ಗ್ಯಾರಂಟಿ ಸಮಿತಿ ಗದ್ದಲ : ಚಿತ್ರದುರ್ಗದಲ್ಲಿ ಶಿವಣ್ಣ ತಿರುಗೇಟು

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಮಾ. 12 : ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ಮಾಡುತ್ತಿದೆ. ಇದಕ್ಕೆ ಸರ್ಕಾರ ಗೌರವಧನವನ್ನು ನೀಡುತ್ತಿದೆ. ಈ ಗೌರವಧನ ಇಲ್ಲದೆ ನಮ್ಮ ಸಮಿತಿಯವರು ನಿಸ್ವಾರ್ಥವಾಗಿ ಈ ಯೋಜನೆ ಅನುಷ್ಠಾನಕ್ಕೆ ಕೆಲಸವನ್ನು ಮಾಡುವುದಾಗಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ವಿಧಾನಸಭೆಯಲ್ಲಿ ವಿರೋಧ ಪಕ್ಷದವರು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳ ಅಧ್ಯಕ್ಷ ಹುದ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಧರಣಿ ನಡೆಸಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ಕಾಂಗ್ರೆಸ್ ಕಾರ್ಯಕರ್ತ ರನ್ನು ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು, ಹುದ್ದೆಗಳನ್ನು ರದ್ದು ಮಾಡುವುದಾಗಿ ತಕ್ಷಣವೇ ಘೋಷಿಸುವಂತೆ ಆಗ್ರಹಿಸಿದ್ದರು. ಇದನ್ನು ವಿರೋಧಿಸಿದ ಶಿವಣ್ಣ ನಮ್ಮ ಪಕ್ಷದ ಅಧಿಕಾರಕ್ಕೆ ಬರುವಾಗ ಜನರಿಗೆ ಐದು ಗ್ಯಾರೆಂಟಿಗಳನ್ನು ನೀಡಿತ್ತು. ಅದರಂತೆ ಅಧಿಕಾರಕ್ಕೆ ಕಾಂಗ್ರೆಸ್ ಕೆಲವೇ ದಿನಗಳಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿತು. ಇದರಿಂದ ವಿರೋಧ ಪಕ್ಷದವರು ಈ ಗ್ಯಾರೆಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ. ಅರ್ಥಿಕವಾಗಿ ರಾಜ್ಯ ಹಿಂದಕ್ಕೆ ಹೋಗುತ್ತದೆ ಎಂದು ಬೊಬ್ಬೆ ಹೊಡಿಯುತ್ತಿದ್ದರು, ಈಗ ನಮ್ಮ ಗ್ಯಾರೆಂಟಿಗಳು ಜನ ಪ್ರಿಯವಾಗುತ್ತಿರುವುದನ್ನು ಮನಗಂಡು ಇದರಿಂದ ನಮಗೆ ಮುಂದೆ ಅಧಿಕಾರ ಸಿಗುವುದಿಲ್ಲ ಎಂದು ತಿಳಿದ ವಿರೋಧ ಪಕ್ಷದವರು ಈ ರೀತಿಯಾದ ಸಮಿತಿಯ ಮೇಲೆ ನೆಪವನ್ನು ಮಾಡಿ ಸದನದಲ್ಲಿ ಆಡಳಿತ ಪಕ್ಷವನ್ನು ಎದುರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಇದು ಯಾವುದು ನಡೆಯುವುದಿಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರೆಂಟಿಗಳು ಇದ್ದೇ ಇರುತ್ತವೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಎಲ್ಲರಿಗೂ ಸಹಾ ಗೌರವಧನವನ್ನು ನಿಡುತ್ತಿದೆ. ಇದರಂತೆ ನಮ್ಮ ಸಮಿತಿಗೂ ಸಹಾ ಗೌರವಧನವನ್ನು ನೀಡುತ್ತದೆ. ಆದರೆ ಇದರ ಬಗ್ಗೆ ಸದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಆಕ್ಷೇಪವನ್ನು ವ್ಯಕ್ತಪಡಿಸಿ ಸಮಿತಿಯ ಸದಸ್ಯರಿಗೆ ಗೌರವಧನ ನೀಡುವುದರಿಂದ ಅರ್ಥಿಕವಾಗಿ ನಷ್ಠವಾಗುತ್ತದೆ ಎನ್ನುತ್ತಿದ್ದಾರೆ. ವಿಧಾನಸಭೆಗೆ ಆಯ್ಕೆಯಾದ ಸದಸ್ಯರಿಗೂ ಸಹಾ ಸರ್ಕಾರದಿಂದ ಗೌರವಧನವನ್ನು ನೀಡಲಾಗುತ್ತದೆ. ಇದನ್ನು ಅವರು ತಿರಸ್ಕಾರ ಮಾಡುತ್ತಾರೆಯೇ ಅದನ್ನು ಇನ್ನು ಹೆಚ್ಚಿಗೆ ಮಾಡಿ ಎನ್ನುತ್ತಿದ್ದಾರೆ ಇದರ ಬಗ್ಗೆ ಅವರಿಗೆ ಗೌರವ ಇದೆ ಆದರೆ ನಮಗೆ ನೀಡಿದರೆ ಮಾತ್ರ ತಪ್ಪು ಎನ್ನುತ್ತಿದ್ದಾರೆ ಇದು ಯಾವ ನ್ಯಾಯ ಎಂದು ಶಿವಣ್ಣ ಪ್ರಶ್ನಿಸಿದರು.

ನಾವುಗಳು ಸರ್ಕಾರ ನೀಡುವ ಗೌರವಧನಕ್ಕಾಗಿ ಈ ಕೆಲಸವನ್ನು ಮಾಡುತ್ತಿಲ್ಲ, ನಮ್ಮ ಅತ್ಮ ತೃಪ್ತಿಗಾಗಿ ಪಕ್ಷದ ಮೇಲಿನ ಗೌರವಕ್ಕಾಗಿ ಮಾಡಲಾಗುತ್ತದೆ, ನಾವುಗಳು ಸರ್ಕಾರ ನೀಡುವ ಗೌರವಧನ ಇಲ್ಲದೆಯೇ ಈ ಯೋಜನೆಯ ಅನುಷ್ಠಾನಕ್ಕಾಗಿ ನಿಸ್ವಾರ್ಥವಾಗಿ ಕೆಲಸವನ್ನು ಮಾಡಲು ಸಿದ್ದರಿದ್ದೇವೆ ಇದನ್ನು ವಿರೋಧ ಪಕ್ಷದವರು ಅರಿಯಬೇಕಿದೆ ಇಲ್ಲಿ ಹಣಕ್ಕಾಗಿ ಕೆಲಸ ಮಾಡುವವರು ಕಡಿಮೆ ಇದ್ದಾರೆ ಪಕ್ಷ, ಪಕ್ಷದ ಮುಖಂಡರ ಮಾತಿಗೆ ಬೆಲೆಯನ್ನು ನೀಡಿ ಕೆಲಸವನ್ನು ಮಾಡಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಜಿಲ್ಲಾ ತಾಲ್ಲೂಕು ಸಮಿತಿಗಳು ಕೆಲಸವನ್ನು ಮಾಡುತ್ತಿವೆ. ಇದಲ್ಲದೆ ರಾಜ್ಯ ಮುಖ್ಯಮಂತ್ರಿಗಳು ಹಾಗೂಬ ಪಕ್ಷದ ಅಧ್ಯಕ್ಷರಾದ ಶಿವಕುಮಾರ್‍ರವರು ಸಹಾ ಉಸ್ತುವಾರಿಯನ್ನು ಮಾಡುತ್ತಿದ್ದಾರೆ. ಇದರಂತಡೆ ಆಯಾ ಜಿಲ್ಲೆಯಲ್ಲಿಯೂ ಸಹಾ ಜಿಲ್ಲಾ ಉಸ್ತುವಾರಿ ಸಚಿವರು ಸಹಾ ನಿಗಾ ವಹಿಸುತ್ತಿದ್ದಾರೆ ಇದರಿಂದ ಈ ಯೋಜನೆ ಶೇ. 90 ರಷ್ಟು ಯಶಸ್ವಿಯಾಗಿದೆ ಎಂದರು

suddionenews

Recent Posts

ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಾರಾ..?

ಹುಬ್ಬಳ್ಳಿ; ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬಿಜೆಪಿ ಪಕ್ಷದಲ್ಲಿಯೇ ಇದ್ರು ಕೂಡ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ…

16 minutes ago

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

  ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 15 ) ಹತ್ತಿ ಮಾರುಕಟ್ಟೆ…

2 hours ago

ಚಿತ್ರದುರ್ಗ ಪಿಎಸ್ಐ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ ಆರೋಪ

  ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ…

3 hours ago

ರುದ್ರಪ್ಪ ಲಮಾಣಿ ದಿಢೀರನೇ ಬೆಂಗಳೂರಿಗೆ ಶಿಫ್ಟ್

  ಬೆಂಗಳೂರು; ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಈಗಾಗಲೇ…

3 hours ago

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ, ಈ ರಾಶಿಯವರು ಸೋಲಿಲ್ಲದ ಸರದಾರನಾಗಿ ಮುಟ್ಟಿದ್ದೆಲ್ಲ ಚಿನ್ನ. ಶನಿವಾರದ ರಾಶಿ ಭವಿಷ್ಯ…

10 hours ago

ಹಿರಿಯೂರು ಬಳಿ ಉಪ ಸಭಾಪತಿಗೆ ಬೈಕ್ ಡಿಕ್ಕಿ : ಪ್ರಾಣಾಪಾಯದಿಂದ ಪಾರು

ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…

19 hours ago