in

ಶಿಷ್ಯನ ವಿರುದ್ಧ ದೇವೇಗೌಡರ ಕಿಡಿ : ಅಂಥದ್ದೇನೇಳಿದ್ರು ಸಿದ್ದರಾಮಯ್ಯ..?

suddione whatsapp group join

ಬೆಂಗಳೂರು: ಇಂದು ಜೆಡಿಎಸ್ ನಿಂದ ಜನತಾ ಪರ್ವ ಉದ್ಘಾಟನೆಯಾಗಿದೆ. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ್ದಾರೆ. ಅವರು ನೀಡಿದ್ದ ಜೆಡಿಎಸ್ ವಿರುದ್ಧದ ಹೇಳಿಕೆಗೆ ಗರಂ ಆಗಿದ್ದಾರೆ.

ಅಪಪ್ರಚಾರ ಮಾಡುವುದುಕ್ಕೂ ಒಂದು ಮಿತಿ ಇರಲಿ. ಯಾವ ಪಕ್ಷದಿಂದ ಬಂದಿದ್ದೇವೆ ಎಂಬುದು ನೆನಪಿರಲಿ. ನಾಯಕರಾಗಿ ಬೆಳೆಸಿದ್ದು ಯಾವ ಪಕ್ಷ ಅನ್ನೋದು ತಿಳಿದಿರಲಿ. ಜೆಡಿಎಸ್ ಅವರ ಪಕ್ಷ ಇವರ ಪಕ್ಷ ಎಂದು ಹೇಳುವ ಮುನ್ನ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಮುನ್ನ ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎಂಬುದರ ಅರಿವಿರಲಿ ಎಂದಿದ್ದಾರೆ.

ನಮ್ಮನ್ನು ನೋಡಿ ಅಪಹಾಸ್ಯ ಮಾಡುವವರಿಗೆ 2023ರ ಚುನಾವಣೆಯಲ್ಲಿ ಉತ್ತರ ನೀಡೋಣಾ. ಅಪಮಾನಗಳನ್ನ ಸಹಿಸಿದ್ದೇನೆ, ಎದುರಿಸಿದ್ದೇನೆ. ಅಪಾರ ಕಾರ್ಯಕರ್ತರು ಜೊತೆಗಿದ್ದೇವೆ ಅಂತ ನೊಕವು ನುಂಗಿದ್ದೇವೆ. ಇರುವುದು ಒಂದೇ ಪರಿಹಾರ. ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಎಂಬ ಘೋಷ ವಾಕ್ಯ ಮತ್ತು 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಎಂಬ ಧ್ಯೇಯದೊಂದಿಗೆ ಕಾರ್ಯಗಾರ ಆರಂಭವಾಗಿದೆ. ರಾಜ್ಯದ ಜನರ ಉಸಿರಲ್ಲಿ ಉಸಿರಾಗಿರುವ ಜೆಡಿಎಸ್ ಪಕಗಷವನ್ನ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ದೊಡ್ಡಗೌಡ್ರು ಎಚ್ಚರಿಕೆ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ಕುಸಿತ : ತಾಯಿ, ಮಗು ಅಪಾಯದಿಂದ ಪಾರು..!

ರಾತ್ರಿ ವೇಳೆ ಪಾರ್ಕ್ ನಲ್ಲಿದ್ದ ಪ್ರೇಮಿಗಳು : ಬುದ್ಧಿ ಹೇಳಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆ..!