Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

LPG ಗ್ಯಾಸ್ ಬಳಕೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ: ಸಿಲಿಂಡರ್ ಗೆ ₹500 ಸಬ್ಸಿಡಿ ಮುಂದುವರಿಕೆ

---Advertisement---

ದೆಹಲಿ.ಜುಲೈ.24: ಇತ್ತೀಚಿನ ದಿನಗಳಲ್ಲಿ ಜಾಗತಿಕ ರಾಜಕೀಯ ಉದ್ವಿಗ್ನತೆ ಹಾಗೂ ಅಮೆರಿಕ-ಇರಾನ್ ನಡುವಿನ ಸಂಘರ್ಷದಿಂದಾಗಿ ಎಲ್ ಪಿ ಜಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಅನಿಲ ದರಗಳು ತೀವ್ರ ಏರಿಕೆ ಕಂಡಿದ್ದವು. ಇದೀಗ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟು ಮತ್ತೆ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ, ಗ್ಯಾಸ್ ಬೆಲೆಗಳು ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಶುರುವಾಗಿತ್ತು. ಆದರೆ ಈ ನಡುವೆಯೇ ಕೇಂದ್ರ ಸರ್ಕಾರವು ಅಡುಗೆ ಅನಿಲ ಬಳಕೆದಾರರಿಗೆ ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರೂ ದೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಕೊರತೆಯಾಗದಂತೆ ಕ್ರಮ ವಹಿಸಲಾಗಿದ್ದು, ಗ್ರಾಹಕರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಮುಂದುವರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ನ ನೈಜ ಬೆಲೆ ಸುಮಾರು 1,695 ರೂಪಾಯಿಗಳಷ್ಟಿದೆ. ಆದರೆ, ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ತಡೆಯಲು ಸರ್ಕಾರವು ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿದೆ.

ಸಾಮಾನ್ಯ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗಳ ಪ್ರಸ್ತುತ ಚಿಲ್ಲರೆ ಬೆಲೆ 942 ರೂಪಾಯಿಗಳಷ್ಟಿದ್ದು, ಸರ್ಕಾರವು ಪರೋಕ್ಷವಾಗಿ ಪ್ರತಿ ಸಿಲಿಂಡರ್ ಮೇಲೆ 500 ರೂಪಾಯಿಗೂ ಹೆಚ್ಚು ಸಬ್ಸಿಡಿಯನ್ನು ನೀಡುತ್ತಿದೆ. ಜೂನ್ ತಿಂಗಳಿನಲ್ಲಿ ಈ ಪರೋಕ್ಷ ಸಬ್ಸಿಡಿಯು 700 ರೂಪಾಯಿಗೂ ಅಧಿಕವಾಗಿತ್ತು.

ಇನ್ನು ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯ ಫಲಾನುಭವಿಗಳಿಗೆ ಮತ್ತಷ್ಟು ರಿಯಾಯಿತಿ ದೊರೆಯುತ್ತಿದ್ದು, ಅವರು ಪ್ರತಿ ಸಿಲಿಂಡರ್ಗೆ ಕೇವಲ 640 ರೂಪಾಯಿಗಳನ್ನು ಮಾತ್ರ ಪಾವತಿಸುತ್ತಿದ್ದಾರೆ. ಉಜ್ವಲ ಯೋಜನೆ ಗ್ರಾಹಕರಿಗೆ ಕೇಂದ್ರ ಸರ್ಕಾರವು ನೇರವಾಗಿ 300 ರೂಪಾಯಿಗಳ ಸಬ್ಸಿಡಿ ನೀಡುವ ಜೊತೆಗೆ, 500 ರೂಪಾಯಿಗಳ ಪರೋಕ್ಷ ಸಬ್ಸಿಡಿಯ ಲಾಭವನ್ನೂ ವಿಸ್ತರಿಸಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗುತ್ತಿದ್ದರೂ ಭಾರತೀಯ ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಕೇಂದ್ರ ಸರ್ಕಾರ ರಕ್ಷಣೆ ನೀಡಿದಂತಾಗಿದೆ.

Join WhatsApp

Join Now

Join Telegram

Join Now