ಬೆಂಗಳೂರು: ಕೆರೆ ಮುಚ್ಚಿ ಬಡವರಿಗೆ ಸೈಟ್ ಮಾಡಿ ಹಂಚಿದರಾ..? ಜೆ ಪಿ ನಗರ, ಡಾಲರ್ಸ್ ಕಾಲೋನಿಯಲ್ಲಿ ಯಾರಿಗೆ ಸೈಟ್ ಕೊಟ್ರಿ..? ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶ್ರೀಮಂತರು, ಐಎಎಸ್ ಅಧಿಕಾರಿಗಳು, ಮಾಜಿ ಸಚಿವರಿಗೆ ನೀಡಿದ್ದಾರೆ.ಅದರ ಫಲವಾಗಿ ಸರ್ಜಾಪುರ, ಮಹದೇವಪುರ ಮುಳುಗಡೆಯಾಗಿದೆ. ಇಂದು ಬೋಟ್, ಟ್ರ್ಯಾಕ್ಟರ್ ಗಳಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಬಿಡಿಎ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಡಿಎ ಬೇಕಾದಾಗ ನೋಟಿಫೈ ಮಾಡುತ್ತೆ, ಡಿನೋಟಿಫೈ ಕೂಡ ಮಾಡುತ್ತೆ. ಸರಿಯಾದ ನೀಲನಕ್ಷೆಯೇ ಇಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಅತಿವೃಷ್ಟಿ ಬಗ್ಗೆ ಕಾಂಗ್ರೆಸ್ ಗೆ ಅಧಿವೇಶನದಲ್ಲಿಯೇ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಲಕ್ಷ್ಮಣ್ ರಾವ್ ವರದಿಯಲ್ಲಿ ಒತ್ತುವರಿ ಬಗ್ಗೆ ಉಲ್ಲೇಖವಾಗಿದೆ. ವರದಿಯಲ್ಲಿ ಸಾವಿರ ಕೆರೆಗಳ ಒತ್ತುವರಿ ಮಾಹಿತಿ ಇದೆ. ಒತ್ತುವರಿ ಮಾಡಿಕೊಂದ್ದಕ್ಕೆ ಬೆಂಗಳೂರು ಜಲಾವೃತವಾಗಿದೆ. ಬೆಂಗಳೂರು ನಗರ ಸಾವಿರ ಕೆರೆಗಳನ್ನು ಉಳಿಸಿಕೊಂಡಿದ್ದರೆ, ಮೇಕೆದಾಟು ಯೋಜನೆಯನ್ನು ತರುವ ಅಗತ್ಯವೇ ಇರುತ್ತಾ ಇರಲಿಲ್ಲ. ಬೆಂಗಳೂರನ್ನು ಸಿಂಗಾಪುರ ಮಾಡಲು ಹೋಗಿ ಈ ರೀತಿ ಆಗಿದೆ.
ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿ ಸೇರಿದ್ದಕ್ಕೆ ಇಂದು ಈ ಸ್ಥಿತಿಯಾಗಿದೆ. ಬಿಬಿಎಂಪಿ ರಚನೆ ಬಗ್ಗೆ ಪ್ರತಿಪಕ್ಷ ನಾಯಕರು ಟೀಕಿಸಿದ್ದಾರೆ. ಮಳೆ ಅವಾಂತರ ಈಗಿನ ನಿರ್ಧಾರದಿಂದ ಆಗಿರುವುದಲ್ಲ. 2000ರಲ್ಲಿ ವೇಗವಾಗಿ ಐಟಿ ಸಿಟಿ ಆರಂಭವಾಯ್ತು. ಆದರೆ ಅಂದು ಅನಾಹುತದ ಬಗ್ಗೆ ನಾವ್ಯಾರು ಗಮನ ಹರಿಸಲೇ ಇಲ್ಲ. ಕೆರೆಗಳ ಒತ್ತುವರಿ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲೂ ಸಮಸ್ಯೆ ಆಗಿದೆ ಎಂದಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…