Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಎಸ್‌.ಜೆ.ಎಂ.ಟಿ.ಯಲ್ಲಿ ಅದ್ದೂರಿಯಾಗಿ ನಡೆದ ಗ್ರಾಜ್ಯೂಯೇಷನ್ ಡೇ-2023

Facebook
Twitter
Telegram
WhatsApp

ಚಿತ್ರದುರ್ಗ,(ಜ.27) : ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಇಂದು ಗ್ರಾಜ್ಯೂಯೇಷನ್ ಡೇ-2023 ಕಾರ್ಯಕ್ರಮವನ್ನು ಶ್ರೀಮರುಘಾಮಠದ ಅನುಭವಮಂಟಪದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ್ದ  ಇಸ್ರೋದ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್‌ನ ಗ್ರೂಪ್ ಡೈರೆಕ್ಟರ್ ಶ್ರೀ ರಮೇಶ್ ವಿ ನಾಯ್ಡು ಮಾತನಾಡಿ, ನಾವುಗಳು ಜೀವನದ ಪ್ರತಿ ಹಂತದಲ್ಲೂ ಕಲಿಯುತ್ತಾ ಬರುತ್ತೇವೆ.

ಜೀವನವಿರುವವರೆಗೂ ಕಲಿಕೆ ಇದ್ದೇ ಇರುತ್ತದೆ, ಕಲಿಕೆ ನಿರಂತರ. ನಮ್ಮ ಪ್ರತಿ ಚಿಕ್ಕ-ಪುಟ್ಟ ಅನುಭವಗಳು ನಮಗೆ ಪಾಠವನ್ನು ಹೇಳಿಕೊಡುತ್ತವೆ. ನಮ್ಮ ಸ್ವಂತ ಮತ್ತು ಬೇರೆಯವರ ಅನುಭವಗಳಿಂದ ಕಲಿಯಬೇಕು. ಓದಿದ ಮಾತ್ರಕ್ಕೆ ವಿದ್ಯಾವಂತರಾಗುವುದಿಲ್ಲ. ಜೀವನದ ಅನುಭವ ಕಂಡಾಗ  ನಿಜವಾದ ವಿದ್ಯಾವಂತರಾಗುತ್ತೇವೆ. ಸಣ್ಣ ಸಣ್ಣ ವಿಚಾರಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ. ನಾವು ನಮ್ಮ ಗುರಿಯ ಕಡೆ ನಡೆಯುವಾಗ ಅದಕ್ಕೆ ಪ್ರೋತ್ಸಾಹಿಸುವುವವರು ಇರುವಂತೆ ಕಾಲೆಳೆಯುವವರು ಇರುತ್ತಾರೆ. ನಾವು ಪ್ರೋತ್ಸಾಹದ ಕಡೆ ಮಾತ್ರ ಗಮನ ಹರಿಸಿ ಯಶಸ್ಸನ್ನು ಸಾಧಿಸಬೇಕು.

ನಾವು ಬದುಕಿನ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಬೇಕು. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು. ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಕುರಿತು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಈ ಹಿಂದೆ ನಾವು ಏನು ಸಾಧಿಸಿದ್ದೇವೆ ಎನ್ನುವುದಕ್ಕಿಂತ ಇಂದು ನಾವು ಏನಾಗಿದ್ದೇವೆ ಎಂಬುದರ ಕಡೆಗೆ ಗಮನ ಹರಿಸಬೇಕು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ರೀ ವಿ ಎಸ್ ವಸ್ತ್ರದ್ ಮಾತನಾಡಿ, ವಿದ್ಯಾರ್ಥಿಗಳಿಗೆ ತರಬೇತಿ ತುಂಬ ಮುಖ್ಯ ನಾವು ಹಿಂದೆ ಅಲೆಕ್ಸಾಂಡರ್‍ನ ಚಿಕ್ಕ ಸೈನ್ಯದ ಮುಂದೆ ಮೊದಲು ಸೋಲಲು ಮುಖ್ಯ ಕಾರಣ ತರಬೇತಿ ಕೊರತೆ.

ಹೆಚ್ಚು ತರಬೇತಿ ಪಡೆದವನು ಸಮಸ್ಯೆಗಳನ್ನು ನಿರ್ಭೀತವಾಗಿ ನಿಭಾಯಿಸಬಲ್ಲ. ಹೀಗಾಗಿ ವಿದ್ಯಾರ್ಥಿಗಳು ತರಬೇತಿಯ ಕಡೆ ಗಮನ ಹರಿಸಬೇಕು. ಸವಾಲುಗಳನ್ನು ಎದುರಿಸಬೇಕು. ವಿದ್ಯಾರ್ಥಿ-ಶಿಕ್ಷಕರದ್ದು ಅವಿನಾಭಾವ ಸಂಬಂಧ. ಅದು ನಿರಂತರವಾದ ಸಂಬಂಧ.

ಗೋಲ್‍ಗುಂಬಜ್, ತಾಜ್‍ಮಹಲ್, ಹಂಪಿ ಇವೆಲ್ಲವೂ ಅಂದಿನ ಕಾಲದ ತಂತ್ರಜ್ಞರ ಮತ್ತು ವಾಸ್ತುಶಿಲ್ಪಿಗಳ ಮಹತ್ತರ ಸಾಧನೆಗಳಾಗಿವೆ. ಸಮಾಜಕ್ಕೆ ಇಂಜಿನಿಯರುಗಳ ಕೊಡುಗೆ ಅಪಾರ. ಅಬ್ಬುಲ್ ಕಲಾಂರಂತಹ ಮಹನೀಯರು ಸಮಾಜದ ಏಳಿಗೆಗೆ ಮನುಕುಲದ ಉದ್ಧಾರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

ನೀವುಗಳು ನಿಮ್ಮ ಭವಿಷ್ಯ ರೂಪಿಸಿರುವುದರ ಜೊತೆಗೆ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕು. ಮುಂದಿನ ಎರಡು ತಿಂಗಳಿನಲ್ಲಿ ಚುನಾವಣೆ ಬರುವ ಹಿನ್ನಲೆಯಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ನಿಮ್ಮ ಮತವನ್ನು ತಪ್ಪದೇ ಚಲಾಯಿಸಬೇಕು ಎಂದು ನುಡಿದರು.

ಪ್ರಾಂಶುಪಾಲರಾದ ಡಾ.ಭರತ್ ಪಿ.ಬಿ. ಮಾತನಾಡಿ, ವಿದ್ಯಾರ್ಥಿಗಳು ಕಳೆದೆರಡು ವರ್ಷಗಳಲ್ಲಿ ಕೋವಿಡ್-19 ಸವಾಲುಗಳನ್ನು ಮೆಟ್ಟಿ ನಿಂತು ತಮ್ಮ ಪದವಿ ಶಿಕ್ಷಣ ಪೂರೈಸಿದ್ದಾರೆ. ಇದು ಸಂತಸದ ವಿಚಾರ. ಕೋವಿಡ್ ಸಮಯದ ಅನುಭವಗಳು ನಿಮ್ಮ ಮುಂದಿನ ಸಾಧನೆಗೆ ಸಹಕಾರಿಯಾಗಲಿ.

ನಮ್ಮ ಆರ್ಥಿಕ ವ್ಯವಸ್ಥೆಯು ಸ್ವಾತಂತ್ಯ್ರ ನಂತರದಲ್ಲಿ ಸದೃಡವಾಗಿ ಬೆಳೆಯುತ್ತಾ ಬಂದಿದೆ. ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕ್ಷೇತ್ರದ್ದೆ ಹೆಚ್ಚಿನ ಪಾಲು. ಇಂದಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಪಾಲು ನೀಡುತ್ತಾ ಬಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ಜಿಡಿಪಿ ಗಣನೀಯವಾಗಿ ಏರಿಕೆಯಾಗುವ ಆಶಾದಾಯಕವಿದೆ. ಆರ್ಥಿಕ ವ್ಯವಸ್ಥೆಯು ಡಿಜಿಲೀಕರಣವಾಗಲಿದೆ.

ತಂತ್ರಜ್ಞಾನ ವ್ಯವಸ್ಥೆಯು ಅಭಿವೃದ್ಧಿಯಾಗಲಿದೆ. ಇಂತಹ ಸಂದರ್ಭದಲ್ಲಿ ನಾವುಗಳು ಅವಕಾಶಗಳನ್ನು ಬಳಸಿಕೊಂಡು ಮುಂದುವರೆಯಬೇಕು. ಸರ್ಕಾರದ ವಿವಿಧ ಯೋಜನೆಗಳಾದ ಮುದ್ರಾ. ಸ್ವಯಂ ಇನ್ನಿತರ ಯೋಜನೆಗಳ ಅನುಕೂಲ ಪಡೆದು ಸ್ವಉದ್ಯೋಗ  ಪ್ರಾರಂಭಿಸಿ ಉದ್ಯಮಿಗಳಾಗಬೇಕು ಎಂದು ನುಡಿದರು.

ಸಮಾರಂಭದಲ್ಲಿ ಡಾ.ಬಿ.ಜಿ.ಕುಮಾರಸ್ವಾಮಿ, ಡಾ. ಎನ್ ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಸಿದ್ಧೇಶ್ ಕೆ.ಬಿ., ಡಾ.ಶ್ರೀಶೈಲ ಜೆ.ಎಂ., ಡಾ.ಲೋಕೇಶ್ ಹೆಚ್. ಜೆ. ಡಾ.ನಿರಂಜನ್ ಈ, ಪ್ರೊ.ಶಶಿಧರ ಎ.ಪಿ., ಸಂಚಾಲಕ ಪ್ರೊ.ಲವಕುಮಾರ್ ಟಿ.ಬಿ. ಉಪಸ್ಥಿತರಿದ್ದರು.

ಪ್ರೊ.ಪೋರಾಳ್ ನಾಗರಾಜ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಅನುಷಾ ವಿ ನಿರೂಪಿಸಿ, ಪ್ರೊ.ಚೇತನ್ ಎಸ್ ಸ್ವಾಗತಿಸಿ, ಅನನ್ಯಾ       ಮೋನಿಕಾ ವಿ ಕೆ  ಪ್ರಾರ್ಥಿಸಿ, ಪ್ರೊ.ಅಪೂರ್ವ ಜಿ.ಓ. ವಂದಿಸಿದರು.

ಸಮಾರಂಭದಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದಕ ನೀಡಿ ಗೌರವಿಸಲಾಯಿತು. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದ 260 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Summer Migraine: ಬಿಸಿಲಿಗೆ ಹೋದಾಗ ಈ ನಿಯಮಗಳನ್ನು ಪಾಲಿಸಿ : ಮೈಗ್ರೇನ್‌ ನಿಂದ ದೂರವಿರಿ….!

ಸುದ್ದಿಒನ್ : ಈ ಬೇಸಿಗೆಯಲ್ಲಿ ಬಿಸಿಲು ಜೋರಾಗಿದೆ. ತಾಪಮಾನವು 37 ರಿಂದ 40 ಡಿಗ್ರಿ  ಆಸುಪಾಸಿನಲ್ಲಿದೆ. ವಿಪರೀತ ಬಿಸಿಲಿನಿಂದ ಮಕ್ಕಳಿಂದ ವೃದ್ಧರವರೆಗೆ ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಮೈಗ್ರೇನ್ ಪೀಡಿತರು ಸ್ವಲ್ಪ ಹೆಚ್ಚು

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ, ಈ ರಾಶಿಯವರ ಉದ್ಯೋಗದಲ್ಲಿ ತುಂಬಾ ಸಮಸ್ಯೆ ಅದರ ಜೊತೆ ಹಣಕಾಸಿನ ಸಮಸ್ಯೆ ಕಾಡಲಿದೆ, ಬುಧವಾರ ರಾಶಿ ಭವಿಷ್ಯ -ಏಪ್ರಿಲ್-24,2024 ಸೂರ್ಯೋದಯ: 05:57,

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

error: Content is protected !!