ಮಂಗಳೂರು: ಒಂದೇ ಕುಟುಂಬದ ನಾಲ್ವರು ಹೊಟೇಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ನಾಲ್ವರು ಮೈಸೂರಿನ ನಿವಾಸಿಗಳಾಗಿದ್ದಾರೆ. 48 ವರ್ಷದ ದೇವೇಂದ್ರ, 48 ವರ್ಷದ ನಿರ್ಮಲಾ, 9 ವರ್ಷದ ಚೈತನ್ಯ, 9 ವರ್ಷದ ಚೈತ್ರಾ ಆತ್ಮಹತ್ಯೆಗೆ ಶರಣಾದರು.

ಮಂಗಳೂರಿನ ಕೆ ಎಸ್ ರಾವ್ ರೋಡಿನ ಕರುಣಾ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರ್ಚ್ 27ರಂದು ಮಂಗಳೂರಿನಲ್ಲಿ ಹೊಟೇಲ್ ಒಂದರಲ್ಲಿ ರೂಮ್ ಬುಕ್ ಮಾಡಿದ್ದರು. ಒಂದು ದಿನಕ್ಕಾಗಿ ಮಾಡಿದ್ದ ರೂಮ್, ಎರಡು ದಿನ ಇದ್ದರು. ಬಳಿಕ ಗುರವಾರ ಸಂಜೆ ರೂಮ್ ಚೆಕ್‌ಮಾಡಬೇಕಾಗಿತ್ತು. ಆಗ ಹೊಟೇಲ್ ಸಿಬ್ಬಂದಿಗಳು ರೂಮ್ ಬಳಿ ಬಂದಾಗ, ರೂಮ್ ಲಾಕ್ ಆಗಿದ್ದದು ಗಮನಕ್ಕೆ ಬಂದಿದೆ.

ಮೃತರಿದ್ದ ರೂಮ್ ಲಾಕ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಡೆತ್ ನೋಟ್ ಕೂಡ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಸಾಲಬಾಧೆಯಿಂದ ಈ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.





GIPHY App Key not set. Please check settings