Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಸಡಗರ ಸಂಭ್ರಮದ ಶಾರದಾ ಪೂಜೆ ಆಚರಣೆ

Facebook
Twitter
Telegram
WhatsApp

ಚಿತ್ರದುರ್ಗ, (ಮಾ.18) : ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಸಡಗರ ಸಂಭ್ರಮದಿಂದ ಶಾರದಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯಾದ ವೈಭವಿರವರು  ಶಾರದಾ ಪೂಜಾ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಸಂತ ಪಂಚಮಿಯನ್ನು ಶಾರದಾದೇವಿ ಹುಟ್ಟಿದ ದಿನವನ್ನಾಗಿ ಆಚರಿಸುತ್ತೇವೆ.
ಶಾರದೆಯನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಸರಸ್ವತಿ ,ಭಾರತಿ, ವೇದಮಾತೆ,  ವೀಣಾಪಾಣಿ ,ಬ್ರಾಹ್ಮಿ, ವಾಗೀಶ್ವರಿ ಹೀಗೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸರಸ್ವತಿ ದೇವಿಯ ಪ್ರಸ್ತಾವನೆ ನಮಗೆ ಮೊದಲು ಋಗ್ವೇದದಲ್ಲಿ ಕಂಡುಬರುತ್ತದೆ .

ಸರಸ್ವತಿ ವೇದಗಳಿಗೂ ಹಾಗು ವಿಜ್ಞಾನಕ್ಕೆ ಅಧಿದೇವತೆಯೆಂದು ಹಲವು ಶಾಸ್ತ್ರ ಗ್ರಂಥಗಳಲ್ಲಿ ವರ್ಣಿತವಾಗಿದೆ.ಸರಸ್ವತಿ ಎಂದರೆ ಸೊಗಸಾದ ನೀರಿನ ಪ್ರವಾಹ ಎಂದರ್ಥ
ಪುರಾಣಗಳ ಪ್ರಕಾರ ಸರಸ್ವತಿ ಬ್ರಹ್ಮನ ಮೊದಲ ಸೃಷ್ಟಿ ಎಂದು ಉಲ್ಲೇಖಿಸಲಾಗಿದೆ.

ಬ್ರಹ್ಮನನ್ನು ಸೃಷ್ಟಿಕರ್ತ ಎಂದು ಕರೆಯುತ್ತಾರೆ ಹಾಗೇ ಸೃಷ್ಟಿಕರ್ತನಿಗೆ ಬುದ್ಧಿವಂತಿಕೆ ಬೇಕು ಆ ಬುದ್ಧಿವಂತಿಕೆ ಯೇ ಸರಸ್ವತಿ. ಶಾರದಾದೇವಿ ಸರಸ್ವತಿಯ ಮತ್ತೊಂದು ರೂಪ  ಶಾರದೆಯು ಆದಿಶಂಕರಾಚಾರ್ಯರಿಂದ ಪೂಜಿಸಲ್ಪಟ್ಟಿದ್ದಳು ಎಂದು ಹೇಳಲಾಗುತ್ತದೆ.

ಸರಸ್ವತಿಯನ್ನು ವೇದಗಳ ಮಾತೆ ಸ್ವರಗಳ ಮಾತೆ  ಜ್ಞಾನ ಮಾತೆ ಎಂದು ಕರೆಯುತ್ತಾರೆ ಸರಸ್ವತಿಯು  ಭಾವಚಿತ್ರಗಳಲ್ಲಿ ಹಂಸದ ಮೇಲೆ ಆಸೀನರಾಗಿರುವುದನ್ನು ನೋಡುತ್ತೇವೆ. ಹಂಸ ಜ್ಞಾನದ ಸಂಕೇತ  ನವಿಲು ಕಲೆ ನೃತ್ಯ-ಸಂಗೀತ ಸೌಂದರ್ಯದ ಸಂಕೇತ  ಇನ್ನು ಸರಸ್ವತಿಯ ಬಿಳಿಸೀರೆ,  ಶಾಂತಿ.,ಚಂಪಹೂ ,ಸ್ವಚ್ಛತೆ ಹಾಗು ಪವಿತ್ರತೆಯ ಪ್ರತೀಕವಾಗಿದೆ. ಎಲ್ಲಿ ಸ್ವಚ್ಛತೆ ಪಾವಿತ್ರತೆ ಇರುತ್ತದೆ ಅಲ್ಲಿ ಜ್ಞಾನದ ಬೆಳವಣಿಗೆ ಆಗುತ್ತದೆ .ಸರಸ್ವತಿ ಕೈಯಲ್ಲಿರುವ ವೀಣೆ ಆಧ್ಯಾತ್ಮ ಧರ್ಮ ಮತ್ತು ಚೇತನ ಜ್ಞಾನ  ಸಂಗೀತದ ಪ್ರತೀಕವಾಗಿದೆ .

ವೀಣೆಯಿಂದ ಹೂರಹೂಮ್ಮುವ ಸಂಗೀತ ಅಂಧಕಾರವನ್ನು ದೂರಮಾಡಿ ಬೆಳಕಿನಡೆಗೆ ದಾರಿ ತೋರುತ್ತದೆ ಹಾಗೂ ವೀಣೆಯ ನಾದ ಸ್ತ್ರೀ ಶಕ್ತಿ ಯ ಪ್ರತೀಕ ಎನ್ನುತ್ತಾರೆ ವೀಣೆಯಲ್ಲಿ ದೇವಾನುದೇವತೆಗಳು  ನೆಲಸಿರುತ್ತಾರೆ  ಎಂಬ ನಂಬಿಕೆ ಪುರಾತನ ಕಾಲದಿಂದಲೂ ಇದೆ.

ಸರಸ್ವತಿ 4 ಬುಜಗಳು ಕೈಗಳು  ಸನಾತನ ಧರ್ಮದಲ್ಲಿ ನಾಲ್ಕು ವೇದಗಳ ಪ್ರತೀಕವೆಂದು ನಂಬಲಾಗಿದೆ.  ಸರಸ್ವತಿ ಕೈಯಲ್ಲಿರುವ ವೀಣೆ  ಪುಸ್ತಕ ಸತ್ಯದ ಮಹತ್ವದ ದರ್ಶನ ಮಾಡಿಸುತ್ತದೆ ಕೈಯಲ್ಲಿರುವ ಜಪಮಾಲೆ ಇದು ಮನಸ್ಸಿನ ಏಕಾಗ್ರತೆ ಹಾಗೂ ಜ್ಞಾನದ ಪ್ರತೀಕವಾಗಿದೆ. ಸರಸ್ವತಿ ಕಮಲದ ಮೇಲೆ ಆಸೀನಳಾಗಿದಾಳೆ. ಕಮಲ ಹೇಗೆ ಕೆಸರಿನಲ್ಲಿ ಹುಟ್ಟಿದರೂ  ಕೆಸರಿನಲ್ಲಿ ಅರಳಿ ನಿಂತರು.

ಕೆಸರನ್ನು ಮೈಗೆ ಅಂಟಿಸಿಕೊಳ್ಳದೇ ತನ್ನ ಸೌಂದರ್ಯವನ್ನು ಬಿಂಬಿಸುತ್ತದೆ ಹಾಗೆ ಮನುಷ್ಯರು ಸಹ ದೈನಂದಿನ ಜೀವನದ ಜಂಜಾಟಗಳಲ್ಲಿ ಇದ್ದರೂ ಸಹ ಅದರಲ್ಲಿ ಮುಳುಗದೆ ತಮ್ಮ ತಮ್ಮ ಸತ್ವವನ್ನು ಕಾಪಾಡಿಕೊಳ್ಳಬೇಕು.

ದುಶ್ಚಟಗಳಿಂದ ಮುಕ್ತರಾಗಬೇಕೆಂದು ನಮಗೆ ತಿಳಿಸುತ್ತದೆ ಅಂಧಕಾರದಿಂದ ಮನುಷ್ಯನನ್ನು ಬೆಳಕಿನಡೆಗೆ ಅಥವಾ ಸುಧಾರಣೆ ತರಲು ಮಾತೆ ಸರಸ್ವತಿ ಆಶೀರ್ವಾದ ಬಹಳ ಮುಖ್ಯ.  ಸರಸ್ವತಿಯನ್ನು ಆರಾಧಿಸುವುದು. ಜ್ಞಾನ ವೃದ್ಧಿ ಗೋಸ್ಕರ .ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂದು ಹಿರಿಯರು ಹೇಳಿದ್ದಾರೆ ಸರಸ್ವತಿ ತಾಯಿಯ ಬಗ್ಗೆ ಒಂದು ಮಾತಿದೆ ದೇವಿ ಕಲಿಯದೆ ಒಲಿಯುವುದಿಲ್ಲ.

ನಿರಂತರ ಪ್ರಯತ್ನ ಇದ್ದರೆ ಮಾತ್ರ ಸಾಧ್ಯ ಎಂದು ಹೇಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳೆಲ್ಲರೂ ಈಗಿನಿಂದಲೇ ತಮ್ಮ ಪರೀಕ್ಷಾ ಸಿದ್ಧತೆಯನ್ನು  ಚೆನ್ನಾಗಿ ಮಾಡಿಕೊಂಡರೆ  ಪರೀಕ್ಷೆಯಲಿ ಯಶಸ್ಸು ನಿಮ್ಮದಾಗುತ್ತದೆ ತಿಳಿಸಿದರು.

ಪೂಜಾ ಕಾರ್ಯಕ್ರಮವನ್ನು ವೀಣಾ ಹಾಗೂ ಮುಕ್ತ ನೆರವೇರಿಸಿಕೊಟ್ಟರು. ಮಹಾಮಂಗಳಾರತಿ ನಂತರ ವಿದ್ಯಾರ್ಥಿಗಳಿಗೆ  ಪ್ರಸಾದ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿಗಳಾದ ಹನುಮೇಶ್‍ಪದಕಿ ರವರು ಶಿಕ್ಷಕ ವೃಂದದವರು ಮತ್ತು ಮಕ್ಕಳು  ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!