Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರಿ ಆಸ್ಪತ್ರೆಗಳು ಕಾಗದ ರಹಿತವಾಗಿ ಕೆಲಸ ನಿರ್ವಹಿಸಬೇಕು : ಡಾ.ಆರ್.ರಂಗನಾಥ್

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಫೆ.22) : ಸರ್ಕಾರಿ ಆಸ್ಪತ್ರೆಗಳು ಕಾಗದ ರಹಿತವಾಗಿ ಕೆಲಸ ನಿರ್ವಹಿಸುವಂತೆ ಮಾಡುವಲ್ಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳಿಗೆ, ಔಷಧ ವಿತರಣಾಧಿಕಾರಿಗಳು ಮತ್ತು ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳ ಜವಬ್ದಾರಿ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಂಗನಾಥ್ ಹೇಳಿದರು.

ನಗರದ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಬುಧವಾರ ಇ-ಆಸ್ಪತ್ರೆ ಕಾರ್ಯಕ್ರಮ ಅನುಷ್ಠಾದ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಗಾರ ಉದ್ಘಾಟಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗಳ ಪ್ರತಿಯೊಂದು ದಾಖಲೆಗಳನ್ನು ಕಾಗದರಹಿತವಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ. ಮುಂದಿನ ಹಂತವಾಗಿ ಜಿಲ್ಲೆಯ ಉಳಿದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರಂಭಿಸಲು ಉದ್ದೇಶಿಸಿಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಗಾರದಲ್ಲಿ ಇ- ಪ್ರೋಗ್ರಾಮರ್ ತಿಪ್ಪೇಸ್ವಾಮಿ  ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಿ.ವಿ.ಗಿರೀಶ್, ಡಾ.ಮಧುಕುಮಾರ್ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಮನೆಯಿಂದ ಮತಚಲಾಯಿಸಿದ 3536 ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು

ಚಿತ್ರದುರ್ಗ. ಏ.16: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಿಂದ 16 ವರೆಗೆ ಜರುಗಿದ ಮನೆಯಿಂದ ಮತದಾನ ಕಾರ್ಯ ಪೂರ್ಣಗೊಂಡಿದೆ. 85 ವರ್ಷ ಮೇಲ್ಪಟ್ಟ 2601 ನಾಗರಿಕರು

ಪಿಯುಸಿಯಲ್ಲಿ 2 ಬಾರಿ ಫೇಲ್.. ಯುಪಿಎಸ್ಸಿಯಲ್ಲಿ ಪಾಸ್.. ಕನ್ನಡದಲ್ಲೇ ಪರೀಕ್ಷೆ ಬರೆದ ಬಳ್ಳಾರಿಯ ಶಾಂತಪ್ಪ ಬಗ್ಗೆ ಇಲ್ಲಿದೆ ಮಾಹಿತಿ

ಬಳ್ಳಾರಿ: ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 1016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕದ ಶಾಂತಪ್ಪ ಜಡೆಮ್ಮನವರ್ ಕೂಡ ತೇರ್ಗಡೆಯಾಗಿದ್ದಾರೆ. ಶಾಂತಪ್ಪ ಮೂಲತಃ ಬಳ್ಳಾರಿಯವರು. ಕನ್ನಡದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿರುವುದು

ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ : ಟಾಪ್ ಪಟ್ಟಿಯಲ್ಲಿರುವವರ ಮಾಹಿತಿ ಇಲ್ಲಿದೆ

ಯುಪಿಎಸ್ಸಿ 2023ರ ಸಿವಿಲ್ ಸರ್ವಿಸಸ್ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಅದರಲ್ಲಿ ಆದಿತ್ಯಾ ಶ್ರೀವಾಸ್ತವ್ ಹೆಚ್ಚಿನ ಅಂಕವನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಅನಿಮೇಶ್ ಹಾಗೂ ಪ್ರಧಾನ್, ಡೊನೂರ್ ಅನನ್ಯಾ ರೆಡ್ಡಿ

error: Content is protected !!