in

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ..ಆತನಿಗೆ 20 ವರ್ಷ..ಸಾಥ್ ಕೊಟ್ಟಕಾಗೆ 5 ವರ್ಷ ಕಠಿಣ ಶಿಕ್ಷೆ..!

suddione whatsapp group join

ಚಾಮರಾಜನಗರ: ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವ್ಯಕ್ತಿಗೆ ಜಿಲ್ಲಾ ಒ್ರಧಾನ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. 21 ವರ್ಷದ ಚಂದ್ರಶೇಖರ್ ಶಿಕ್ಷೆಗೊಳಗಾದವ. ಆ ಯುವಕನ ಜೊತೆ ಸಾಥ್ ಕೊಟ್ ಮಹಿಳೆಗೂ ನ್ಯಾಯಾಲಯ ಶಿಕ್ಷೆ ವಿಧಿಸಿ, ಆದೇಶಿಸಿದೆ.

ಈ ಚಂದ್ರಶೇಖರ್ 16 ವರ್ಷದ ಬಾಲಕಿಯನ್ನ ಲವ್ ಮಾಡೋದಾಗಿ ಪುಸಲಾಯಿಸಿದ್ದನಂತೆ. ಪ್ರತಿದಿನ ಹಿಂದೆ ಹಿಂದೆ ಹೋಗಿ, ಆ ಬಳಿಕ ಆ ಬಾಲಕಿಯನ್ನ ಹೇಗೋ ಒಪ್ಪಿಸಿ, ಅಪಹರಣ‌ಮಾಡಿದ್ದಾನೆ. ಬಳಿಕ ಮಹದೇವಮ್ಮ ಎನ್ನುವವರ ಮನೆಯಲ್ಲಿರಿಸಿಕೊಂಡು 5 ದಿನಗಳ ಕಾಲ ಸತತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಈ ಸಂಬಂಧ ಜುಲೈ 2018ರಲ್ಲೇ ಪ್ರಕರಣ ದಾಖಲಾಗಿತ್ತು. ಇದೀಗ ಕೇಸ್ ಇತ್ಯರ್ಥಗೊಂಡಿದ್ದು, ಆರೋಪಿ ಚಂದ್ರಶೇಖರ್ ಗೆ ಜಿಲ್ಲಾ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಹಾಗೇ ಮಹದೇವಮ್ಮನಿಗೆ 5 ವರ್ಷಗಳ ಶಿಕ್ಷೆ ನೀಡಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

1-5ನೇ ತರಗತಿ ಆರಂಭಕ್ಕೆ ಮುಂದಾದ ಶಿಕ್ಷಣ ಸಚಿವರಿಗೆ ಸಿಎಂ ಕ್ಲಾಸ್..!

ಎಸಿಬಿ ದಾಳಿ ; ಮೂವರು ಭೂಸ್ವಾಧೀನ ಅಧಿಕಾರಿಗಳು ಎಸಿಬಿ ವಶಕ್ಕೆ