Connect with us

Hi, what are you looking for?

ಪ್ರಮುಖ ಸುದ್ದಿ

ʼವಿಂಡೋಸೀಟ್ʼ ಪಸ್ಟ್ ಲುಕ್ ವಿಡಿಯೋಗೆ ಪ್ರೇಕ್ಷಕರು ಫಿದಾ, ಇನ್ನು ಸಿನಿಮಾ ಬಂದ್ರೆ..!

sharana samskruthi ustav 2020_suddione banner 1
ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಈಗಾಗಲೇ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿತವಾಗಿದೆ. ಇಂದು ಫಸ್ಟ್ ಲುಕ್ ವಿಡಿಯೋ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಒಂದೊಳ್ಳೆ ಸಿನಿಮಾ ಬರ್ತಾ ಇದೆ ಎಂಬ ಆಸೆ ಹುಟ್ಟುವಂತೆ ಮಾಡಿದೆ.
ಇದೊಂದು ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದೆ. ಫಸ್ಟ್ ಲುಕ್ ವಿಡಿಯೋ ಬಿಡುವ ಮುನ್ನವೇ ಒಂದು ಫೋಟೋವನ್ನು ಚಿತ್ರತಂಡ ಬಿಡುಗಡೆ ಮಾಡಲಾಗಿತ್ತು. ಆ ಪೋಸ್ಟರ್ ನೋಡಿದಾಗಲೇ ಸಿನಿಮಾ ಏನೋ ವಿಭಿನ್ನವಾಗಿದೆ ಎಂದನ್ನಿಸಿದ್ದಂತು ನಿಜ. ಅದರಲ್ಲಿ ಕಾಣಿಸಿಕೊಂಡಿದ್ದು ಅಗೋಚರ ಚಹರೆಗಳು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಇಂದು ಅದಕ್ಕೆ ಉತ್ತವೆಂಬಂತೆ ಫಸ್ಟ್ ಲುಕ್ ವಿಡಿಯೊ ರಿಲೀಸ್ ಆಗಿದ್ದು, ಸಾಕಷ್ಟು ವ್ಯೂವ್ಸ್ ಪಡೆದುಕೊಂಡಿದೆ.

ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಫಸ್ಟ್ ಲುಕ್ ರಿಲಿಸ್ ಆಗಿದೆ. ಇಂದು ಬೆಳಗ್ಗೆ 11 ಗಂಟೆಗೆ ರಿಲಿಸ್ ಆಗಿದೆ. ವಿಡಿಯೋದಲ್ಲಿ ಪ್ರಕೃತಿಯ ಸೌಂದರ್ಯವನ್ನು ಅದ್ಭುತವಾಗಿ ತೋರಿಸಿದ್ದಾರೆ. ಪ್ರಕೃತಿ ಹಾಗೂ ಹೆಣ್ಣಿನ ಎರಡು ಸೌಂದರ್ಯವನ್ನು ಒಟ್ಟಿಗೆ ಸವಿಯುವಂತ ಭಾವನೆ ಫಸ್ಟ್ ಲುಕ್ ಟೀಸರ್ ನಲ್ಲಿ ಮೂಡುತ್ತೆ. ಕೇವಲ 52 ಸೆಕೆಂಡ್ ಇರುವ ವಿಡಿಯೋ ಅದ್ದೂರಿಯಾಗಿ ಮೂಡಿಬಂದಿದೆ. ಮತ್ತೆ ಮತ್ತೆ ನೋಡಬೇಕು ಎನ್ನುವ ಭಾವದೊಂದಿಗೆ ಸಿನಿಮಾ ಇನ್ನೆಷ್ಟರ ಮಟ್ಟಿಗೆ ರಾಯಲ್ ಆಗಿ ಇರಬಹುದು ಎಂಬ ಪ್ರಶ್ನೆ ಹುಟ್ಟು ಹಾಕದೆ ಇರದು.


ಶೀತಲ್ ಶೆಟ್ಟಿ ಕಥೆ_ಚಿತ್ರಕಥೆ ಬರೆದು ತಾವೇ ನಿರ್ದೇಶನ ಕೂಡ ಮಾಡಿದ್ದಾರೆ. ನಾಯಕನ ಪಾತ್ರದಲ್ಲಿ ನಿರೂಪ್ ಬಂಡಾರಿ ನಟಿಸಿದ್ದು, ಸಂಜನಾ ಆನಂದ್ ಹಾಗೂ ಅಮೃತಾ ಐಯ್ಯರ್ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ರವಿಶಂಕರ್, ಮಧುಸೂದನ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆ. ಮಂಜು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಯೋಗರಾಜ್ ಭಟ್, ಕವಿರಾಜ್, ಸುಮುಖ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಪಾಶಾಂಕುಶಾ ಏಕಾದಶಿ ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಏಕಾದಶೀ – 10:46 ವರೆಗೆ ನಕ್ಷತ್ರ: ಶತಭಿಷ – 06:36 ವರೆಗೆ ಯೋಗ: ಧ್ರುವ –...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 3130 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 805947 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 42 ಮಂದಿ ಸಾವನ್ನಪ್ಪಿದ್ದಾರೆ....

ದಿನ ಭವಿಷ್ಯ

ಸೋಮವಾರ ರಾಶಿ ಭವಿಷ್ಯ-ಅಕ್ಟೋಬರ್-26,2020 ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ದಶಮೀ – 08:59 ವರೆಗೆ ನಕ್ಷತ್ರ: ಶತಭಿಷ – ಪೂರ್ಣ ರಾತ್ರಿ ವರೆಗೆ ಯೋಗ:...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 4439 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 802817 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 32 ಮಂದಿ ಸಾವನ್ನಪ್ಪಿದ್ದಾರೆ....

ದಿನ ಭವಿಷ್ಯ

ಸೂರ್ಯೋದಯ: 06:15, ಸೂರ್ಯಸ್ತ: 17:52 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ನವಮೀ – 07:41 ವರೆಗೆ ನಕ್ಷತ್ರ: ಧನಿಷ್ಠ – 28:23+ ವರೆಗೆ ಯೋಗ: ಗಂಡ – 24:29+ ವರೆಗೆ...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 4471 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 798378 ಕ್ಕೆ ಏರಿಕೆಯಾಗಿದೆ. ಮತ್ತು ಇಂದು...

ದಿನ ಭವಿಷ್ಯ

ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-24,2020 ದುರ್ಗಾ ಅಷ್ಟಮಿ, ಮಹಾ ನವಮಿ ಸೂರ್ಯೋದಯ: 06:14, ಸೂರ್ಯಸ್ತ: 17:52 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಅಷ್ಟಮೀ – 06:58 ವರೆಗೆ ನಕ್ಷತ್ರ: ಶ್ರವಣ –...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 5356 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 793907 ಕ್ಕೆ ಏರಿಕೆಯಾಗಿದೆ. ಮತ್ತು ಇಂದು...

ಪ್ರಮುಖ ಸುದ್ದಿ

ಬೆಂಗಳೂರು : ನವೆಂಬರ್ 17ರಿಂದ ಪದವಿ ಕಾಲೇಜು ಆರಂಭಿಸಲು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ...