ಬೆಂಗಳೂರು; ಕಳೆದ ಕೆಲವು ದಿನಗಳ ಹಿಂದಷ್ಟೇ ಚಿನ್ನದ ಬೆಲೆ ಏರಿಕೆಯತ್ತಲೇ ಸಾಗುತ್ತಾ ಇತ್ತು. ಚಿನ್ನದ ಮೇಲಿನ ಆಸೆಯನ್ನೇ ಬಿಟ್ಟು ಬಿಡಬೇಕು ಎನ್ನುವಷ್ಟು. ಸದ್ಯ ಎರಡ್ಮೂರು ದಿನಗಳಿಂದೀಚೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು 22 ಕ್ಯಾರಟ್ ನ ಒಂದು ಗ್ರಾಂಗೆ 30 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 8,185 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಕೂಡ 33 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ 8,929 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 81,850 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 89,290 ರೂಪಾಯಿ ಆಗಿದೆ.
ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 81,850 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 82,000 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 78,700 ರೂಪಾಯಿ ಇದೆ. ಅಮೆರಿಕಾದಲ್ಲಿ 78,460 ಇದೆ. ಸೌದಿಯಲ್ಲಿ 78,410 ಇದೆ.
ಬೆಳ್ಳಿ ಬೆಲೆಯಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. ಹೀಗಾಗಿ ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 101 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 10,100 ರೂಪಾಯಿ ಆಗಿದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 10,100 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 11,000 ರೂಪಾಯಿ ಇದೆ.
ಹಿರಿಯೂರು, ಮಾರ್ಚ್. 28 : ಕುಡಿತ ಅನ್ನೋದು ತಾನೂ ಏನು ಮಾಡ್ತಾ ಇದ್ದೀನಿ ಅನ್ನೋದನ್ನೇ ಮರೆಸಿ ಬಿಡುತ್ತದೆ. ಇಲ್ಲೊಬ್ಬ ಕುಡಿದು…
ಐಪಿಎಲ್ 18ನೇ ಸೀಸನ್ ನಲ್ಲಿ ಮೊದಲ ಗೆಲುವು ಕಂಡಿದ್ದ ಆರ್ಸಿಬಿ ಇಂದು ಚೆನ್ನೈ ವಿರುದ್ದ ಸೆಣೆಸಾಡುತ್ತಿದೆ. ಈಗಾಗಲೇ ಚೆನ್ನೈನ ಎರಡು…
ಸುದ್ದಿಒನ್ : ಸಮಾಜ ಮತ್ತು ಸಂವಿಧಾನಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆಗಳಿಗಾಗಿ ಅವರ ಜನ್ಮ ದಿನಾಚರಣೆಯಾದ ಏಪ್ರಿಲ್ 14 ರಂದು ಸಾರ್ವಜನಿಕ…
ಚಿತ್ರದುರ್ಗ, ಮಾರ್ಚ್, 28 : ಜಿಲ್ಲಾ ಕೇಂದ್ರದಲ್ಲಿ ಈ ಬಾರಿ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಗಳನ್ನು ಅರ್ಥಪೂರ್ಣ…
ನವದೆಹಲಿ; ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಕೇಂದ್ರ ಸರ್ಕಾರಿ…
ದಾವಣಗೆರೆ ಮಾ.28 : ದಾವಣಗೆರೆ ಪ್ರಾದೇಶಿಕ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಂಡುಬಂದರೆ ಕೂಡಲೇ ಅರಣ್ಯ ಸಹಾಯವಾಣಿ 1926 ಸಂಖ್ಯೆಗೆ…