ಬೆಂಗಳೂರು: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟರ್ ಮೂಲಕ ಕಿಡಿಕಾರಿದೆ.
ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತೀರಿ ಸಿದ್ದರಾಮಯ್ಯನವರೇ? ಎಂದು ಟ್ವೀಟರ್ ಮೂಲಕ ಪ್ರಶ್ನಿಸಿದೆ.
ಜಾತಿ ಎಂಬುದು ಈ ದೇಶದಲ್ಲಿ ವಾಸ್ತವ ಎನ್ನುವ ಸಿದ್ದರಾಮಯ್ಯ ಅವರು, ಜಾತಿ ರಾಜಕೀಯ ಬಿಟ್ಟು ಬೇರೇನು ಮಾಡಿಲ್ಲ. ನಿಜವಾಗಿಯೂ ಜಾತ್ಯತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಸಿದ್ದರಾಮಯ್ಯನವರೇ, ನಿಮ್ಮಿಂದ ಜಾತಿಯನ್ನು ಉಪ ಜಾತಿಯಾಗಿ ಒಡೆಯುವುದಕ್ಕೆ ಮಾತ್ರ ಸಾಧ್ಯ ಎಂದು ಟೀಕಿಸಿದೆ.
ತಿಲಕ ಕಂಡರೆ ಭಯ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಹಿಂದೂ ಧರ್ಮದ ಅವಹೇಳನ ಮಾಡಿದರು. ಆಗ ಅವರಿಗೆ ಅಲ್ಪಸಂಖ್ಯಾತರ ಓಲೈಕೆ ಮುಖ್ಯವಾಗಿತ್ತು. ಅದಕ್ಕಾಗಿ ಟಿಪ್ಪು ಜಯಂತಿ ನಡೆಸಿದರು. ಸಿದ್ದರಾಮಯ್ಯನವರೇ, ಇದು ಸಮಾಜ ವಿಭಜನೆಯಲ್ಲವೇ?. ಜಾತಿ, ಕೋಮು ರಾಜಕೀಯವನ್ನು ಮಾಧ್ಯಮ ರಂಗದಲ್ಲಿಯೂ ತುರುಕಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪತ್ರಕರ್ತರಿಗೆ ಮಾತ್ರ ಮಾಧ್ಯಮ ಕಿಟ್ ಒದಗಿಸಲು ಆದೇಶ. ಅಲ್ಪಸಂಖ್ಯಾತರ ಒಡೆತನದ ಪತ್ರಿಕೆಗಳಿಗೆ ಜಾಹಿರಾತು ನೀಡಬೇಕು ಎಂದು ಸುತ್ತೋಲೆ. ಇವೆಲ್ಲ ನಿಮ್ಮ ಸಾಧನೆಯಲ್ವೇ ಸಿದ್ದರಾಮಯ್ಯ? ಎಂದು ಕಿಡಿಕಾರಿದೆ.
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…