಯವಾಗಿದೆ. 1983-84 ರಲ್ಲಿ ನಗರದ ಕೆರೆ ಉಳಿಸಲು ಹೊರಟರು. ಬೆಂಗಳೂರು ನಗರ ಸಿಂಗಾಪೂರ್ ಮಾಡಲು ಹೊರಟವರು. ಬಡಾವಣೆ ರಚನೆ ಮಾಡ್ತೀವಿ ಅಂದವರು ಕೆರೆ ನಾಶ ಮಾಡಿದ್ರು. ಸಿಂಗಪೂರ್ ಮಾಡಲು ಹೊರಟವರು ಇದಕ್ಕೆ ಕಾರಣ.

ಧರ್ಮಸಿಂಗ್ ಕಾಲದಲ್ಲಿ ಮನೆಗಳಲ್ಲಿ ನೀರು ತುಂಬಿತ್ತು. ಅಂದು ನಾನು ಸಿಎಂ ಆದಾಗ ನಾನು ತೆಗದುಕೊಂಡ ನಿರ್ಧಾರ ಇಂದು ಎಷ್ಟು ಉಪಯೋಗ ಆಯ್ತು. ಇಂದಿಗೂ ನೀರು ತುಂಬುತ್ತಿಲ್ಲ ಅಲ್ಲಿ. ಅಂದು ನನಗೆ ಪುಷ್ಪಾರ್ಚನೆ ಮಾಡಿದ್ರು ಆದರೆ ನಂತರ ನನ್ನ ಮರೆತರು ಎಂದು ಬೇಸರ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *