ಈ ವರ್ಷವೂ ಉತ್ತಮ ಫಸಲು : ಮೈಲಾರ ಕಾರ್ಣಿಕದಲ್ಲಿ ನುಡಿದ ಭವಿಷ್ಯವೇನು..?

ವಿಜಯಪುರ: ಮೈಲಾರ ಕಾರ್ಣಿಕಕ್ಕೆ ಸಾಕಷ್ಟು ಜನ ಕಾಯುತ್ತಿರುತ್ತಾರೆ. ಈ ದೈವವಾಣಿಯಿಂದ ರಾಜ್ಯದ ಮುಂದಿನ ಭವಿಷ್ಯ ಏನಾಗಲಿದೆ ಎಂದು ಅಂದಾಜಿಸುತ್ತಾರೆ. ನಿನ್ನೆಯಿಂದಾನೇ ಕಾಯುತ್ತಿದ್ದ ಭಕ್ತರಿಗೆ ಇಂದು ಮೈಲಾರ ಕಾರ್ಣಿಕ ಭವಿಷ್ಯ ಕೇಳಿಸಿದೆ. ವಿಜಯನಗರ ಜಿಲ್ಲೆ ಹರಪ್ಪನಹಳ್ಳಿಯ ದೊಡ್ಡ ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ಭವಿಷ್ಯ ನುಡಿದಿದ್ದಾರೆ. 9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಗೊರವಪ್ಪ ಸಂಜೆ ಬಿಲ್ಲನ್ನೇರಿ ಸದ್ದಲ್ಲೇ ಎನ್ನುತ್ತಿದ್ದಂತೆ ನೆರದವರೆಲ್ಲ ಶಾಂತರಾಗುತ್ತಿದ್ದಂತೆಯೇ ಕೋಟೆಪ್ಪ ಭವಿಷ್ಯ ನುಡಿದಿದ್ದಾರೆ.

ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್ ಎಂದು ದೈವವಾಣಿ ನುಡಿದಿದೆ. ಇದರ ಅರ್ಥ ಪ್ರಸಕ್ತ ವರ್ಷದಲ್ಲಿ ಮಳೆ ಸಮೃದ್ಧವಾಗಿ ಉತ್ತಮ ಫಸಲು ಬರುತ್ತದೆ. ಆದರೆ ಇಳುವರಿ ಕುಂಠಿತ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಭಕ್ತರು ಕಾರ್ಣಿಕದ ಅರ್ಥವನ್ನು ಮಾತಾಡಿಕೊಂಡಿದ್ದಾರೆ. ಇನ್ನು ಕೆಲವರು ಮುಂಬರುವ ದಿನಗಳಲ್ಲಿ ಗಂಭೀರ ಘಟನೆ ನಡೆಯಲಿದೆ. ರಾಜ್ಯ ರಾಷ್ಟ್ರದಲ್ಲಿ ದೊಡ್ಡ ಘಟನೆ ನಡೆಯಲಿದೆ ಎಂದು ದೈವವಾಣಿಯನ್ನು ನಾನಾ ರೀತಿಯಲ್ಲಿ ಅರ್ಥೈಸಿದ್ದಾರೆ.

ಇನ್ನು ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಕಾರ್ಣಿಕ ನುಡಿಯಲಾಗಿದೆ. ನೀರಿ‌ ಕೊಡ ಉರಡತಲೇ, ತುಪ್ಪದ ಕೊಂಡ ಉಕ್ಕತಲೇ ಪರಾಕ್ ಎಂದು 12 ಅಡಿ ಎತ್ತರದ ಬಿಲ್ಲೇರು ಗೊರವಯ್ಯ ಹನುಮನಗೌಡ ಗುರೇಗೌಡರ ದೈವವಾಣಿ ನುಡಿದಿದ್ದಾರೆ. ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿವೆ ಎಂದು ಅಲ್ಲಿ ಕೂಡ ಗ್ರಾಮಸ್ಥರು ವಿಶ್ಲೇಷಣೆ ಮಾಡಲಾಗಿದೆ. ಎರಡು ಕಡೆಯ ಕಾರ್ಣಿಕ ಈ ಬಾರಿ ಉತ್ತಮ ಬೆಳೆಯಾಗಲಿದೆ ಎಂದೇ ಇದೆ.

suddionenews

Recent Posts

ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ : 26 ಲಕ್ಷಕ್ಕೆ ಹರಾಜಾದ ಮುಕ್ತಿ ಬಾವುಟ

  ಸುದ್ದಿಒನ್, ಹಿರಿಯೂರು, ಫೆಬ್ರವರಿ. 13 : ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ ಐತಿಹಾಸಿಕ ಶ್ರೀತೇರುಮಲ್ಲೇಶ್ವರ ಸ್ವಾಮಿಯ…

21 minutes ago

ಮೊಳಕಾಲ್ಮೂರು : ಪಿಡಿಒ ಅಮಾನತು

  ಚಿತ್ರದುರ್ಗ. ಫೆ.13 : ಮೊಳಕಾಲ್ಮೂರು ತಾಲ್ಲೂಕು ಜೆ.ಬಿ. ಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಸುರೇಶ್ ಅವರನ್ನು ಕರ್ತವ್ಯ…

32 minutes ago

ನಿನ್ನೆ ಇಳಿಕೆಯಾಗಿದ್ದ ಚಿನ್ನ ಇಂದು ಏರಿಕೆ : ಎಷ್ಟಿದೆ ಬೆಲೆ..?

ಬೆಂಗಳೂರು:  ಚಿನ್ನದ ದರದಲ್ಲಿ ಏರಿಳಿತ ಮುಂದುವರೆದಿದೆ. ಒಂದು ದಿನ ಏರಿಕೆಯಾದ್ರೆ ಮರು ದಿನವೇ ಏರಿಕೆಯಾಗುತ್ತಿದೆ. ನಿನ್ನೆಯಷ್ಟೇ 70 ರೂಪಾಯಿ ಅಷ್ಟು…

3 hours ago

ಮೆಟ್ರೋ ಪ್ರಯಾಣಿಕರ ಇಳಿಕೆ : BMRCLಗೆ ಸಿಎಂ ಸೂಚನೆ : ದರ ಇಳಿಕೆಯ ನಿರೀಕ್ಷೆ..!

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಾರಿ ಹಿಡಿಯುತ್ತಿದ್ದರು ಜನ. ಹಾಗಂತ ಶ್ರೀಮಂತರ್ಯಾರು ಕಾರು ಬಿಟ್ಟು ಮೆಟ್ರೋ…

5 hours ago

ಜಾನಪದ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರೆ ಬೊಮ್ಮಗೌಡ ನಿಧನ..!

ಕಾರವಾರ: ಹಾಡುಹಕ್ಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಇಂದು ವಿಧಿವಶರಾಗಿದ್ದಾರೆ. ಸುಕ್ರೆ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋ…

5 hours ago

ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ : ಈ ವರ್ಷದಿಂದ ಹೊಸ ಮುರುಡಪ್ಪ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಎಂದರೆ…

6 hours ago