ಮಕ್ಕಳಿಗೆ ಟಿವಿ ಮೊಬೈಲ್ ಬದಲಿಗೆ ಪುಸ್ತಕಗಳನ್ನು ನೀಡಿ : ಡಾ. ಜ್ಯೋತಿ ಶರತ್‍ಕುಮಾರ್

 

 

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 25 : ಇಂದಿನ ದಿನಮಾನದ ಆಧುನಿಕ ಬದುಕಿನಲ್ಲಿ ಮಹಿಳೆಯ ದೈಹಿಕ ಶ್ರಮ ಕಡಿಮೆಯಾಗಿ, ಮಾನಸಿಕ ಒತ್ತಡ ಹೆಚ್ಚಾಗಿದೆ. ಎಲ್ಲವನ್ನೂ ಸಹಾ ಒತ್ತಡದಿಂದ ನಿರ್ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ತನ್ನ ಆರೋಗ್ಯದ ಬಗ್ಗೆ ಗಮನ ನೀಡುವುದು ಕಡಿಮೆಯಾಗಿದೆ ಎಂದು ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಶ್ರೀಮತಿ ಡಾ. ಜ್ಯೋತಿ ಶರತ್‍ಕುಮಾರ್ ತಿಳಿಸಿದರು.

 

ನಗರದ ಶ್ರೀ ನೀಲಕಂಠೇಶ್ವರ  ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಿವಶಿಂಪಿ ಮಹಿಳಾ ಸಂಭ್ರಮ ಕಾರ್ಯಕ್ರಮದಲ್ಲಿ ಆಧುನಿಕ ಬದುಕಿನಲ್ಲಿ ಮಹಿಳೆಯ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಹಿಂದಿನ ಕಾಲದಿಂದಲೂ ಮಹಿಳೆಯರು ಮನೆಯ ಸದಸ್ಯರ ಆರೋಗ್ಯದ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿ ವಹಿಸಿಕೊಂಡು ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ತನ್ನ ಮನೆಯವರ ಆಹಾರಕ್ಕಾಗಿ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಾ, ಕಟ್ಟುವುದು, ಬೀಸುವುದು, ಅರೆಯುವುದು, ಬಾವಿಯಿಂದ ನೀರನ್ನು ಸೇದುವುದು, ಬಟ್ಟೆಯನ್ನು ಓಗೆಯುವುದು ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ಮಾಡುವುದರ ಮೂಲಕ ತನ್ನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದಳು. ಆದರೆ ಇಂದಿನ ಅಧುನಿಕ ಬದುಕಿನಲ್ಲಿ ಮಹಿಳೆ ಶ್ರಮ ಪಡುವುದು ಕಡಿಮೆಯಾಗಿದೆ ಎಲ್ಲದ್ದಕ್ಕೂ  ಸಹಾ ಯಂತ್ರವನ್ನು ಅವಲಂಬಿಸಿದ್ದಾಳೆ. ಇದ್ದಲ್ಲದೆ ಮನೆಯಲ್ಲಿ ಎಲ್ಲರ ಇಷ್ಠಾರ್ಥಗಳನ್ನು ಈಡೇರಿಸುವ ಕಾರ್ಯವನ್ನು ಸಹಾ ಮಾಡಬೇಕಿದೆ ಗಂಡ, ಮಕ್ಕಳು, ಅತ್ತೆ-ಮಾವ, ಮೈದುನ, ನಾದಿನಿ, ನೆಂಟರು, ಸಂಬಂಧಿಕರು, ಬಂದು ಹೋಗುವವರು ಇವರ ಬಗ್ಗೆ ಗಮನ ನೀಡಬೇಕಿದೆ ಇವೆಲ್ಲದರ ಮಧ್ಯೆ ತನ್ನ ಆರೋಗ್ಯದ ಕಡೆ ಗಮನ ನೀಡುವುದು ಕಡಿಮೆಯಾಗಿದೆ ಎಂದರು.

ಮಹಿಳೆಯರಾದ ನಾವುಗಳು ನಮ್ಮ ಸಂಸ್ಕಾರದ ಬಗ್ಗೆಯೂ ಸಹಾ ಗಮನ ನೀಡಬೇಕಿದೆ ಮನೆಯಲ್ಲಿ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ಕಲಿಸಬೇಕಿದೆ ರಾಮಾಯಣ, ಭಗವದೀತೆಯನ್ನು ಓದಬೇಕಿದೆ, ಶ್ಲೋಕಗಳನ್ನು ಕಲಿಯಬೇಕಿದೆ ಇದರೊಂದಿಗೆ ಧ್ಯಾನ ಹಾಗೂ ಯೋಗವನ್ನು ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ, ಅಧುನಿಕ ಬದುಕಿನಲ್ಲಿ ಒತ್ತಡ ಹೆಚ್ಚಾದರೂ ಸಹಾ ಅದನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಮಹಿಳೆಯರು ಹೊರಬೇಕಿದೆ. ಪ್ರತಿ ದಿನ ಪೂಜೆಯನ್ನು ಮಾಡುವುದರ ಮೂಲಕ ಮಕ್ಕಳಿಗೆ ದೇವರ ಬಗ್ಗೆ ತಿಳಿಸಿಕೊಡಬೇಕಿದೆ ಸಾಧ್ಯವಾದಷ್ಟು ಮಕ್ಕಳಿಗೆ ಮೊಬೈಲ್ ನೀಡುವುದನ್ನು ಕಡಿಮೆ ಮಾಡಿ ಇದರ ಬದಲಿಗೆ ಪುಸ್ತಕಗಳನ್ನು ನೀಡಿ ನೀವು ಸಹಾ ಧಾರವಾಹಿಗಳಿಂದ ದೂರ ಇರಿ ಎಂದು ಶ್ರೀಮತಿ ಡಾ. ಜ್ಯೋತಿ ಶರತ್‍ಕುಮಾರ್ ಮಹಿಳೆಯರಿಗೆ ಕಿವಿ ಮಾತು ಹೇಳಿದರು.

 

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕಿಯಾದ ಶ್ರೀಮತಿ ಗೀತಾ ಭರಮಸಾಗರ ಇವರು ಪ್ರಸ್ತುತ ಸಮಾಜದಲ್ಲಿ ಆಡಂಬರದ ವಿವಾಹ ಅಗತ್ಯವೆ? ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ, ಹಿಂದಿನ ಕಾಲದಲ್ಲಿ ಮದುವೆ ಎಂದರೆ ಎರಡು ಮನಸ್ಸುಗಳನ್ನು ಸೇರಿಸುವ ಕಾರ್ಯಕ್ರಮ ಇದಾಗಿತ್ತು, ಮದುವೆ ಎಂದರೆ ಮನೆಯವರೆಲ್ಲಾ ಕೂಡಿ ಮಾಡುವಂತ ಕಾರ್ಯ ಇದಾಗಿದೆ ಮನೆಯಲ್ಲಿ ಹಬ್ಬದ ವಾತಾವರಣವನ್ನು ಮೂಡಿಸುತ್ತಿತ್ತು. ಹಳ್ಳಿಯ ಎಲ್ಲರೂ ಸೇರಿ ಮಾಡುವ ಕಾರ್ಯ ಮದುವೆಯಾಗಿತ್ತು, ಈ ಮುಂಚೆ ಮನೆಯ ಮುಂದೆಯೇ ಮದುವೆಯನ್ನು ಮಾಡಲಾಗುತ್ತಿತು, ಇಂದಿನ ರೀತಿಯಲ್ಲಿ ಕಲ್ಯಾಣ ಮಂಟಪಗಳು ಇರಲಿಲ್ಲ, ಆಡಂಬರ ಇಲ್ಲದೆ ಸರಳವಾಗಿ ಮದುವೆಯನ್ನು ಮಾಡಿಕೊಡಲಾಗುತ್ತಿತು. ಆದರೆ ಇಂದಿನ ದಿನಮಾನದಲ್ಲಿ ಮದುವೆ ಎನ್ನುವುದು ಪ್ರತಿಷ್ಠೆಯಾಗಿದೆ ಆತ ಇಷ್ಟು ಹಣವನ್ನು ಖರ್ಚು ಮಾಡಿದರೆ ನಾನು ಅದಕ್ಕಿಂತ ಹೆಚ್ಚು ಮಾಡುತ್ತೇನೆ ಎಂದು ಹೇಳುತ್ತಾ ಆನಗತ್ಯವಾದ ಖರ್ಚುಗಳನ್ನು ಮಾಡುತ್ತಾ ಮದುವೆ ಎಂದು ಆಡಂಬರ ಎನ್ನುವಂತಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದ ಜಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾ ಮುರುಗೇಶ್ ವಹಿಸಿದ್ದರು, ಕಾರ್ಯದರ್ಶಿಗಳಾದ ಶ್ರೀಮತಿ ಕವಿತಾಪಂಪಾಪತಿ ಮಹಿಳಾ ಘಟಕದ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಶ್ರೀಮತಿ ನಿರ್ಮಲ ಬಸವರಾಜು ಲಕ್ಕಿ ಲೇಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರೀಮತಿ ಅನ್ನಪೂರ್ಣವಿಜಯಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ಶೈಲಾ ವಿಜಯಕುಮಾರ್ ಪ್ರಾರ್ಥಿಸಿದರೆ, ಶ್ರೀಮತಿ ಇಂದಿರಾ ಜಯದೇವ ಮೂರ್ತಿ ಸ್ವಾಗತಿಸಿದರು, ಶ್ರೀಮತಿ ಕುಸುಮಾ ರಾಜಣ್ಣ ಹಾಗೂ ಶ್ರೀಮತಿ ಗೌರಮ್ಮ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಉಷಾ ವೇದಮೂರ್ತಿ ವಂದಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು.

 

 

 

suddionenews

Recent Posts

ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಚಿತ್ರದುರ್ಗದಲ್ಲಿಂದು ನಾಣ್ಯಗಳ ಮೇಳ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28 : ನಗರದ ಐ.ಯು.ಡಿ.ಪಿ. ಲೇಔಟ್ ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಕರೆನ್ಸಿ ಚೆಸ್ಟ್ ಶಾಖೆಯಲ್ಲಿ…

2 hours ago

ಚಿತ್ರದುರ್ಗದಲ್ಲಿ ಏಪ್ರಿಲ್‌ 01 ರಿಂದ ಬೇಸಿಗೆ ಶಿಬಿರ : ಇಲ್ಲಿದೆ ಮಾಹಿತಿ… !

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಎಲ್ಲೆಡೆ ಪರೀಕ್ಷೆಗಳು ಮುಗಿಯುವ ಹಂತಕ್ಕೆ ಬಂದಿವೆ. ಇನ್ನೇನೂ ಸದ್ಯದಲ್ಲೇ ಶಾಲಾ-ಕಾಲೇಜು ರಜೆ ಘೋಷಣೆ…

3 hours ago

ತಲೆನೋವು ಸದಾ ಕಾಡುತ್ತಾ..? ಈ ಮನೆ ಮದ್ದನ್ನ ಟ್ರೈ ಮಾಡಿ ಸಾಕು

ಹಲವರಿಗೆ ಇದ್ದಕ್ಕಿದ್ದ ಹಾಗೇ ತಲೆ ನೋವು ಬರುತ್ತೆ. ಮಾತ್ರೆಗಳಿಗೆ ಅಂತವರು ಅಡಿಕ್ಟ್ ಆಗಿರುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಸದಾ ಕಾಲ…

3 hours ago

ಈ ರಾಶಿಯವರು ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ

ಈ ರಾಶಿಯವರು ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ, ಶುಕ್ರವಾರದ ರಾಶಿ ಭವಿಷ್ಯ 28 ಮಾರ್ಚ್ 2025…

5 hours ago

ಐಮಂಗಲ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಸುದ್ದಿಒನ್, ಹಿರಿಯೂರು, ಮಾರ್ಚ್. 27 : ಅಕ್ರಮ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಐಮಂಗಲ ಪೊಲೀಸರು…

13 hours ago

ಬೆಂಗಳೂರಲ್ಲಿ ಬೆಚ್ಚಿಬೀಳಿಸಿದ ಕೊಲೆ ; ಪತ್ನಿಯನ್ನ ಕೊಂದು ಸೂಟ್ ಕೇಸ್ ಗೆ ತುಂಬಿದ ಗಂಡ..!

ಬೆಂಗಳೂರು; ಇತ್ತೀಚೆಗಂತೂ ಕೊಲೆ ಕೇಸದ ಗಳನ್ನೇ ಹೆಚ್ಚಾಗಿ‌ಕೇಳ್ತಾ ಇದ್ದೀವಿ. ಅದರಲ್ಲೂಈ ರೀತಿಯ ಕೊಲೆಗಳು ಕೂಡ ಜಾಸ್ತಿ ಆಗ್ತಾ ಇದಾವೆ. ಇಂದು…

13 hours ago