Connect with us

Hi, what are you looking for?

ಪ್ರಮುಖ ಸುದ್ದಿ

ದರ್ಶನ್-ಇಂದ್ರಜಿತ್ ಗಲಾಟೆ ನಡುವೆಯೇ ವೈರಲ್ ಆಯ್ತು ಕುಮಾರಸ್ವಾಮಿ ಜೊತೆಗಿನ ಫೋಟೊ..!

ಬೆಂಗಳೂರು: ದರ್ಶನ್ ವಿಚಾರದಲ್ಲಿ ಮೂಗು ತೂರಿಸಿರುವ ಇಂದ್ರಜಿತ್ ಹಲ್ಲೆ ಆರೋಪ ಮಾಡುತ್ತಿದ್ದಾರೆ. ಆದ್ರೆ ಅದಕ್ಕೆ ಸಾಕ್ಷ್ಯಗಳನ್ನು ಮಾತ್ರ ಒದಗಿಸುತ್ತಿಲ್ಲ. ಆತ ಕಣ್ಣು ಡ್ಯಾಮೇಜ್ ಆಗಿದೆ ಅಂದ ಬೆನ್ನಲ್ಲೇ ಗಂಗಾಧರ್ ಪ್ರತ್ಯಕ್ಷನಾಗ್ತಾನೆ. ಇತ್ತ ಆತ ಕೋಮಾದಲ್ಲಿದ್ದಾನೆ ಎಂದಾಗಲೇ ನಾನು ಎಲ್ಲೂ ಹೋಗಿಲ್ಲ ಅಂತಾನೆ ಗೋಪಾಲ. ದರ್ಶನ್ ಕೂಡ ಇಂದ್ರಜಿತ್ ಗೆ ಟಾಂಗ್ ಕೊಟ್ಟಿದ್ದು, ದಾಖಲೆಗಳಿದ್ದರೆ ತೋರಿಸಲಿ ಎಂದಿದ್ದಾರೆ.

ಈ ಎಲ್ಲಾ ಆರೋಪ ಪ್ರತ್ಯಾರೋಪದ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಇಂದ್ರಜಿತ್ ಲಂಕೇಶ್ ಇರುವ ಫೋಟೊ ವೈರಲ್ ಆಗಿದೆ. ಆದ್ರೆ ಆ ಫೋಟೊ ಇತ್ತೀಚಿನ ಫೋಟೊ ನಾ ಅಥವಾ ಹಳೆಯ ಫೋಟೊ ನಾ ಅನ್ನೋದು ತಿಳಿದು ಬಂದಿಲ್ಲ. ಇ‌ನ್ನು ಈ ಪೋಟೋ ವೈರಲ್ ಆಗುತ್ತಿದ್ದು, ದರ್ಶನ್ ವಿಚಾರಕ್ಕೆ ತಳುಕು ಹಾಕಿಕೊಳ್ಳುತ್ತಿದೆ.

ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ನನ್ನ ಹೆಸರನ್ನ ತಳುಕು ಹಾಕುವ ಪ್ರಯತ್ನ ಮಾಡಬೇಡಿ. ಅನೇಕ ಬಾರಿ ಇಂದ್ರಜಿತ್ ನನ್ನನ್ನ ಭೇಟಿ ಮಾಡಿ, ಸಂದರ್ಶನ ತೆಗೆದುಕೊಂಡಿದ್ದಾರೆ. ಆದ್ರೆ ಇತ್ತೀಚೆಗೆ ನಾನು ಅವರನ್ನ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೆ ಬೇಕಾದಷ್ಟು ಕೆಲಸವಿದೆ. ಆದ್ರೆ ಈ ಕೇಸಲ್ಲಿ ನನ್ನ ಹೆಸರನ್ನ ತರೋದಕ್ಕೆ ಅದ್ಯಾಕೆ ಪ್ರಯತ್ನ ಮಾಡ್ತಾ ಇದ್ದಾರೆ ಅನ್ನೋದಹ ಗೊತ್ತಾಗ್ತಾ‌ ಇಲ್ಲ. ನಾನು ರಾಜಕೀಯ ಮಾಡಿದ್ರೆ ನೇರವಾಗಿ ಮಾಡ್ತೀನಿ. ಕದ್ದು ಮುಚ್ಚಿ ಮಾಡಲ್ಲ. ವಿಷಯವನ್ನ ನನ್ನಂತೆ ಮುಕ್ತವಾಗಿ ಮಾತಾಡೋರು ಈ ದೇಶದಲ್ಲೆ ಇಲ್ಲ ಎಂದಿದ್ದಾರೆ ಕುಮಾರಸ್ವಾಮಿ.

Click to comment

Leave a Reply

Your email address will not be published. Required fields are marked *

Latest

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

ಪ್ರಮುಖ ಸುದ್ದಿ

ಬೆಂಗಳೂರು :ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೊನೆ ಕ್ಷಣದಲ್ಲಿ ತನ್ನ ಪಾಳಯದ ಬಸವರಾಜ್ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಿ ಇದೀಗ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ ಬಿ.ಎಸ್.ಯಡಿಯೂರಪ್ಪ. ದೆಹಲಿಯಲ್ಲಿ ಸಚಿವ ಸಂಪುಟ ಕಸರತ್ತು...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!