ನಿನ್ನೆ ಇಳಿಕೆಯಾಗಿದ್ದ ಚಿನ್ನ ಇಂದು ಏರಿಕೆ : ಎಷ್ಟಿದೆ ಬೆಲೆ..?

ಬೆಂಗಳೂರು:  ಚಿನ್ನದ ದರದಲ್ಲಿ ಏರಿಳಿತ ಮುಂದುವರೆದಿದೆ. ಒಂದು ದಿನ ಏರಿಕೆಯಾದ್ರೆ ಮರು ದಿನವೇ ಏರಿಕೆಯಾಗುತ್ತಿದೆ. ನಿನ್ನೆಯಷ್ಟೇ 70 ರೂಪಾಯಿ ಅಷ್ಟು ಇಳಿಕೆಯಾಗಿದ್ದ ಚಿನ್ನ ಇಂದು ಅದಾಗಲೇ 40 ರೂಪಾಯಿ ಅಷ್ಟು ಏರಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 7,980 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ 8,700 ರೂಪಾಯಿ ಇದೆ. 22 ಕ್ಯಾರಟ್ ಹತ್ತು ಗ್ರಾಂಗೆ 79,800 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 87,050 ರೂಪಾಯಿ ಆಗಿದೆ.

 

ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 79,800 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 79,950 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 76,440 ರೂಪಾಯಿ ಇದೆ. ಅಮೆರಿಕಾದಲ್ಲಿ 67,680 ಇದೆ. ಸೌದಿಯಲ್ಲಿ 76,350 ಇದೆ.

 

ಇನ್ನು ಬೆಳ್ಳಿ ಬೆಲೆಯಲ್ಲಿ ಮಾತ್ರ ತೀರಾ ವ್ಯತ್ಯಾಸವೇನು ಆಗುತ್ತಿಲ್ಲ. ಚಿನ್ನದಲ್ಲಿ ಮಾತ್ರ ಏರಿಳಿತ ಕಂಡರೆ ಬೆಳ್ಳಿಯಲ್ಲಿ ಮಾತ್ರ ಬೆಲೆ ಸ್ಥಿರವಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 99.50 ರೂಪಾಯಿ ಆಗಿದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 9,950 ರೂಪಾಯಿ ಇದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 9,950 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 10,700 ರೂಪಾಯಿ ಇದೆ.

suddionenews

Recent Posts

ಕೆ.ಅನ್ವರ್ ಭಾಷಾ ವಿರುದ್ಧ ಅಪಪ್ರಚಾರ : ಮುಸ್ಲಿಂ ಮುಖಂಡರಿಂದ ಪ್ರತಿಭಟನೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಹಾಲಿ ಸದಸ್ಯ ಕೆ.ಅನ್ವರ್‍ಬಾಷರವರ ಮೇಲೆ…

2 hours ago

ಚಿತ್ರದುರ್ಗ : ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ

ಚಿತ್ರದುರ್ಗ. ಫೆ.13:   ನಗರದ ವಿ.ಪಿ. ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ ಫೆ.15 ರಿಂದ 17 ರವರೆಗೆ…

2 hours ago

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆದೇಶ ಜಾರಿ

  ಚಿತ್ರದುರ್ಗ, ಫೆ. 13 : ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು…

2 hours ago

ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ : 26 ಲಕ್ಷಕ್ಕೆ ಹರಾಜಾದ ಮುಕ್ತಿ ಬಾವುಟ

  ಸುದ್ದಿಒನ್, ಹಿರಿಯೂರು, ಫೆಬ್ರವರಿ. 13 : ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ ಐತಿಹಾಸಿಕ ಶ್ರೀತೇರುಮಲ್ಲೇಶ್ವರ ಸ್ವಾಮಿಯ…

3 hours ago

ಮೊಳಕಾಲ್ಮೂರು : ಪಿಡಿಒ ಅಮಾನತು

  ಚಿತ್ರದುರ್ಗ. ಫೆ.13 : ಮೊಳಕಾಲ್ಮೂರು ತಾಲ್ಲೂಕು ಜೆ.ಬಿ. ಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಸುರೇಶ್ ಅವರನ್ನು ಕರ್ತವ್ಯ…

3 hours ago

ಮೆಟ್ರೋ ಪ್ರಯಾಣಿಕರ ಇಳಿಕೆ : BMRCLಗೆ ಸಿಎಂ ಸೂಚನೆ : ದರ ಇಳಿಕೆಯ ನಿರೀಕ್ಷೆ..!

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಾರಿ ಹಿಡಿಯುತ್ತಿದ್ದರು ಜನ. ಹಾಗಂತ ಶ್ರೀಮಂತರ್ಯಾರು ಕಾರು ಬಿಟ್ಟು ಮೆಟ್ರೋ…

7 hours ago