ಸುದ್ದಿಒನ್, ಚಿತ್ರದುರ್ಗ, ಜನವರಿ. 18 : 13 ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಡಂಬಳ –ಗದಗ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಪೂಜ್ಯ ಜಗದ್ಗುರು ಡಾ. ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ,
ಶರಣ ಸಾಹಿತ್ಯವೂ ಪ್ರತಿ ಜನಸಾಗರದ ಮನದಾಳ ಮುಟ್ಟಬೇಕು. ಇದು ನಮ್ಮ ನಾಡಿನ ಬಸವಾನುಯಾಯಿಗಳ ಸಾಂಸ್ಕøತಿಕ ಸಂಸ್ಥೆಯಾಗಿದೆ. ಅನೇಕ ಭಾಷ ಸಾಹಿತ್ಯಗಳಲ್ಲಿ ಕನ್ನಡ ವಿಶ್ವ ಸಾಹಿತ್ಯದಲ್ಲೇ ಉನ್ನತ ಸ್ಥಾನ ಹೊಂದಿದೆ. ಅಂತಹ ಸಾಹಿತ್ಯ ನೀಡಿದ ಮಹಾನ್ ವ್ಯಕ್ತಿಗಳೆಂದರೆ ಬಸವಾದಿ ಶರಣರು. ಅವರ ಅಶಯವೆಂದರೆ ಬಸವಾದಿ ಸಾಹಿತ್ಯಿಕ ಮೌಲ್ಯಗಳು ಬೆಳೆದು ಮೌಢ್ಯಾಚರಣೆಗಳು ದೂರವಾಗಬೇಕೆಂದು ಶರಣ ಸಾಹಿತ್ಯ ಸ್ಥಾಪಿಸಿದರು. ಅದಕ್ಕಾಗಿ ಸಾವಿರಾರು ವಚನಗಳನ್ನು ರಚಿಸಿದರು. ಸರ್ವ ಸಮಾನತೆಯ ಮೂಲ ಕಾರಣೀಭೂತರಾದವರು. ಜೊತೆಗೆ ಶೋಷಣೆಯು ನಿರ್ಮೂಲವಾಗಬೇಕೆಂದು ಶರಣರು ಸಾಹಿತ್ಯಗಳನ್ನು ರಚಿಸಿದ್ದಾರೆ. ಕಾಯಕ-ದಾಸೋಹ ತತ್ವಗಳನ್ನು ನಾವು ಅಳವಡಿಸಿಕೊಂಡರೆ ಸಮೃದ್ಧವಾದ ಜೀವನವನ್ನು ನಡೆಸಬಹುದು, ವ್ಯಕ್ತಿಯು ತನ್ನ ಆತ್ಮ ಸಂತೃಪ್ತಿಯನ್ನು ಪಡೆಯಲು ಸಹಾಯಕವಾಗಿರುವುದು ಶರಣರ ಸಾಹಿತ್ಯ ಈ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಬೇರೆ ರಾಜ್ಯಗಳಲ್ಲೂ ಶರಣವನ್ನು ಸಾಹಿತ್ಯವನ್ನು ಪಸರಿಸುವಲ್ಲಿ ಕಾರ್ಯೋನ್ಮಖವಾಗಿದೆ ಎಂದು ನುಡಿದರು.
ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ನನ್ನನ್ನು 13 ನೇ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿಸಿದ ಎಲ್ಲರಿಗೂ ಧನ್ಯವಾದಗಳು. ಶರಣ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಒಳಗೊಂಡಂತಹದ್ದು. ಶರಣ ಸಾಹಿತ್ಯ ಸ್ವತಂತ್ರ ಸಾಹಿತ್ಯ. ಬಸವಾದಿ ಶರಣರ ವಚನ ಸಾಹಿತ್ಯ ಸ್ವತಂತ್ರವಾದದ್ದಾಗಿದೆ. ಮನುಷ್ಯನ ಒಳಗಿನ ಆತ್ಮವನ್ನು ಎಚ್ಚರಿಸುವಂತಹ ಶಕ್ತಿ ಶರಣ ಸಾಹಿತ್ಯವಾಗಿದೆ. ಅಂಗವು ಹೋಗಿ ಲಿಂಗವಾಗಿಸುವ ಸಂಸ್ಕಾರ ಶರಣ ಸಾಹಿತ್ಯದಿಂದ ಸಾಧ್ಯ. ವೇದ, ಉಪನಿಷತ್ತು, ಷಟ್ ಸ್ಥಳಗಳಲ್ಲಿ ಇರದಂತಹ ವೈಶಿಷ್ಠತೆ ಶರಣ ಸಾಹಿತ್ಯದಲ್ಲಿದೆ. ಇಂತಹ ಸಾಹಿತ್ಯವು ಮುಂದಿನ ದಿನಗಳಲ್ಲಿ ಹೆಚ್ಚಿನದಾಗಿ ಶರಣ ಸಾಹಿತ್ಯ ಸಮ್ಮೇಳನಗಳ ಮುಖಾಂತರ ಹೆಚ್ಚು ಪ್ರಚಾರವಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಮಾತನಾಡಿ, ಕಳೆದ ನಾಲ್ಕೈದು ದಶಕಗಳಿಂದ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಈ ನಾಡಿನ ಮೂಲೆ ಮೂಲೆಗಳಿಗೆ ಬಸವಾದಿ ಶರಣರ ತತ್ತ್ವಗಳನ್ನು ಮುಟ್ಟಿಸಿದವರು ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು. ಇಂದು ಅನೇಕ ಕಡೆ ಬಸವಾದಿ ಶರಣರ ಗದ್ದುಗೆಗಳು ಸುಸ್ಥಿಯಲ್ಲಿಲ್ಲ. ಗದ್ದುಗೆಗಳ ಅಭಿವೃದ್ಧಿಗಾಗಿ ಮುಂಬರುವ ರಾಜ್ಯ ಬಜಟ್ನಲ್ಲಿ ಅನುದಾನ ಮೀಸಲಿಡುವಂತೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು. ಬಸವಾದಿ ಶರಣ ಸ್ಮಾರಕಗಳನ್ನು ಉಳಿಸಿ ಅಭಿವೃದ್ಧಿ ಪಡಿಸಲು ಸಮಗ್ರ ಯೋಜನೆಯನ್ನು ರೂಪಿಸಲು ನಾಡಿನ ಸ್ವಾಮೀಜಿಗಳು, ಮಠಾದೀಶರೊಂದಿಗೆ ಚರ್ಚಿಸಲಾಗುವುದು. ಮಾನ್ಯ ಮುಖ್ಯಮಂತ್ರಿಗಳು ಬಸವಣ್ಣನವರ ಹಾಗೂ ಬಸವಾದಿ ಶರಣರ ಚಿಂತನೆಗಳ ಬಗ್ಗೆ ನಮಗಿಂತ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ನುಡಿದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ಮಾತನಾಡಿ, 12ನೇ ಶತಮಾನ ಎಂಬುದು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಬಸವಣ್ಣನವರ ಆಚಾರ ವಿಚಾರಗಳನ್ನು ನಾವು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಜೀವನ ಮಾಡುವುದು ನಮ್ಮ ನಿಮ್ಮ ಕರ್ತವ್ಯವಾಗಿದೆ. ಬಸವಣ್ಣನವರು ವಿಚಾರಗಳು ಎಲ್ಲ ಕಡೆಗಳಲ್ಲಿ ವಿಸ್ತಾರವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ಬಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡುತ್ತ ಬಸವಣ್ಣ ಸಾಂಸ್ಕøತಿಕ ನಾಯಕರು, ಚೈತನ್ಯಕ್ಕೆ ಮಹತ್ವ ಕೊಟ್ಟವರು, ವಚನಗಳು ನಮ್ಮ ಜೀವನದ ಮೌಲ್ಯಗಳಿದ್ದಂತೆ ಅವುಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕು ಎಂದು ತಿಳಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ.ಎಸ್.ಆರ್.ಗುಂಜಾಳ ಮಾತನಾಡಿ ಶರಣ ಸಾಹಿತ್ಯ ಸಮ್ಮೇಳನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಕಾರ್ಯಚರಣೆಯಂತೆ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಬಹಳ ಶರಣ ಸೇರಿದ್ದೀರಿ. ಶರಣರ ವಚನಗಳನ್ನು ಪಾಲಿಸಿ ಒಳ್ಳೆಯ ಜೀವನ ನಡೆಸುವಂತೆ ಶರಣರು ಸಂದೇಶ ನೀಡುರುತ್ತಾರೆ. ಶರಣ ತತ್ತ್ವಗಳು, ಸಂದೇಶಗಳು ಸಮಾಜಕ್ಕೆ ಈ ಸಮ್ಮೇಳನದ ಮೂಲಕ ತಲುಪುವಂತಾಗಲಿ ಎಂದು ನುಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ ದಯಯೇ ಧರ್ಮದ ಮೂಲವಯ್ಯ ಎಂಬ ಮಾತು ಸಮಾಜಕ್ಕೆ ಬೇಕಾಗಿದೆ. ಕಾಯಕವೇ ಕೈಲಾಸ ಎಂಬ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಜನರಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ ವೈಜ್ಞಾನಿಕ ಜಗತ್ತನ್ನು ಬೆಳಸಬೇಕಾಗಿದೆ. ಶರಣ ಸಾಹಿತ್ಯ ಅಂದರೆ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಜೀವನದ ಮಾರ್ಗವೇ ಶರಣ ಸಾಹಿತ್ಯ. ಸಮಾಜದ ಸಂಘರ್ಷದ ನಾಶಕ್ಕೆ ಶರಣ ಸಾಹಿತ್ಯ ಒಂದೇ ಮಾರ್ಗ ಎಂದು ನುಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಸಿದ್ಧರಾಮೇಶ್ವರ ಸಂಸ್ಥಾನದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ಮಾದಾರಚನ್ನಯ್ಯ ಗುರುಪೀಠದಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮಿಗಳು, ಶ್ರೀ ಕಬೀರಾನಂದಾಶ್ರಮದ ಸದ್ಗುರು ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳು, ಡಾ. ಬಸವಪ್ರಭುಸ್ವಾಮಿಗಳು, ಯೋಗಗುರು ಚನ್ನಬಸವಣ್ಣ, ಸಿದ್ದಯ್ಯನಕೋಟೆಯ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು ವಹಿಸಿದ್ದರು. ಸಮಾರಂಭದಲ್ಲಿ ನಾಡೋಜ ಶ್ರೀ ಗೊ.ರ.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಶ್ರೀ ಕೆ ಎಸ್ ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ, ಆಡಳಿತಮಂಡಳಿ ಸದಸ್ಯರಾದ ಶ್ರೀ ಎಸ್.ಎನ್.ಚಂದ್ರಶೇಖರ್, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನುಭವ ಸಂಗಮ-ಸ್ಮರಣ ಸಂಚಿಕೆ, ಶರಣ ದರ್ಶನ ಹಾಗೂ ಶರಣ ಮೇದಾರ ಕೇತಯ್ಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಟ್ಯರಂಜನಿ ನೃತ್ಯಕಲಾಕೇಂದ್ರ, ಡಾ.ನಂದಿನಿ ಶಿವಪ್ರಕಾಶ್, ಚಿತ್ರ ತಂಡ ಕಲಾಕೇಂದ್ರದವರು ವಚನ ರೂಪಕ, ಶ್ರೀ ತೋಟಪ್ಪ ಉತ್ತಂಗಿ, ಶ್ರೀಮತಿ ಕೋಕಿಲ ರುದ್ರಮೂರ್ತಿ ವಚನ ಸಂಗೀತ, ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದವರಿಂದ ಸಾಮೂಹಿಕ ವಚನ ಗಾಯನ ಹಾಗೂ ಗಾಯತ್ರಿ ಮತ್ತು ತಂಡದವರಿಂದ ವೀಣಾವಾದನ ನಡೆಸಿಕೊಟ್ಟರು.
ಸಮಾರಂಭದಲ್ಲಿ ಡಾ.ರೂಪ ನಿರೂಪಿಸಿ, ಡಾ.ಕೆ.ಎಂ.ವೀರೇಶ್ ಸ್ವಾಗತಿಸಿದರು.
ಚಿತ್ರದುರ್ಗ ಜ. 31 : ಚಿತ್ರದುರ್ಗ ನಗರದ ಪಾರ್ಶ್ವ ನಾಥ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಶ್ರೀಹರಿ 24-2025ನೇ ಸಾಲಿನಲ್ಲಿ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 31 :…
ಬೆಂಗಳೂರು: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಾ ಇದ್ದು, ಚೇತರಿಕೆಯೇ ಕಾಣದೆ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿರುವವರಿಗೆ, ಘನತೆಯಿಂದ ಸಾಯುವ ಹಕ್ಕನ್ನು ನೀಡಿ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 31 : ಚಿತ್ರದ…
ಚಿತ್ರದುರ್ಗ.ಜ.31: ಕಳೆದ ಡಿ.14 ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಜಿಲ್ಲೆಯಲ್ಲಿ ಬಾಕಿ ಇದ್ದ 4,777 ವ್ಯಾಜ್ಯ ಪ್ರಕರಣಗಳನ್ನು ರಾಜಿ…
ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಜನವರಿ 31 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ...!…