ಮಗನಿಗೆ ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಯಡಿಯೂರಪ್ಪ ಹೇಳಿದ್ದೇನು..?

1 Min Read

 

ಬೆಂಗಳೂರು: ವಿಜಯೇಂದ್ರಗೆ ಪರಿಷತ್ ಚುನಾವಣೆಯ ಟಿಕೆಟ್ ಕೈತಪ್ಪಿದರ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸಹಜವಾಗಿ ವಿಜಯೇಂದ್ರರಿಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ನಿಷ್ಠೆ ಇರುವಂತವರನ್ನು ಪಕ್ಷ ಯಾವತ್ತು ಕೈಬಿಡುವುದಿಲ್ಲ ಎಂದಿದ್ದಾರೆ.

2023 ರಲ್ಲಿ ಕರ್ನಾಟಕದಲ್ಲಿ ನಾವೂ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಅದೇ ನಮ್ಮ ಗುರಿ. ಆ ದಿಕ್ಕಿನಲ್ಲಿ ಏನೆಲ್ಲಾ ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ನನಗೆ ವಿಶ್ವಾಸ ಇದೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮೋದಿ ನೇತೃತ್ವದಲ್ಲಿ ಸ್ಪಷ್ಟ ಬಹುಮತ ಪಡೆಯುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಬಿಎಲ್ ಸಂತೋಷ್ ಅವರಿಂದ ಏನಾದರೂ ಟಿಕೆಟ್ ತಪ್ಪಿತಾ ಎಂವುದಕ್ಕೆ ಉತ್ತರ ನೀಡಿದ ಬಿಎಸ್ವೈ, ಅದಕ್ಕೂ ಇದಕ್ಕೂ ಸಂಬಂಧವೇನು ಇಲ್ಲ. ಸುಮ್ಮನೆ ಅನಗತ್ಯವಾಗಿ ಮಾಧ್ಯಮದಲ್ಲಿ ಹೆಸರು ಬರುತ್ತಿದೆ. ಆದರೆ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಬೇರೆ ಬೇರೆ ರೀತಿಯಲ್ಲಿ ಅವಕಾಶಗಳನ್ನು ಮಾಡಿಕೊಡುತ್ತಾರೆ. ಈಗ ಸ್ಟೇಟ್ ವೈಸ್ ಪ್ರೆಸಿಡೆಂಟ್ ಇದ್ದಾರೆ. ಇನ್ನು ಹೆಚ್ಚಿನ ಅವಕಾಶ ಮಾಡಿಕೊಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ, ನಡ್ಡಾ ಅವರಿಗೆ ಬಿಟ್ಟದ್ದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *