ಹಾಸನ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಟಫ್ ಕಾಂಪಿಟೇಷನ್ ಇದೆ. ಪ್ರೀತಂ ಗೌಡರನ್ನು ಸೋಲಿಸಬೇಕೆಂದು ಭವಾನಿ ರೇವಣ್ಣ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದೀಗ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಹಾಸನ ಜನತೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ, ನಮ್ಮ ತಂದೆ ತಾಯಿ ಶಿಕ್ಷಕರಾಗಿದ್ದರು. ಹಾಸನದ ಜನತೆ ವಡ್ಡ ಜನಗಳು. ಅವರಿಗೆ ಸ್ವಲ್ಪ ಬುದ್ದಿ ಕಡಿಮೆ. ಮಂಗಳೂರಿನವರನ್ನು ನೋಡಿ ಬುದ್ಧಿ ಕಲಿತುಕೊಳ್ಳಿ ಎಂದು ಹೇಳಿದ್ದರು ಎನ್ನಲಾದ ಪ್ರೀತಂ ಗೌಡ ಅವರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ. ಒಂದು ಭಾಷೆ, ಜನಾಂಗ, ಊರಿನ ಬಗ್ಗೆ ಹೊಗಳಬೇಕು ನಿಜ. ಆದರೆ ಮಾನಗೆಟ್ಟವರಂತೆ ನಮ್ಮ ಊರನ್ನೇ ಧಿಕ್ಕರಿಸುವ ರೀತಿಯಲ್ಲಿ ಕೀಳಾಗಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಜೆಡಿಎಸ್ ನವರು ಕೂಡ ಈ ವಿಡಿಯೋಗೆ ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋದಲ್ಲಿರುವ ಹೇಳಿಕೆ ವಿರುದ್ಧ ಕೆಂಡಕಾರಿದ್ದಾರೆ.





GIPHY App Key not set. Please check settings