in

ಯುಪಿಎಸ್ಸಿಯಲ್ಲಿ ಕೋಟೆನಾಡು ಚಿತ್ರದುರ್ಗಕ್ಕೆ ಕೀರ್ತಿ ತಂದ ಜಿ.ಮಮತ

suddione whatsapp group join

ಸುದ್ದಿಒನ್, ಚಿತ್ರದುರ್ಗ, (ಸೆ.25) : ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕೋಟೆನಾಡಿಗೆ ಕೀರ್ತಿ ತಂದಿದ್ದಾಳೆ ಜಿ.ಮಮತ.

ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, 707 ರ್ಯಾಂಕ್‍ಗಳಿಸಿದ್ದಾಳೆ.  ಹೊಸದುರ್ಗ ತಾಲೂಕಿನ ದೇವಪುರ ಭೋವಿ ಹಟ್ಟಿಯ ನಿವಾಸಿ ಗೋವಿಂದಪ್ಪ ಮಾಸ್ಟರ್ ಅವರ ಪುತ್ರಿಯಾಗಿದ್ದು, ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾಳೆ.

ಈ ಬಗ್ಗೆ ಸ್ವತಃ ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಮ್ಮ ಫೇಸ್‍ಬುಕ್‍ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

“ ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿರುವ ಹಾಗೂ ಮತಾಂತರದ ಸಂಕೋಲೆಗೆ ಸಿಲುಕಿರುವ, ತಾಲೂಕಿನಲ್ಲೇ ಅತ್ಯಂತ ಹಿಂದುಳಿದಿರುವ ದೇವಪುರ ಭೋವಿ ಹಟ್ಟಿಯಲ್ಲಿ ಹುಟ್ಟಿ ಬೆಳೆದ, ಪರಿಶಿಷ್ಟ ಜಾತಿ ಭೋವಿ ಜನಾಂಗದಲ್ಲಿ ಹುಟ್ಟಿ ಸಂಕಷ್ಟದಲ್ಲಿಯೂ ಅತ್ಯುನ್ನತ ಸಾಧನೆಯನ್ನು ಸಾಕಾರಗೊಳಿಸಿರುವ ಸಹೋದರಿ ಮಮತ. ಜಿ ಅವರ ಸಾಧನೆಯನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ದೇಶದ ಅತ್ಯುನ್ನತ ಅಧಿಕಾರಿ ಸ್ಥಾನವನ್ನು ಅಲಂಕರಿಸುತ್ತಿರುವ ಈ ಹೆಣ್ಣು ಮಗಳಿಗೆ ನಾನೂ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ”.

ಸಾಧನೆ ಎಂಬುದು ಯಾರೋಬ್ಬರ ಸ್ವತ್ತಲ್ಲ. ನಿಖರ ಗುರಿ ಹಾಗೂ ಸದೃಢ ಮನಸ್ಸನ್ನು ಹೊಂದಿರುವ ಯಾರೋಬ್ಬರು ಕೂಡ ಸಾಧನೆ ಮಾಡಬಹುದು ಎಂಬುದಕ್ಕೆ ಮಮತ.ಜಿ ಅವರೇ ಸಾಕ್ಷಿ. ನಾವೆಲ್ಲರೂ ಸೇರಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಮುಂದಿನ ಯುವಜನತೆಯ ಸ್ಪೂರ್ತಿಯಾಗಿ ಜಿ.ಮಮತ ಅವರು ದೇಶಸೇವೆಯನ್ನು ಸಲ್ಲಿಸಲಿ ಎಂದು ಹಾರೈಸುತ್ತೇನೆ.

ಹೆಣ್ಣು ಮಕ್ಕಳು ಮನೆಯ ವಜ್ರಗಳು ಎಂದು ಮಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ಕೊಟ್ಟು, ಖಾಸಾಗಿ ಅನುದಾನಿತ ಶಾಲೆಯಲ್ಲಿ ಓದಿಸಿ ಬೆಳೆಸಿದ ಗೋವಿಂದಪ್ಪ ಮಾಸ್ಟರ್ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಾರ್ವಜನಿಕರ ತುರ್ತು ಗಮನಕ್ಕೆ ; ಹಿಂದೂ ಮಹಾ ಗಣಪತಿ ಪೆಂಡಾಲ್‍ನಲ್ಲಿ ಆರೋಗ್ಯ ತಪಾಸಣಾ ಶಿಬಿರ

ಚಿತ್ರದುರ್ಗ : ಶೇಂಗಾ ಬೆಳೆ ಉಳಿಸಿಕೊಳ್ಳಲು ‘ಸ್ಪ್ರಿಂಕ್ಲರ್’ ಮೊರೆ ಹೋದ ರೈತ