ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ಅ.03) : ಗಾಂಧಿ ಜಯಂತಿ ಹಾಗೂ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಸ್ವಾಭಿಮಾನ ವಿಶೇಷ ಚೇತನರ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಇಲ್ಲಿನ ಕಬೀರಾನಂದಾಶ್ರಮ ಹಾಗೂ ಹೆದ್ದಾರಿಯಲ್ಲಿರುವ ರಾಜಲಕ್ಷ್ಮಿ ವೃದ್ದಾಶ್ರಮದಲ್ಲಿ ಹಾಲು, ಬ್ರೆಡ್, ಹಣ್ಣುಗಳನ್ನು ವಿತರಿಸಲಾಯಿತು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ವೃದ್ದಾಶ್ರಮಗಳನ್ನು ಗುರುತಿಸಿ ಅಲ್ಲಿನ ವೃದ್ದರು, ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ನೀಡುವುದು ನಿಜಕ್ಕೂ ಮಾನವೀಯ ಗುಣ. ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ತಂದೆ-ತಾಯಿಗಳನ್ನು ನೋಡಿಕೊಳ್ಳದೆ ಕೆಲವರು ವೃದ್ದಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಈ ಸಂಸ್ಕøತಿ ನಿಲ್ಲಬೇಕು ಎಂದು ಹೇಳಿದರು.
ಸ್ವಾಭಿಮಾನ ವಿಶೇಷ ಚೇತನರ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಪಿ.ಪರಶುರಾಮ್, ಉಪಾಧ್ಯಕ್ಷ ಕೆ.ತಿರುಮಲ, ಕಾರ್ಯದರ್ಶಿ ಎಂ.ಎಸ್.ಅಜಯ್, ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಬಿ.ಟಿ.ತಿಮ್ಮಪ್ಪ ಹೊನ್ನೂರು, ಸಂತೋಷ ಕೆ, ಸಂಗೀತ ಪರಶುರಾಮ್, ಹನುಮಂತರಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.