Connect with us

Hi, what are you looking for?

ಪ್ರಮುಖ ಸುದ್ದಿ

ಮೀನುಗಾರಿಕೆ ಇಲಾಖೆ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ :ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯನ್ನು ಅನುμÁ್ಟನಗೊಳಿಸಲಾಗುತ್ತದೆ. 2021-22ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 5 ಕೊನೆ ದಿನವಾಗಿದೆ.

ಈ ಯೋಜನೆಯಡಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಾದ ಮೀನುಕೃಷಿ ಕೊಳಗಳ ನಿರ್ಮಾಣ, ಬಯೋಫ್ಲಾಕ್ ವಾಹನ ಖರೀದಿ, ಮೀನುಮರಿ ಉತ್ಪಾದನೆ ಹಾಗೂ ಪಾಲನಾ ನಿರ್ಮಾಣ ಕೇಂದ್ರಗಳ ಸ್ಥಾಪನೆ, ಶೈತೀಕರಿಸಿದ ಶಾಖಾ ನಿರೋಧಕ ವಾಹನ ಖರೀದಿ, ಶೈತ್ಯಾಗಾರ, ಮಂಜುಗಡ್ಡೆ ಸ್ಥಾವರ ನಿರ್ಮಾಣ ಮತ್ತು ಇತರೆ ಯೋಜನೆಗಳನ್ನು ಅನುμÁ್ಟನಗೊಳಿಸಲು ಅರ್ಜಿ ಆಹ್ವಾನಿಸಿದೆ.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.40ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.60ರಷ್ಟು ಸಹಾಯಧನ ನೀಡಲಾಗುವುದು.

2020-21ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಕೇಂದ್ರ ವಲಯ ರಾಜ್ಯ ವಲಯ ಮತ್ತು ಜಿಲ್ಲಾ ವಲಯದ ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿ, ಮೀನುಮರಿ ಖರೀದಿಗೆ ಸಹಾಯ ಹಾಗೂ ಇತ್ಯಾದಿ ಯೋಜನೆಗಳಿಗೆ ಸಹಾಯಧನ ಪಡೆಯಲು ಆಸಕ್ತ ಮೀನುಗಾರರು, ಮೀನು ಕೃಷಿಕ ಫಲಾನುಭವಿಗಳು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ್ ಜೋಗಿಮಟ್ಟಿ ರಸ್ತೆ ಪ್ರಶಾಂತ್ ನಗರ 4ನೇ ಕ್ರಾಸ್, ಡಾ.ರವಿಚಂದ್ರನ್ ಕಟ್ಟಡ, ಚಿತ್ರದುರ್ಗ ದೂರವಾಣಿ ಸಂಖ್ಯೆ 8147472440, ಚಿತ್ರದುರ್ಗ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ-7353442282, ಹಿರಿಯೂರು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ- 9972010433, ಹೊಸದುರ್ಗ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ-7022933310, ಚಳ್ಳಕೆರೆ ಮತ್ತು ಮೊಳಕಾಲ್ಮುರು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 9342187356ಗೆ ಸಂಪರ್ಕಿಸಬಹುದು ಎಂದು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಮೋದಿ ನೇತೃತ್ವದ ಅಧಿಕಾರದಲ್ಲಿ ಬಡವರು, ದೀನ ದಲಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್‍ನಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಅಗತ್ಯ ವಸ್ತುಗಳ ಬೆಲೆ ಏರಿಸಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಪೆಟ್ರೋಲಿಯಂ ಪ್ರಾಡಕ್ಟ್‌ಗಳನ್ನು ವ್ಯಾಟ್ ಅಡಿಗೆ ತಂದು ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದ...

error: Content is protected !!