ಸರ್ಕಾರಿ ಆಸ್ಪತ್ರೆ ವೈದ್ಯರ ಹಾದಿರಂಪ- ಬೀದಿರಂಪ : ವೀಡಿಯೋ ವೈರಲ್

ಚಿತ್ರದುರ್ಗ: ವೈದ್ಯರನ್ನು ನಂಬುವಷ್ಟು ಜನ ದೇವರನ್ನು ನಂಬುವುದಿಲ್ಲವೇನೊ.‌ ಇಂಥ ವೈದ್ಯರು ಸಾವು ಬದುಕಿನ ನಡುವೆ ಹೋರಾಡುವ ರೋಗಿಗಳ ಕಡೆ ಗಮನ ಹರಿಸಿ, ಚಿಕಿತ್ಸೆ ನೀಡುವುದನ್ನು ಬಿಟ್ಟು, ತಮ್ಮದೇ ಸಮಸ್ಯೆಗಳಿಗೆ ರೋಗಿಗಳಿಗೆ ನರಕ ತೋರಿಸುತ್ತಿದ್ದಾರೆ. ವೈದ್ಯರಿಬ್ಬರು ಹಾದಿ ರಂಪ ಬೀದಿ ರಂಪ ಮಾಡಿಕೊಂಡು ಕೂತಿದ್ದಾರೆ. ಈ ಘಟನೆ ನಡೆದಿರೋದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಾಪುರ ಹೋಬಳಿಯ ಸರ್ಜಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ. ಇದು ಸಚಿವ ಡಾ.ಸುಧಾಕರ್ ಅವರ ಕ್ಷೇತ್ರವೂ ಹೌದು.

ಸದ್ಯ ರೋಗಿಗಳ ಕಡೆ ಗಮನ ಕೊಡದೆ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವವರು ಡಾ.ಚಂದ್ರಮೌಳಿ ಹಾಗೂ ಡಾ.ಹನುಮಂತರಾಯಪ್ಪ. ಈ ಇಬ್ಬರ ಮೇಲೆ ಸಾಕಷ್ಟು ದೂರುಗಳು ಸಹ ಇದಾವೆ. ಡಾ.ಹನುಮಂತರಾಯಪ್ಪ ರೋಗಿಗಳ ಮೇಲೆ ಹಲ್ಲೆ ಮಾಡಿ ಹುಚ್ಚಾಟ ಮೆರೆದರೆ ಅತ್ತ ಡಾ.ಚಂದ್ರಮೌಳಿ ಕುಡಿದು ಬಂದು ಡ್ಯೂಟಿ ಮಾಡುತ್ತಿದ್ದಾರೆ. ರೋಗಿಗಳು ಇವರಿಬ್ಬರ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ.

ಡಾ.ಚಂದ್ರಮೌಳಿಯ ಕುಡಿತದ ಅವತಾರವನ್ನು ಸಾರ್ವಜನಿಕರು ವಿಡಿಯೋ ಮಾಡಿ, ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆದರೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಗಿಗಳು ಚಿಕಿತ್ಸೆಗೆಂದು ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಹೋದರೆ ಕುಡಿದೇ ಟ್ರೀಟ್ಮೆಂಟ್ ನೀಡುತ್ತಾರೆ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಇದರಿಂದ ಸಂಬಂಧಪಟ್ಟವರು ಮೊದಲು ಅಮಾನತು ಮಾಡಿ. ಆ ಇಬ್ಬರು ವೈದ್ಯರು ಆಸ್ಪತ್ರೆಯಲ್ಲಿರಬಾರದೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಯಾವುದೇ ಸಣ್ಣ ಪುಟ್ಟ ಕಾಯಿಲೆಯಾಗಲಿ, ದೊಡ್ಡ ದೊಡ್ಡ ಕಾಯಿಲೆಯಾಗಲೀ ವೈದ್ಯರು ಬದುಕಿಸುತ್ತಾರೆಂಭ ನಂಬಿಕೆಯಿಂದ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಹೀಗೆ ಕುಡಿದು ಚಿಕಿತ್ಸೆ ನೀಡಿದರೆ ಜನ ತಮ್ಮ ಜೀವದ ಬಗ್ಗೆ ಆತಂಕಗೊಳ್ಳುವುದಿಲ್ಲವಾ..?

suddionenews

Recent Posts

ಈ ರಾಶಿಯವರಿಗೆ ಅದೃಷ್ಟದ ಯೋಗಗಳ ಸುರಿಮಳೆ

ಈ ರಾಶಿಯವರಿಗೆ ಅದೃಷ್ಟದ ಯೋಗಗಳ ಸುರಿಮಳೆ, ಮಂಗಳವಾರದ ರಾಶಿ ಭವಿಷ್ಯ 11 ಫೆಬ್ರವರಿ 2025 ಸೂರ್ಯೋದಯ - 6:48 AM…

2 hours ago

ಬೇಡಿಕೆ ಈಡೇರಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳ ಧರಣಿ

ಹಿರಿಯೂರು : ನಗರದ ತಾಲೂಕು ಕಚೇರಿ ಮುಂಭಾಗ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ…

10 hours ago

ಯತ್ನಾಳ್ ಗೆ ಶಾಕ್ ನೀಡಿದ ಹೈಕಮಾಂಡ್ : ಏನದು..?

ಬೆಂಗಳೂರು: ಮೊದಲಿನಿಂದಾನೂ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೆ ಇದ್ದಾರೆ. ಇದರ ಮಧ್ಯೆ ಯಡಿಯೂರಪ್ಪ ಅವರಿಗೆ…

11 hours ago

ಫೆಬ್ರವರಿ 12ರಂದು ಶ್ರೀ ರೇಣುಕಾಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ಆರ್.ಎಸ್.ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಇದೇ…

11 hours ago

ಚಿತ್ರದುರ್ಗದಲ್ಲಿ ಖೋ-ಖೋ ಸಂಸ್ಥೆ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

11 hours ago

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಮೋಸ : ಅರ್ಜುನ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

11 hours ago