ಪಂಚ ರಾಜ್ಯ ಚುನಾವಣೆಯಲ್ಲಿ ಆಪ್ ಪಕ್ಷ ಅಂದುಕೊಂಡಂತೆ ಪಂಜಾಬ್ ತನ್ನ ತೆಕ್ಕೆಗೆ ತೆಗೆದುಕೊಂಡು ಆಗಿದೆ. ಇದಿಒಗ ತನ್ನ ಪಕ್ಷಕ್ಕೆ ಹರ್ಭಜನ್ ಸಿಂಗ್ ಅವರನ್ನ ಬರಮಾಡಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆ ಕೂಡ ಹರ್ಭಜನ್ ಸಿಂಗ್ ರಾಜಕೀಯ ಪ್ರವೇಶದ ಬಗ್ಗೆ ಇಂಥದ್ದೆ ಸುದ್ದಿ ಹರಿದಾಡಿತ್ತು. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕಗಷ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಸಮಯದಲ್ಲಿ ಹರ್ಭಜನ್ ಸಿಂಗ್ ಅವರನ್ನ ಕೆಲವು ಪಕ್ಷಗಳು ಆಹ್ವಾನ ನೀಡಿದ್ದವು. ಆದ್ರೆ ಯಾವ ಪಕ್ಷಕ್ಕು ಹೋಗಿರಲಿಲ್ಲ. ಇದೀಗ ಆಪ್ ಪಕ್ಷ ಸೇರ್ತಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.
ಮಾಜಿ ಆಫ್ ಸ್ಪಿನ್ನರ್ ಭಜ್ಜಿ ಅವರನ್ನ ಆಪ್ ಪಕ್ಷ ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದೆ. ಪಂಜಾಬ್ ನಿಂದ ರಾಜ್ಯಸಭೆಗೆ ಖ್ಯಾತನಾಮರನ್ನ ಕಳುಹಿಸಲು ಎಎಪಿ ನಿರ್ಧರಿಸಿದೆ. ಈ ಹಿನ್ನೆಲೆ ಭಜ್ಜಿ ಹೆಸರೇ ಮುಂಚೂಣಿಯಲ್ಲಿದೆ. ಅಗ್ರ ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆ. ಹರ್ಭಜನ್ ಸಿಂಗ್ ಎಂಟ್ರಿಯಿಂದ ಕುಸಿತ ಕಂಡಿರುವ ಕ್ರೀಡಾ ವಲಯವನ್ನ ಮೇಲೆತ್ತುವ ಭರವಸೆ ಸಿಕ್ಕಿದೆ.