Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಂಗಳೂರಿನಲ್ಲಿ ಜಿ.20 ಶೃಂಗಸಭೆ ಕನ್ನಡಿಗರ ದೌರ್ಭಾಗ್ಯ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

Facebook
Twitter
Telegram
WhatsApp

            ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                            ಮೊ : 87220 22817

ಚಿತ್ರದುರ್ಗ,(ಡಿ.13) : ಡಿಸೆಂಬರ್ 13 ರಿಂದ 17 ರವರೆಗೆ ನಡೆಯುವ ಜಿ.20 ರಾಷ್ಟ್ರಪತಿಗಳ ಶೃಂಗಸಭೆಯನ್ನು ಬೆಂಗಳೂರಿನ ದೇವನಹಳ್ಳಿ ಮತ್ತು ರಾಷ್ಟ್ರಾದ್ಯಂತ ನಿಯೋಜಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರಿ ಇಂದು ಪ್ರತಿಭಟನೆ ನಡೆಸಿದರು.

ಈ ಹಿಂದೆ ಜಿ-20 ರಾಷ್ಟ್ರಗಳ ಶೃಂಗ ಸಭೆಯನ್ನು ಏರ್ಪಡಿಸುವ ಪೂರ್ವಭಾವಿ ಸಭೆಯಲ್ಲಿ ಭಾರತದ 75ನೇ ವರ್ಷದ ಸ್ವಾತಂತ್ರೋತ್ಸವದ ವರ್ಷಾಚರಣೆಯಲ್ಲಿ ಭಾರತಕ್ಕೆ ಆತಿಥ್ಯವನ್ನು ಏರ್ಪಡಿಸುವ ಅವಕಾಶದ ಪ್ರಧಾನಿಯವರ ಕೋರಿಕೆಯ ಮೇರೆಗೆ ದಿನಾಂಕ:13.12.2022 ರಿಂದ 17.12.2022 ರವರೆಗೆ ಇದೇ ವರ್ಷ ದೇವನಹಳ್ಳಿಯಲ್ಲಿ ಸಕಲ ಪೊಲೀಸ್ ಬಂದೋಬಸ್ತ್ ನೊಂದಿಗೆ ಏರ್ಪಡಿಸಿರುವುದು ಕನ್ನಡಿಗರ ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಕಪ್ಪು ಪಟ್ಟಿಯನ್ನು ಧರಿಸಿ ಖಂಡಿಸಿದರು.

ದೇಶದ ಪ್ರಧಾನಮಂತ್ರಿಗಳು ಈವರೆಗೆ ಅಂಬಾನಿ, ಆದಾನಿಯವರನ್ನು ಬಲಪಡಿಸಿದ ಮುಂದುವರಿದ ಭಾಗವಾಗಿ ಅಂಬಾನಿ, ಪತಂಜಲಿಯವರಂತಹ ಆರ್ಥಿಕ ವ್ಯವಹಾರಗಳ ಮುಖಾಂತರ ಜಾಗತಿಕವಾಗಿ ಭಾರತವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುವಂತಹ ಹುನ್ನಾರಗಳೇ ಈ ಶೃಂಗಸಭೆಗಳಾಗಿವೆ ಎಂದು ಆರೋಪಿಸಿದ್ದಾರೆ.

ಕೋವಿಡ್-19 ಕಾಲದಲ್ಲಿ ದೇಶದ ಜಿ.ಡಿ.ಪಿ. ನೆಲಕಚ್ಚಿದ್ದು, ವಿಶ್ವಕಂಡ ಸಂಗತಿಯಾಗಿದ್ದು, ಈಗಲೂ ಚೇತರಿಸಿಕೊಳ್ಳಲಾರದ ಭಾರತದಲ್ಲಿ ಶೇ.85 ರಷ್ಟು ಜಿ.ಡಿ.ಪಿ. ಚೇತರಿಕೆ ಕಂಡಿರುವ ಮತ್ತು ಶೇ.2/3 ರಷ್ಟು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ನಮ್ಮಂತಹ ರಾಷ್ಟ್ರಗಳ ಆರ್ಥಿಕ ಚೇತರಿಕೆಯ ಉದ್ದೇಶ ಹೊಂದಿದ್ದಾರೆ ಎಂಬುದು ಗಾಳಿಗೋಪುರವಾಗಿದೆ ಎಂದು ಪ್ರತಿಭಟನೆಯಲ್ಲಿ ದೂರಿದರು.

ನಮ್ಮ ದೇಶ ಸ್ವಾವಲಂಬಿಯಾಗಿ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿರುವುದರಿಂದ ಈ ಎಲ್ಲವನ್ನು ನಮ್ಮವರ ಮುಖಾಂತರವೇ ಕೊಳ್ಳೆ ಹೊಡೆಯುವ ಜಿ-20 ಒಳ ಹುನ್ನಾರಗಳನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮನವರಿಕೆ ಮಾಡಿಕೊಂಡಿದೆ.

“ಒಂದು ಭೂಮಿ, ಒಂದು ಕುಟುಂಬ ಒಂದು ಭವಿಷ್ಯ” ಎಂಬ ಘೋಷವಾಕ್ಯವನ್ನು ಮತ್ತು ಅದರ ಒಳ ಮರ್ಮಗಳನ್ನು ಅರ್ಥೈಸಿಕೊಂಡಾಗ ಭಾರತದಂತಹ ವೈವಿಧ್ಯಮಯವಾದ ಭಾಷೆ, ಸಂಸ್ಕೃತಿ, ಜನಜೀವನ ಮುಂತಾದ ಅನೇಕತೆಯಲ್ಲಿನ ಏಕತೆಗೆ ಧಕ್ಕೆ ತರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆ ಕಾರಣ ದೇವನಹಳ್ಳಿಯಲ್ಲಿ ಆಯೋಜಿಸಿರುವ ಶೃಂಗ ಸಭೆಯನ್ನು ಖಂಡಿಸುತ್ತಾ ಮುಂದಿನ ವರ್ಷ ದೇಶದ ನಾನಾ ಭಾಗದಲ್ಲಿ ಆಯೋಜಿಸಿರುವ ಶೃಂಗಸಭೆಗಳನ್ನು ರೈತ ಸಂಘ ವಿರೋಧಿಲಿದ್ದು, ಈ ಎಲ್ಲಾ ಸಭೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ವಹಿಸಿದ್ದು, ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ರಾಜಶೇಖರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!