ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ, ಇನ್ನೇನು ಅಂತ್ಯ ಸಂಸ್ಕಾರ ಮಾಡಬೇಕಾಗಿತ್ತು. ಆದರೆ ಅಷ್ಟರಲ್ಲಿ ನಾನು ಬದುಕಿದ್ದೇನೆ ಎಂದು ತೋರೀಸದವರು ಆ ವೃದ್ಧೆ. ತಕ್ಷಣ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಬದುಕಲಿಲ್ಲ. ಇಂಥ ಘಟನೆ ನಡೆದಿರುವುದು ಪೆರು ದೇಶದಲ್ಲಿ.
ಕೆಲವೊಮ್ಮೆ ಇಂಥ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತಲಿರುತ್ತವೆ. ರೋಸಾ ಇಸೆಬಲ್ ಎಂಬ ಮಹಿಳೆಯ ತನ್ನ ಮೈದುನನ ಜೊತೆ ಕಾರಿನಲ್ಲಿ ಹೋಗುತ್ತಿದ್ದರು. ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದರು. ಇಸಬೆಲ್ ಕೂಡ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಎಲ್ಲಾ ವಿಧಿವಿಧಾನದ ಮೂಲಕ ಅಂತ್ಯ ಸಂಸ್ಕಾರ ಮಾಡಲು ತೆರಳಿದಾಗ ಅಜ್ಜಿ ಶವ ಪೆಟ್ಟಿಗೆಯ ಒಳಗೆ ಬೆರಳಿನಿಂದ ಸದ್ದು ಮಾಡಿದ್ದರು. ತಕ್ಷಣ ಶವ ಪೆಟ್ಟಿಗೆ ತೆಗೆದು ನೋಡಿದರೆ ಅಜ್ಜಿ ಬದುಕಿದ್ದರು.
ಸ್ವಲ್ಪ ಗಾಬರಿಗೊಂಡ ಮನೆಯವರು ತಕ್ಷಣ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಸಬೆಲ್ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಕೋಮಾಗೆ ಹೋಗಿದ್ದ ವೃದ್ದೆಯನ್ನು ಮೃತಪಟ್ಟಿದ್ದಾರೆಂದು ಘೋಷಿಸಿದ್ದರು. ಇದೀಗ ಮತ್ತೆ ಮೃತಪಟ್ಟ ಅಜ್ಜಿಗೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.






GIPHY App Key not set. Please check settings