8 ಸಾವಿರವಾಗಿದ್ದ ಚಿನ್ನ 7 ಸಾವಿರದ ಸಮೀಪಕ್ಕೆ ಬಂತು : ಇಂದಿನ ದರ ಎಷ್ಟಿದೆ..?

ಬೆಂಗಳೂರು ;  ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಸಂತಸ ತಂದಿದೆ. ಯಾಕಂದ್ರೆ 8 ಸಾವಿರಕ್ಕಿಂತ ಹೆಚ್ಚಾಗಿತ್ತು ಚಿನ್ನದ ಬೆಲೆ. ಆದರೆ ಈಗ ಮತ್ತೆ 7 ಸಾವಿರಕ್ಕೆ ಸಮೀಪಿಸ್ತಾ ಇದೆ. ಒಂದು ಗ್ರಾಂ 22‌ ಕ್ಯಾರಟ್ ಚಿನ್ನದ ದರ ಸುಮಾರು 50 ರೂಪಾಯಿಯಷ್ಟು ಇಳಿಕೆಯಾಗಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 7,960 ರೂಪಾಯಿ ರೂಪಾಯಿ ಆಗಿದೆ. ಹಾಗೆ 24 ಕ್ಯಾರಟ್ ಅಪರಂಜಿ ಚಿನ್ನದ ದರದಲ್ಲಿ 55 ರೂಪಾಯಿ ಇಳಿಕೆಯಾಗಿದ್ದು, 8,684 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 79,600 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 86,840 ರೂಪಾಯಿ ಆಗಿದೆ.

 

ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 79,600 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 79,750 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 77,010 ರೂಪಾಯಿ ಇದೆ. ಅಮೆರಿಕಾದಲ್ಲಿ 76,440 ಇದೆ. ಸೌದಿಯಲ್ಲಿ 76,400 ಇದೆ.

 

ಇನ್ನು ಬೆಳ್ಳಿ ಬೆಲೆಯಲ್ಲೂ ಕಡಿಮೆಯಾಗಿದ್ದು, ಇಂದು ಒಂದು ರೂಪಾಯಿ ಅಷ್ಟು ಕಡಿಮೆಯಾಗಿದೆ. ಈ ಮೂಲಕ ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 97 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 9,700 ರೂಪಾಯಿ ಇದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 9,700 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 10,500 ರೂಪಾಯಿ ಇದೆ.

suddionenews

Recent Posts

ಪಿತ್ತ ಬೇಗ ಕಡಿಮೆ ಆಗ್ಬೇಕು ಅಂದ್ರೆ ಹೀಗೆ ಮಾಡಿ

ಸಾಕಷ್ಟು ಜನರಿಗೆ ಪಿತ್ತದ ಸಮಸ್ಯೆ ಇರುತ್ತದೆ.‌ ಪಿತ್ತ ಜಾಸ್ತಿಯಾದಷ್ಟು ಮನುಷ್ಯನಿಗೆ ಕಂಫರ್ಟಬಲ್ ಇರುವುದೇ ಇಲ್ಲ. ಪಿತ್ತ ಹೆಚ್ಚಾದರೆ ತಲೆ ಸುತ್ತು…

2 hours ago

ಈ ರಾಶಿಯ ಮಠದ ಸಾರಥ್ಯ ಹೊಂದಿದವರಿಗೆ ತೊಂದರೆ

ಈ ರಾಶಿಯ ಮಠದ ಸಾರಥ್ಯ ಹೊಂದಿದವರಿಗೆ ತೊಂದರೆ, ಈ ರಾಶಿಯ ಗಂಡ ಹೆಂಡತಿ ಎಷ್ಟುಚೆನ್ನಾಗಿದ್ದರೆ ಗೊತ್ತು, ಶನಿವಾರದ ರಾಶಿ ಭವಿಷ್ಯ…

3 hours ago

ದೇಶದ ಮೊದಲ ಹಿಂದೂ ಗ್ರಾಮಕ್ಕೆ ಶಂಕುಸ್ಥಾಪನೆ : ಈ ಗ್ರಾಮದ ವಿಶೇಷತೆ ಏನು ಗೊತ್ತಾ ?

  ಸುದ್ದಿಒನ್ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ಪೀಠದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಏಪ್ರಿಲ್ 2 ರಂದು…

11 hours ago

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ; ಕಾರಣವೇನು..?

ಅಣ್ಣಾಮಲೈ ಅಂದ್ರೆನೇ ಅದೆಷ್ಟೋ ಜನ ಗಢಗಢ ಅಂತ ನಡುಗುತ್ತಾ ಇದ್ದರು. ಕರ್ನಾಟಕದ ರಿಯಲ್ ಸಿಂಗಂ ಆಗಿ ಘರ್ಜಿಸಿದ್ದರು. ಆದರೆ ಬಿಜೆಪಿಗೆ…

11 hours ago

ಚಿನ್ನ – ಬೆಳ್ಳಿ ಬೆಲೆ ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಇಳಿಕೆ ; ಕಾರಣವೇನು..? ಅಕ್ಷಯ ತೃತೀಯ ತನಕವೂ ಇಳಿಯಲಿದೆಯಾ..?

  ಚಿನ್ನ ಬೆಳ್ಳಿ ದರ ಏರಿಕೆಯತ್ತಲೇ ಸಾಗುತ್ತಿತ್ತು. ಇಂದು ಮಹಿಳೆಯರ ಚಿನ್ನದ ಕನಸಿಗೆ ಬೇಸರವನ್ನೇ ತಂದಿತ್ತು. ಇದೀಗ ದಿಢೀರನೇ ಚಿನ್ನ…

13 hours ago

ಸೃಜನಶೀಲ ಯುವ ಬರಹಗಾರರಿಗೆ ಆರ್ಥಿಕ ನೆರವು ನೀಡಿ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 04…

14 hours ago