ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಿಂದಾಸ್ ಸಿನಿಮಾದಲ್ಲಿ ನಟಿ ಹನ್ಸಿಕಾ ಮೋಟಾನ್ವಿ ಮಿಂಚಿದ್ದರು. ಇತ್ತಿಚೆಗಷ್ಟೇ ಅದ್ದೂರಿಯಾಗಿ ಬ್ಯುಸಿನೆಸ್ ಮ್ಯಾನ್, ಸೋಹೈಲ್ ಜೊತೆಗೆ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಆದರೆ ಸೋಹೈಲ್, ಹನ್ಸಿಕಾ ಆಪ್ತ ಸ್ನೇಹಿತೆಯ ಪತಿ. ಅವರಿಂದ ದೂರಾಡಿ, ನಟಿ ತಾನೇ ಮದುವೆಯಾದರು ಎಂಬ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಅದಕ್ಕೆ ನಟಿ ಹಾಗೂ ಸೋಹೈಲ್ ಇಬ್ಬರು ಉತ್ತರ ನೀಡಿದ್ದಾರೆ.
ಕೆಲ ವರ್ಷಗಳ ಡೇಟಿಂಗ್ ಬಳಿಕ ಹನ್ಸಿಕಾ ಹಾಗೂ ಸೋನೈಲ್ ಮದುವೆಯಾಗಿದ್ದಾರೆ. ಒಟಿಟಿನಲ್ಲಿ ಮದುವೆ ವಿಡಿಯೋ ಪ್ರಸಾರವಾಗುತ್ತಿದ್ದು, ಇದರ ಮೊದಲ ಎಪಿಸೋಡಿನಲ್ಲಿ ಹನ್ಸಿಕಾ ಹಾಗೂ ಸೋನೈಲ್ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹನ್ಸಿಕಾ ತನ್ನ ಮೇಲಿದ್ದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಿಂಕಿ ಮತ್ತು ಹನ್ಸಿಕಾ ಇಬ್ಬರು ಫ್ರೆಂಡ್ಸ್. ಸೋನೈಲ್ ಹಾಗೂ ರಿಂಕಿ ಮದುವೆಯಾಗಿದ್ದರು. ಈ ಇಬ್ಬರ ಮದುವೆಗೆ ಹನ್ಸಿಕಾ ಕೂಡ ಹೋಗಿದ್ದರು. ಆದ್ರೆ ಈಗ ಅದೇ ಸೋನೈಲ್ ನ ಹನ್ಸಿಕಾ ಮದುವೆಯಾಗಿದ್ದಾರೆ ಎಂಬ ಆರೋಪಕ್ಕೆ ಉತ್ತರ ಕೊಟ್ಟ ನಟಿ, ಆ ಸಮಯದಲ್ಲಿ ಆ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ, ಎಲ್ಲವೂ ನಂದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೂ ನನಗೂ ಸಂಬಂಧವೇ ಇಲ್ಲ. ನಾನು ಪಬ್ಲಿಕ್ ಫಿಗರ್ ಆಗಿರುವ ಕಾರಣ, ನನ್ನ ಕಡೆ ಬೆರಳು ಮಾಡಿ ತೋರಿಸುವುದು ಬಹಳ ಸುಲಭ ಎಂದಿದ್ದಾರೆ.
ಇನ್ನು ಸೋಹೈಲ್ ಕೂಡ ಈ ಬಗ್ಗೆ ಮಾತನಾಡಿದ್ದು, ನಾನು ಈ ಮೊದಲು ಮದುವೆಯಾಗಿದ್ದೆ. ಆ ಮದುವೆ ಮುರಿದು ಬಿತ್ತು. ಇದಕ್ಕರ ಹನ್ಸಿಕಾ ಕಾರಣ ಎಂದು ಹೇಳಲಾಗಿತ್ತು. ಆದ್ರೆ ಅದು ಸತ್ಯವಲ್ಲ. ನಾವಿಬ್ಬರು ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾಗಿದ್ದ ಫೋಟೋ ನೋಡಿದ್ದರಿಂದ ಆ ರೀತಿಯ ಊಹಾಪೋಹಗಳು ಹಬ್ಬಿದ್ದವು ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…