in

ಸರ್ಕಾರಗಳು ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು :  ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

suddione whatsapp group join

ಚಿತ್ರದುರ್ಗ, (ಏ.29): ಹಳ್ಳಿ ರೈತನೆ ನಿವಾಗಿಯೂ ದೇಶದ ಬೆನ್ನೆಲುಬು. ಆದರೆ ಈಗ ರೈತನ ಬೆನ್ನೆಲುಬು ಮುರಿದಿದೆ. ಗಟ್ಟಿಯಾಗಿರಬೇಕಾದರೆ ಸರ್ಕಾರಗಳು ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಚಿಕ್ಕಬೆನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ನಡೆದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಲಕ್ಷಾಂತರ ಕೋಟಿ ರೂ.ಗಳ ಸಾಲ ಪಡೆದು ವಿದೇಶಕ್ಕೆ ಹಾರಿರುವವರಿಂದ ಸಾಲ ವಸೂಲು ಮಾಡುವ ಬದಲು ಬಡ ರೈತರಿಂದ ಸರ್ಕಾರಗಳು ಬಲವಂತವಾಗಿ ಸಾಲ ವಸೂಲು ಮಾಡುವುದು ಸರಿಯಾದ ಕ್ರಮವಲ್ಲ. ಕೃಷಿ ಪ್ರಧಾನ ದೇಶ ಭಾರತ ಉಳಿಯಬೇಕಾದರೆ ಮೊದಲು ರೈತ ಉಳಿಯಬೇಕು. ಹಾಗಾಗಿ ಆಳುವ ಸರ್ಕಾರಗಳು ಸಣ್ಣ ರೈತ, ದೊಡ್ಡ ರೈತ ಎಂದು ವರ್ಗಿಕರಿಸದೆ ಎಲ್ಲಾ ರೈತರನ್ನು ಸಮಾನವಾಗಿ ಕಾಣುವ ಮೂಲಕ ನೆರವು ನೀಡಬೇಕು ಎಂದು ತಿಳಿಸಿದರು.

ರೈತರ ಸಮಸ್ಯೆಗಳನ್ನು ನಿವಾರಿಸುವ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು. ಜೀವನದ ಜಂಜಾಟವನ್ನು ಮರೆಯುವ ಕಾರಣಕ್ಕಾಗಿ ಕೆಲವರು ಹಾಲ್ಕೋಹಾಲ್ ಕುಡಿಯುತ್ತಿರಬಹುದು. ಎಂತಹ ಕಷ್ಟ ಎದುರಾದರೂ ಹೆದರಿಸಿ ನಿಲ್ಲುವ ಮನೋಧೈರ್ಯ ಬೆಳೆಸಿಕೊಳ್ಳಬೇಕು.

ಮನಸ್ಸನ್ನು ಗಟ್ಟಿಯಾಗಿಸಿಕೊಂಡರೆ ಮಾತ್ರ ಸದೃಢವಾಗಿರಬಹುದು. ಸಹಕಾರ ಕ್ಷೇತ್ರಕ್ಕೆ ಈಗಾಗಲೆ ಕೆಟ್ಟ ಹೆಸರು ಬಂದಿದೆ. ಎಲ್ಲೋ ಕೆಲವು ಮುಳುಗಿರಬಹುದು. ಆದರೆ ಎಲ್ಲಾ ಸಹಕಾರ ಸಂಘಗಳು ನಷ್ಟದಲ್ಲಿಲ್ಲ. ಎಲ್ಲಿ ಲಾಭದಲ್ಲಿ ಚೆನ್ನಾಗಿ ಮುನ್ನಡೆಯುತ್ತಿದೆಯೋ ಅಂತಹ ಸಹಕಾರ ಸಂಘಗಳಲ್ಲಿ ದಕ್ಷತೆ, ಪ್ರಾಮಾಣಿಕತೆಯ ಆಡಳಿತ ಮಂಡಳಿ ಇದೆ ಎನ್ನುವುದು ಗೊತ್ತಾಗುತ್ತದೆ. ರೈತರ ಕಷ್ಟಗಳನ್ನು ನಿವಾರಿಸುವ ಪಾಲಿಸಿಗಳನ್ನು ರೂಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಚಿಕ್ಕಬೆನ್ನೂರು ಗ್ರಾಮದಲ್ಲಿ ವಿವಿಧ ಕಾಮಗಾರಿ ಹಾಗೂ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡುತ್ತ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾನಿಂದ ಹಿಡಿದು ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ರೈತರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿದ್ದಾರೆ. ವಿದ್ಯಾಸಿರಿ ಯೋಜನೆ ಮೂಲಕ ರೈತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದರಿಂದ ಹೊರದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯಲು ರೈತ ಮಕ್ಕಳಿಗೆ ವರದಾನವಾಗಿದೆ.

ದೇಶಕ್ಕೆ ಅನ್ನ ನೀಡುವ ರೈತನ ಬದುಕು ಹಸನಾಗಬೇಕಾದರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ವಿಧಾನಸಭೆ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಸಾಕಷ್ಟು ಚರ್ಚಿಸಲಾಗಿದೆ ಎಂದು ಹೇಳಿದರು.
ಪಶುಗಳಿಗೆ ನೀಡುವ ಮೇವು ಸರಿಯಾಗಿ ಸಿಗುತ್ತಿಲ್ಲ. ದುಬಾರಿಯಾಗಿದೆ ಎಂದು ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಅದಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ.

ಕಳೆದ ಎರಡು ಮೂರು ವರ್ಷಗಳ ಹಿಂದೆ ಮಳೆಯಿಲ್ಲದೆ ರೈತರ ತೋಟಗಳು ಒಣಗಿದ್ದವರು. ಶ್ರೀಗಳ ಕಾಳಜಿ ಹಾಗೂ ಮಾರ್ಗದರ್ಶನದಂತೆ ಕ್ಷೇತ್ರಾದ್ಯಂತ 43 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ರೈತರು ಸೇರಿದಂತೆ ಕ್ಷೇತ್ರ ಜನ ಸಾಕಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿದರು. ಎದೆಗುಂದದೆ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಇದಕ್ಕೆ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪರಿಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಮತ್ತು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್ ಮಾತನಾಡಿ ಚಿತ್ರದುರ್ಗ ಡಿ.ಸಿ.ಸಿ.ಬ್ಯಾಂಕ್‍ನಿಂದ ರೈತರಿಗೆ 440 ಕೋಟಿ ರೂ.ಗಳ ಸಾಲ ನೀಡಲಾಗಿದೆ. ಅದೇ ರೀತಿ ಸಣ್ಣ ರೈತರ ಒಂದು ಲಕ್ಷ ರೂ.ಗಳ ಸಾಲ ಕೂಡ ಮನ್ನಾ ಮಾಡಲಾಗಿದೆ. ಆದರೆ ದುರಾದೃಷ್ಟವಶಾತ್ ರಾಜ್ಯದಲ್ಲಿರುವ ಸಹಕಾರ ಸಂಘಗಳ ಪೈಕಿ ಕೇವಲ ಬೆರಳೆಣಿಕೆಷ್ಟು ಸಹಕಾರ ಸಂಘಗಳು ಮಾತ್ರ ನಷ್ಟದಲ್ಲಿದ್ದು, ಎಲ್ಲಾ ಸಹಕಾರ ಸಂಘಗಳು ನಷ್ಟದಲ್ಲಿದೆ ಎಂದು ಮಾಧ್ಯಮಗಳು ಅಪ್ರಪಚಾರ ಮಾಡುತ್ತಿರುವುದರಲ್ಲಿ ಹುರುಳಿಲ್ಲ. ಎಲ್ಲಾ ಸಹಕಾರ ಸಂಘಗಳು ಲಾಭದಲ್ಲಿ ಮುನ್ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಚಿಕ್ಕಬೆನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ಬಿ.ತೀರ್ಥಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟಗಳ ನಿರ್ದೇಶಕರುಗಳಾದ ತಿಪ್ಪೇಸ್ವಾಮಿ, ಯಶವಂತ್‍ರಾಜು, ಟಿ.ಎ.ಪಿ.ಎಂ.ಸಿ.ಅಧ್ಯಕ್ಷ ಹೆಚ್.ಎಂ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತ ಪ್ರಶಾಂತ್, ಶಿವಮೊಗ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ಗುರುಶೇಖರ್, ಸಹಾಯಕ ವ್ಯವಸ್ಥಾಪಕ ಸಂಜಯ್, ಸಹಕಾರ ಸಂಘದ ನಿಬಂಧಕ ಬಷೀರ್‍ಖಾನ್, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿನೂತ್‍ಕುಮಾರ್, ಕೋಗುಂಡೆ ದ್ಯಾಮಣ್ಣ ವೇದಿಕೆಯಲ್ಲಿದ್ದರು.
ಪಣಿಯಪ್ಪ, ಪ್ರಶಾಂತ್, ರವಿ ಇನ್ನು ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

PSI ನೇನಕಾತಿ ರದ್ದು ಮಾಡಿ ಆದೇಶ ಹೊರಡಿಸಿದ ಸರ್ಕಾರ..!

ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯಾಗಿ ಮೇ ನಲ್ಲಿ ಕೇಂದ್ರ ಸಂಪುಟ ಅನುಮೋದನೆ ನಿರೀಕ್ಷೆ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ