
ಚಾಮರಾಜನಗರ: ವಿರೋಧ ಪಕ್ಷದವರು ಆಡಳಿತ ಪಕ್ಷದವರ ಮೇಲೆ ಆಡಳಿತ ಪಕ್ಷದವರು ವಿರೋಧ ಪಕ್ಷದವರ ಮೇಲೆ ಯಾವಾಗಲೂ ಮಾತಿನ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಇದೀಗ ಮಾಜಿ ಸಚಿವ ಈಶ್ವರಪ್ಪ, ಕಾಂಗ್ರೆಸ್ ಇಬ್ಬರು ನಾಯಕರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಜಿ ಪರಮೇಶ್ವರ್ ಅವರನ್ನು ಎಳೆದು ತಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಆಣೆ ಮಾಡಿ ಹೇಳಲಿ ಪರಮೇಶ್ವರ್ ಅವರನ್ನು ನಾನು ಸೋಲಿಸಿಲ್ಲ ಅಂತ. ಹಾಗೇ ಪರಮೇಶ್ವರ್ ಕೂಡ ಆಣೆ ಮಾಡಿ ಹೇಳಲಿ ನನ್ನನ್ನು ಸಿದ್ದರಾಮಯ್ಯ ಸೋಲಿಸಿಲ್ಲ ಎಂದು. ಇವರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿಕೊಂಡು ಬಿಟ್ಟರೆ ಮತ್ತೆ ಚುನಾವಣೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ನಾಳೆ ಕಾಂಗ್ರೆಸ್ ನಲ್ಲೂ ಇದೇ ಪರಿಸ್ಥಿತಿ ಆಗುತ್ತೆ. ಅವರೇ ಇವರನ್ನು ಸೋಲಿಸುತ್ತಾರೆ. ಇವರೇ ಅವರನ್ನು ಸೋಲಿಸುತ್ತಾರೆ. ಅಷ್ಟೇ ಅಲ್ಲ ಬಾದಾಮಿ ದೂರ ಅಂತ ಸಿದ್ದರಾಮಯ್ಯ ಹೇಳುತ್ತಾರಲ್ಲ. ಹಾಗಾದ್ತೆ ನಾಳೆ ದಿನ ಸಿಎಂ ಆದ್ರೆ ರಾಜ್ಯ ಸುತ್ತಬೇಕು ಅಲ್ವಾ. ಈಗ ಬಾ ಮಗನೇ ಸೋಲಿಸುತ್ತೀವಿ ಅಂತ ಕೋಲಾರದ ದಲಿತರು ಹಾಗೂ ಇತರೆ ನಾಯಕರು ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
GIPHY App Key not set. Please check settings