ಎ.ಶ್ರೀನಿವಾಸ್ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ : ಮನೆಯಲ್ಲಿ ಸಂಭ್ರಮ : ಆದರೆ…..?

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕುಂತಿ ಗ್ರಾಮದ ಹಗಲುವೇಷಗಾರ ಎ.ಶ್ರೀನಿವಾಸ್ ಅವರಿಗೆ ಪ್ರಸಕ್ತ ವರ್ಷದ ಜನಪದ ಅಕಾಡೆಮಿ ಪ್ರಶಸ್ತಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ.

ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಶ್ರೀನಿವಾಸ್ ತಂದೆ ದಿವಂಗತ ಧೂಪಂ ಅಂಜಿನಪ್ಪ ಹಾರ‍್ಮೋನಿಯಂ ಸೇರಿ ವಿವಿಧ ಕಲೆಯಲ್ಲಿ ಪರಿಣಿತರು. ಅವರ ಹಾಗೂ ಸಮುದಾಯದ ಬಳುವಳಿಯಾಗಿ ಹಗಲುವೇಷದಲ್ಲಿ ಶ್ರೀನಿವಾಸ್ ಜನಮೆಚ್ಚಿದ ಕಲಾವಿದ. ಆದರೆ, ಎಂದೂ ಪ್ರಶಸ್ತಿಗಳ ಬೆನ್ನತ್ತಿ ಹೋದವರಲ್ಲ. ಅದರ ಕುರಿತು ಮಾಹಿತಿಯನ್ನೇ ಹೊಂದಿಲ್ಲದ ಮುಗ್ಧ ವ್ಯಕ್ತಿ.
ಇಂತಹ ಕಲಾವಿದನ ಮನೆ ಬಾಗಿಲಿಗೆ ಜನಪದ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು, ಹಳ್ಳಿಯಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವ ಕಲಾವಿದರ ಬದುಕಿನಲ್ಲಿ ಆಶಾಭಾವನೆ ಮೂಡಿಸಿದೆ.

57 ವರ್ಷದ ಎ.ಶ್ರೀನಿವಾಸ್ ಬಹುರೂಪಿ ಕಲಾವಿದ. ಕಲಾವಿದರ ಕುಟುಂಬವಾದ್ದರಿಂದ ಬಾಲ್ಯದಲ್ಲೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಾಮಾಯಣ, ಮಹಾಭಾರತದ ಪ್ರಸಂಗಗಳು ಮತ್ತು ಪುರಾಣ, ಭಜನೆ ಇತರೆ ಕಾರ್ಯಕ್ರಮಗಳಲ್ಲಿ ನಿರಂತರ ಪ್ರಯೋಗ ನಡೆಸುತ್ತ ಬಂದವರು.

ಸಂಗೀತ ವಾದ್ಯಗಳಾದ ಹಾರ್ಮೋನಿಯಂ, ತಬಲಾ ವಾದನದಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ಇವರ ಕಲಾ ಸೇವೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಂಘ, ಸಂಸ್ಥೆಗಳು, ಮಠ ಮಾನ್ಯಗಳು, ಜಿಲ್ಲಾಡಳಿತ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು, ಪ್ರಸ್ತುತ ಜನಪದ ಅಕಾಡೆಮಿ ಪ್ರಶಸ್ತಿ ಅವರ ಮುಡಿಗೇರಿದೆ.

ಪ್ರಶಸ್ತಿಗೆ ಆಯ್ಕೆ ವಿಷಯ ಜಿಲ್ಲೆಯ ಹೆಮ್ಮೆಯ ಸಂಗತಿ ಅಷ್ಟೇ ಅಲ್ಲ, ಕಲಾಕ್ಷೇತ್ರವಷ್ಟೇ ಅಲ್ಲದೇ ಪ್ರಶಸ್ತಿಗೆ ಆಯ್ಕೆಯಾದ ಶ್ರೀನಿವಾಸ್ ಅವರಷ್ಟೇ ಅಲ್ಲದೇ ಪ್ರತಿಯೊಬ್ಬ ಕಲಾವಿದನು ಸೇರಿದಂತೆ ಜಿಲ್ಲೆಯ ಪ್ರತಿಯೊಬ್ಬರೂ ಸಂಭ್ರಮಿಸುವ ಸಂಧರ್ಭವಿದು. ಆದರೆ ದೂರದೂರಿಗೆ ಪ್ರಯಾಣ ನಡೆಸಿ ಪ್ರಶಸ್ತಿ ಸ್ವೀಕರಿಸುವ ಶಕ್ತಿ ಈಗ ಅವರು ಹೊಂದಿಲ್ಲ. ಏಕೆಂದರೆ ಅವರು ಈಗಾಗಲೇ ಮೂರು ಬಾರಿ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಒಂದೆಡೆ ಪ್ರಶಸ್ತಿ ಲಭಿಸಿದ ಸಂಭ್ರಮ, ಮತ್ತೊಂದೆಡೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ತೆರಳಲು ದೈಹಿಕ ಶಕ್ತಿ ಹೊಂದಿಲ್ಲ. ಈ ಮಧ್ಯೆಯೂ ಮನೆಗೆ ಬಂದು ಶುಭ ಹಾರೈಸುವ ಗಣ್ಯರತ್ತ ಪ್ರತಿಯಾಗಿ ಕೈಮುಗಿಯುವ ಅವರ ಮುಗ್ಧತೆ, ಮತ್ತೊಬ್ಬರ ಕುರಿತು ಗೌರವ ಭಾವನೆ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದೆ. ಜತೆಗೆ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.

ಎ.ಶ್ರೀನಿವಾಸ್ ಅವರ ಪುತ್ರ ಬಿ.ಎಸ್.ಮಂಜಣ್ಣ

ಅಪ್ಪನಿಗೆ ಶಕ್ತಿ ಇಲ್ಲ : ನಮ್ಮ ತಂದೆ ಪಾರ್ಶ್ವ ವಾಯುವಿಗೆ ತುತ್ತಾಗಿದ್ದು, ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರೂ ಸುಧಾರಣೆ ಕಂಡಿಲ್ಲ. ಹಣಕಾಸು ಸಮಸ್ಯೆ ಕಾರಣಕ್ಕೆ ಸುಮ್ಮನಾಗಿದ್ದೇವೆ. ಈಗ ಜನಪದ ಪ್ರಶಸ್ತಿ ಲಭಿಸಿದ್ದು, ಬೀದರ್‌ನಲ್ಲಿ ಸಮಾರಂಭ ಇದೆ. ಅಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸುವಷ್ಟು ದೈಹಿಕ ಶಕ್ತಿ ಅಪ್ಪನಿಗಿಲ್ಲ ಎನ್ನುತ್ತಾರೆ ಪುತ್ರ ಬಿ.ಎಸ್.ಮಂಜಣ್ಣ.


ಗೊಲ್ಲಹಳ್ಳಿ ಶಿವಪ್ರಸಾದ್

ಮನೆ ಬಾಗಿಲಿಗೆ ಪ್ರಶಸ್ತಿ : ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಶ್ರೀನಿವಾಸ್ ಆಯ್ಕೆಯಲ್ಲಿ ಅಕಾಡೆಮಿ ಸದಸ್ಯ ಕಲಮರಹಳ್ಳಿ ಮಲ್ಲಿಕಾರ್ಜುನ ಅವರ ಪಾತ್ರ ದೊಡ್ಡದು. ಶ್ರೀನಿವಾಸ್ ಅವರು ಬೀದರ್‌ಗೆ ಬರಲು ಸಾಧ್ಯವಾಗದಿದ್ದರೆ, ನಾವುಗಳೇ ಅವರ ಮನೆಗೆ ಖುದ್ದಾಗಿ ಹೋಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದೇವೆ ಎನ್ನುತ್ತಾರೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್.


ಕಲಮರಮಹಳ್ಳಿ ಮಲ್ಲಿಕಾರ್ಜುನ್

ನಮ್ಮ ಹೊಣೆ: ಚಿತ್ರದುರ್ಗ ಜಿಲ್ಲೆ ಬುಡಕಟ್ಟುಗಳ ತೊಟ್ಟಿಲು. ಇಲ್ಲಿ ಎಲೆಮರೆ ಕಾಯಿಯಾಗಿ ಸಹಸ್ರಾರು ಮಂದಿ ಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಭಾಗವೇ ಎ.ಶ್ರೀನಿವಾಸ್ ಅವರಿಗೆ ಪ್ರಶಸ್ತಿ ನೀಡಿರುವುದು. ಇನ್ನಷ್ಟು ಮಂದಿಯನ್ನು ಗುರುತಿಸಿ, ಗೌರವಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎನ್ನುತ್ತಾರೆ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕಲಮರಮಹಳ್ಳಿ ಮಲ್ಲಿಕಾರ್ಜುನ್.

suddionenews

Recent Posts

ಇಂದು ದ್ವಿತೀಯ ಪಿಯುಸಿ ಫಲಿತಾಂಶ ; ಎಷ್ಟು ಗಂಟೆಗೆ ಸಿಗಲಿದೆ ರಿಸಲ್ಟ್..?

ಬೆಂಗಳೂರು; ಪರೀಕ್ಷೆ ಬರೆದು ಫಲಿತಂಶಕ್ಕಾಗಿ ಕಾಯುತ್ತಿರುವ ದ್ವಿತೀಯ ಪಿಯುಸಿ ಮಕ್ಕಳಿಗೆ ಇಂದು ಢವಢವ ಶುರುವಾಗಿದೆ. ಎಷ್ಟೇ ಚೆನ್ನಾಗಿ ಬರೆದಿದ್ದರು, ನಿರೀಕ್ಷೆ…

1 hour ago

ದಿನಕ್ಕೆ ಎಷ್ಟು ಬಾರಿ ಅನ್ನ ತಿನ್ನಬೇಕು? ಹೆಚ್ಚಾಗಿ ತಿನ್ನುವುದು ಒಳ್ಳೆಯದೇ?

ಸುದ್ದಿಒನ್ : ಸಾಂಪ್ರದಾಯಿಕವಾಗಿ, ಅನ್ನ ನಮ್ಮ ಪ್ರಧಾನ ಆಹಾರ. ಬಹುತೇಕ ಎಲ್ಲಾ ಊಟಗಳಲ್ಲಿ ಅನ್ನವು ಪ್ರಧಾನ ಆಹಾರವಾಗಿದೆ. ದಿನಕ್ಕೆ ಒಂದಕ್ಕಿಂತ…

2 hours ago

ಈ ರಾಶಿಯವರಿಗೆ ವ್ಯಾಪಾರ ವಹಿವಾಟಗಳಲ್ಲಿ ನಷ್ಟವಾಗಲು ಏನು ಕಾರಣ ಇರಬಹುದು?

ಈ ರಾಶಿಯವರಿಗೆ ವ್ಯಾಪಾರ ವಹಿವಾಟಗಳಲ್ಲಿ ನಷ್ಟವಾಗಲು ಏನು ಕಾರಣ ಇರಬಹುದು? ಲಾಭ ಗಳಿಸಲು ಏನು ಮಾಡಬೇಕು. ಮಂಗಳವಾರದ ರಾಶಿ ಭವಿಷ್ಯ…

5 hours ago

ಕೋರ್ಟ್ ನಿರ್ಬಂಧ ಸಡಿಲಿಕೆ ; ಊರಿಗೆ ಬಂದ ಭವಾನಿ ರೇವಣ್ಣರಿಗೆ ಹೂವಿನ ಸ್ವಾಗತ.. ನನಗೆ ಮುಜುಗರವಾಗುತ್ತೆ ಅಂದಿದ್ಯಾಕೆ ದೊಡ್ಡಗೌಡ್ರ ಸೊಸೆ..?

ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…

14 hours ago

ರಾಜ್ಯದ ಮುಂದಿನ ಸಿಎಂ ಬಗ್ಗೆ ಕೋಡಿಶ್ರೀ ಭವಿಷ್ಯ ; ಏನಂದ್ರು ಸ್ವಾಮೀಜಿ..?

ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…

15 hours ago

ಹಿರಿಯೂರು : ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್ ವ್ಯತ್ಯಯ

ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…

15 hours ago