in

ಸೆ.18ರಂದು ಚಳ್ಳಕೆರೆ, ಚಿತ್ರದುರ್ಗ ಜಿಟಿಟಿಸಿ ಕೇಂದ್ರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆ

suddione whatsapp group join

ಚಿತ್ರದುರ್ಗ, (ಸೆಪ್ಟೆಂಬರ್. 17) : ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಚಳ್ಳಕೆರೆ ಹಾಗೂ ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳ (ಜಿಟಿಟಿಸಿ) ಉದ್ಘಾಟನೆ ಸೆಪ್ಟೆಂಬರ್18ರಂದು ನಡೆಯಲಿದೆ ಎಂದು ಜಿಟಿಟಿಸಿ ತರಬೇತಿ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಡಾ.ಎನ್.ರಮೇಶ ಹೇಳಿದರು.

ನಗರದ ಕುಂಚಿಗನಾಳ್ ಕಣಿವೆ ಬಳಿ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಸೆ.18ರಂದು ಮಧ್ಯಾಹ್ನ 3ಕ್ಕೆ  ಚಳ್ಳಕೆರೆಯಲ್ಲಿ ಜಿಟಿಟಿಸಿ ಕೇಂದ್ರದ ನೂತನ ತರಬೇತಿ ಕಟ್ಟಡ, ಕಾರ್ಯಗಾರ ಕಟ್ಟಡ, ವಿದ್ಯಾರ್ಥಿನಿಯರ ವಸತಿ ನಿಲಯ, ಉಪಹಾರ ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿ ನಿಲಯ (ತರಬೇತಿ ಸಂಕೀರ್ಣ) ಉದ್ಘಾಟನೆಯಾಗಲಿದೆ.

ಸಂಜೆ 4.30ಕ್ಕೆ ಚಿತ್ರದುರ್ಗದ ಕುಂಚಿಗನಾಳ್ ಗ್ರಾಮದಲ್ಲಿ ಜಿಟಿಟಿಸಿ ಕೇಂದ್ರದ ನೂತನ ತರಬೇತಿ ಕಟ್ಟಡ ಮತ್ತು ಕಾರ್ಯಗಾರ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಚಳ್ಳಕೆರೆ ಜಿಟಿಟಿಸಿ ತರಬೇತಿ ಕೇಂದ್ರದ ಯೋಜನಾ ವೆಚ್ಚ ರೂ.2564.00 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಂ.117, ಕಸಬಾ ಹೋಬಳಿ, ಬಳ್ಳಾರಿ ರಸ್ತೆ, ಚಳ್ಳಕೆರೆ ಇಲ್ಲಿ 10 ಎಕರೆ ಭೂಮಿಯನ್ನು ಸರ್ಕಾರವು ಒದಗಿಸಿದ್ದು, ಇಲ್ಲಿ ತರಬೇತಿ ಮತ್ತು ವರ್ಕ್‍ಶಾಪ್ ಕಟ್ಟಡ, ಉಪಹಾರ ಕಟ್ಟಡ ಮತ್ತು ಬಾಲಕರ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಹಾಗೂ ಬಾಲಕಿಯರ ಮತ್ತು ಸಿಬ್ಬಂದಿಗಳ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಚಿತ್ರದುರ್ಗ ಕುಂಚಿಗನಾಳ್ ಜಿಟಿಟಿಸಿ ತರಬೇತಿ ಕೇಂದ್ರದ ಯೋಜನಾ ವೆಚ್ಚ ರೂ.998.00 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಂ.44, ಕುಂಚಿಗನಾಳ್ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ಇಲ್ಲಿ 10 ಎಕರೆ ಭೂಮಿಯನ್ನು ಸರ್ಕಾರವು ಒದಗಿಸಿದ್ದು, ಇಲ್ಲಿ ತರಬೇತಿ ಮತ್ತು ವರ್ಕ್‍ಶಾಪ್ ಕಟ್ಟಡ ನಿರ್ಮಾಣ ಮಾಡಲಾಗಿದೆ.

ನುರಿತ ಮಾನವ ಸಂಪನ್ಮೂಲವನ್ನು ಸ್ಥಳೀಯ ಕೈಗಾರಿಕಾ ಕ್ಷೇತ್ರಕ್ಕೆ ಒದಗಿಸುವುದು ಹಾಗೂ ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು ಜಿಟಿಟಿಸಿ ತರಬೇತಿ ಕೇಂದ್ರಗಳ ಉದ್ದೇಶವಾಗಿದೆ ಎಂದು ಹೇಳಿದರು.

ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಟಿಟಿಸಿ ತರಬೇತಿ ಸಂಸ್ಥೆಯಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೊಮಾ ಇನ್ ಮೆಕಟ್ರಾನಿಕ್ಸ್ ಎಂಬ ಎರಡು ಬಗೆಯ ಡಿಪ್ಲೊಮ ತರಬೇತಿಗಳನ್ನು 2021-22ನೇ ಸಾಲಿನಲ್ಲಿ ಎಐಸಿಟಿಯ ಅನುಮೋದನೆ ಪಡೆದು ನಡೆಸಲಾಗುವುದು. ಎಸ್‍ಎಸ್‍ಎಲ್‍ಸಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ಈ ತರಬೇತಿ ಅವಧಿಯು ಮೂರು ವರ್ಷ ತರಬೇತಿ ಹಾಗೂ ಒಂದು ವರ್ಷ ಇಂಟರ್‍ಶಿಫ್ ಸೇರಿದಂತೆ ಒಟ್ಟು 4 ವರ್ಷಗಳ ಅವಧಿಯ ತರಬೇತಿಯಾಗಿದೆ. ಒಂದು ಕೋರ್ಸ್‍ಗೆ ಪ್ರತಿ ವರ್ಷ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಎರಡು ಕೋರ್ಸ್‍ಗಳಿದ್ದು, ಪ್ರತಿ ವರ್ಷ ಒಂದು ಕೋರ್ಸ್‍ಗೆ 60 ಅಭ್ಯರ್ಥಿಗಳಂತೆ ಎರಡು ಕೋರ್ಸ್‍ಗಳಿಂದ 120 ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದರು.

ಈ ಸಂಸ್ಥೆಗಳಲ್ಲಿ ಸ್ಕಿಲ್ ಓರಿಯಂಟೆಡ್ ಸರ್ಕಾರಿ ಪ್ರಾಯೋಜಿತ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಅಲ್ಪಾವಧಿ ತರಬೇತಿಗಳನ್ನು ನಡೆಸಲಾಗುವುದು, ಐಟಿಐ, ಡಿಪ್ಲೋಮಾ, ಬಿ.ಇ ಅಭ್ಯರ್ಥಿಗಳಿಗೆ ತರಬೇತಿಗಳನ್ನು ನಡೆಸಲಾಗುವುದು. ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳು, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪ್ಲೊಮಾ ಮತ್ತು ಬಿಇ ವಿದ್ಯಾರ್ಹತೆ ಹೊಂದಿರುವ ವೃತ್ತಿಪರ ನೌಕರರಿಗೆ ನೀಡುವ ಉನ್ನತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.

ಈ ಜಿಟಿಟಿಸಿ ಕೇಂದ್ರಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳ ವೃತಿಪರ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆಯಲು ಅನುಕೂಲವಾಗಲಿದೆ ಎಂದರು ಹೇಳಿದರು.

ಜಿಟಿಟಿಸಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಶೇ.100ರಷ್ಟು ಉದ್ಯೋಗಾವಕಾಶ ಹೊಂದಲಿದ್ದಾರೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ದೇಶದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ ಇರುತ್ತದೆ. ರಾಜ್ಯದಲ್ಲಿ 28 ಜಿಟಿಟಿಸಿ ತರಬೇತಿ ಕೇಂದ್ರಗಳಿವೆ ಎಂದು ಹೇಳಿದರು.

ಸೆ.18ರಂದು ಚಳ್ಳಕೆರೆ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಉದ್ಘಾಟನೆ:  ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನೂತನ ಕಟ್ಟಡ, ವಿದ್ಯಾರ್ಥಿನಿಯರ ವಸತಿ ನಿಲಯ ಹಾಗೂ ವಿದ್ಯಾರ್ಥಿ ವಸತಿ ನಿಲಯ ಉದ್ಘಾಟನೆಯಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಂ.ಎಂ.ಬೆನಾಳ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಟಿಟಿಸಿ ಪ್ರೋಡೆಕ್ಷನ್ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆರ್.ಮುತ್ತುಕುಮಾರ್, ಹರಿಹರ ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲ ಲಕ್ಷ್ಮಣ್ ನಾಯಕ್, ಚಿತ್ರದುರ್ಗ ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲ ಶ್ರೀನಿವಾಸ್ ರಾಥೋಡ್ ಇದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಶಾಸಕ ಟಿ.ರಘುಮೂರ್ತಿ ಇಚ್ಛಾಶಕ್ತಿಯ ಫಲ : ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಟಿಟಿಸಿ ತರಬೇತಿ ಕೇಂದ್ರ ನಾಳೆ ಲೋಕಾರ್ಪಣೆ

ಸೆ.18 ಮತ್ತು19 ರಂದು ಎಸ್‍ಡಿಎ ಪರೀಕ್ಷೆ: ನೀಷೆಧಾಜ್ಞೆ ಜಾರಿ