ಮಂಗಳೂರು: ಸತ್ಯ ಖ್ಯತಿ ಗೌತಮಿ ಜಾದವ್ ಈ ಬಾರಿಯ ಬಿಗ್ ಬಾಸ್ ಗೆ ಬಂದಿದ್ದು, ಮತ್ತಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಬರುವಾಗಲೇ ಪಾಸಿಟಿವ್ ಪಾಸಿಟಿವ್ ಅಂತ ಹೇಳಿದ್ದರು. ಅದೇ ರೀತಿ ಇರುವುದಕ್ಕೆ ಪ್ರಯತ್ನ ಕೂಡ ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ಧ್ಯಾನ ಮಾಡುತ್ತಾ, ಶಾಂತವಾಗಿ ಇರುವುದಕ್ಕೆ ಪ್ರಯತ್ನ ಮಾಡಿದರು. ಆದರೆ ಮಂಜು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದ್ರು.
ಮಂಜು ಮನೆಯವರ ಕೆಂಗಣ್ಣಿಗೂ ಗೌತಮಿ ಗುರಿಯಾದ್ರು. ಮಂಜು ಗೆಲುವಿನ ಸ್ಪರ್ಧಿಯಾಗಿದ್ದರು. ಆದರೆ ಗೌತಮಿಯ ಸ್ನೇಹ ಅದಕ್ಕೆ ಅಡ್ಡಿಯಾಯ್ತು ಎಂಬುದೇ ಹೊರಗಿನ ಚರ್ಚೆ. ಫಿನಾಲೆ ವೇದಿಕೆ ಏರುವುದಕ್ಕೂ ಮುನ್ನವೇ ಇಬ್ಬರು ಹೊರಗೆ ಬಂದರು. ಆದರೆ ಇಬ್ಬರ ಸ್ನೇಹ ಹೊರಗೆ ಬಂದ ಮೇಲೂ ಮುಂದುವರೆಯುತ್ತೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅದನ್ನ ಸತ್ಯ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಗೌತಮಿ, ಮಂಜು, ಅಭಿಷೇಕ್ ಮೂವರು ಭೇಟಿಯಾಗಿ ಹಲವರ ಬಾಯಿ ಮುಚ್ಚಿಸಿದ್ದರು.
ಗೌತಮಿ ಸಿಕ್ಕಾಪಟ್ಟೆ ನಂಬುವ ತಾಯಿ ಅಂದ್ರೆ ವನದುರ್ಗೆ.ಇದು ಮಂಗಳೂರಿನಲ್ಲಿ ನೆಲೆಸಿರುವ ತಾಯಿ. ಬಿಗ್ ಬಾಸ್ ನಿಂದ ಹಿರಗೆ ಬಂದ ಕೂಡಲೇ ವನದುರ್ಗೆ ದೇವಸ್ಥಾನಕ್ಕೆ ಗೌತಮಿ ಭೇಟಿ ನೀಡಿದ್ದರು. ಇದೀಗ ಮತ್ತೊಮ್ಮೆ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ ಗೆಳೆಯ ಮಂಜು ಜೊತೆಗೆ. ಇಡೀ ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರೂ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ. ಈ ಫೋಟೋಗಳನ್ನು ಗೌತಮಿ ತಮ್ಮ ಸೋಷಿಯಲ್ ಮೀಡಿಯಾದ ಸ್ಟೋರೀಸ್ ನಲ್ಲಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಕೆಲಸಕ್ಕೆ ಹೋಗಬೇಕೆಂದು ಅದೆಷ್ಟೋ ಜನ ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಓದುತ್ತಾ ಇರುತ್ತಾರೆ. ಇದೀಗ ಅಂತವರಿಗಾಗಿ ಸರ್ಕಾರಿ…
ಚಿತ್ರದುರ್ಗ. ಫೆ.05: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ…
ಚಿತ್ರದುರ್ಗ.ಫೆ.05: ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮೂಲಭೂತ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿದೆ. ಇದರ ನಡುವೆ…