Connect with us

Hi, what are you looking for?

ಪ್ರಮುಖ ಸುದ್ದಿ

ಹುಲಿವಾನ್ ಗಂಗಾಧರಯ್ಯ ಇನ್ನಿಲ್ಲ !

ಬೆಂಗಳೂರು : ಅಜಾತಶತ್ರು, ಸ್ನೇಹಿತರ ಪಾಲಿನ ಪ್ರಿಯಮಿತ್ರ,ಅಪರೂಪದ ಕಲಾವಿದ ಹುಲಿವಾನ್ ಗಂಗಾಧರಯ್ಯ (70) ಬಣ್ಣದ ಲೋಕದ ವ್ಯವಹಾರ ಮುಗಿಸಿ, ಮತ್ತೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಕೃಷಿಕ ಮನೆತನದಿಂದ ಬಂದು,ಬಣ್ಣದ ಲೋಕದ ಅರಮನೆಗೆ ಮೆರುಗು ತಂದು, ಲಕ್ಷಾಂತರ ವೀಕ್ಷಕರ, ಸಾವಿರಾರು ಸಹಕಲಾವಿದರ ಪ್ರೀತಿಗೆ ಕಾರಣರಾಗಿ, ಹುಲಿವಾನ ಗ್ರಾಮದ ಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಗಂಗಾಧರಯ್ಯ ಎಂದೂ ಹೆಸರು ಕೆಡಿಸಿಕೊಳ್ಳದ ಸಭ್ಯ, ಸದ್ಗೃಹಸ್ಥ ಮಾನವತಾವಾದಿಯಾಗಿದ್ದರು.

ನಾಟಕವನ್ನು ನೋಡಿ, ನಾಟಕಾಸಕ್ತಿಯನ್ನು ಬೆಳೆಸಿಕೊಂಡು, ವೇದಿಕೆ ಮೇಲೆ 1500 ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನು ನೀಡಿದ ಕೀರ್ತಿ ಹುಲಿವಾನ್ ಗಂಗಾಧರಯ್ಯನವರದು. ಚೋಮ, ಆಸ್ಪೋಟ, ಚಿರಸ್ಮರಣೆ, ಭುಟ್ಟೋ, ಈಡಿಪಸ್, ಅಂತಿಗೊನೆ ನಾಟಕಗಳಲ್ಲಿನ ಅವರ ಪ್ರಭುದ್ಧ ಅಭಿನಯವನ್ನು ಕಲಾಸಕ್ತರು ಎಂದಿಗೂ ಮರೆಯುವುದಿಲ್ಲ.

ನಾಟಕದೊಂದಿಗೆ ತಮ್ಮ ಕಲಾ ಬದುಕಿನ ಪಯಣವನ್ನು ಆರಂಭಿಸಿದ ಹುಲಿವಾನ್ ಗಂಗಾಧರಯ್ಯ ಸುಮಾರು  118 ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ಐದಾರು ಸಾವಿರಕ್ಕೂ ಮೀರಿದ ಕಿರುತೆರೆಯ ಪ್ರಕರಣಗಳಲ್ಲಿ ನಟಿಸಿ, ತಮ್ಮ ನಟನಾ ಸಾಮರ್ಥ್ಯವನ್ನು ಧಾರೆಯೆರೆದಿದ್ದವರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅವರು ನಟಿಸುತ್ತಿದ್ದ ‘ಪ್ರೇಮಲೋಕ’,  ಗಂಗಾಧರಯ್ಯನವರು ಕಾಣಿಸಿಕೊಳ್ಳುತ್ತಿದ್ದ ಕಟ್ಟಕಡೆಯ ಮೆಗಾ ಧಾರಾವಾಹಿ‌.
ಐಟಿಐ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಗಂಗಾಧರಯ್ಯ ನಟನೆಯ ಜೊತೆಗೆ, ಸಾವಯವ ಕೃಷಿಗೆ ಹೆಚ್ಚಿನ ಒತ್ತುಕೊಟ್ಟು , ಕುಣಿಗಲ್ ಸಮೀಪದ ಹುಲಿಯೂರಿನಲ್ಲಿಯೇ ‘ಕೊಕೊನೆಟ್ ಪ್ರೊಡ್ಯೂಸರ್ಸ್ ಕಂಪನಿ ‘ ಎಂದು ಸ್ಥಾಪಿಸಿ, ‘ನೀರಾ’ವನ್ನು ಮಾರುಕಟ್ಟೆಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಪ್ರಭಲ ಹೋರಾಟವನ್ನೇ ನಡೆಸಿದ್ದವರು. ಅವರ ಕೃಷಿ ಜಗತ್ತಿನ ಒಟ್ಟಾರೆ ಸಾಧನೆಗಾಗಿ”ಔಟ್ ಸ್ಟ್ಯಾಂಡಿಂಗ್ ಅಂಡ್ ಇನ್ನೋವೇಟಿವ್ ಫಾರ್ಮರ್”ಎಂಬ ಹೆಸರಿನ ರಾಷ್ಟ್ರಪ್ರಶಸ್ತಿಯೂ  ಲಭ್ಯವಾಗಿತ್ತು ‌. ಕೊರೋನಾ ಮಹಾಮಾರಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಮತ್ತೆ ಬಾರದ ಲೋಕಕ್ಕೆ ಗಂಗಾಧರಯ್ಯ ಪ್ರವೇಶ ಪಡೆದಿದ್ದಾರೆ. ಜನ ತಮ್ಮನ್ನು ಮರೆಯದಿರುವಂತೆ ಮಾಡುವ ಹಲವಾರು ದಾಖಲೆಗಳನ್ನು ಕಲಾಪ್ರಪಂಚದಲ್ಲಿ ಶಾಶ್ವತವಾಗಿ ಹಿಡಿದಿಟ್ಟು ಮರೆಯಾಗಿದ್ದಾರೆ. ನಟನೆಯ ಹುಲಿಯನ್ನು ಕಳೆದುಕೊಂಡ ಕಲಾಲೋಕ ಬಡವಾಗಿರುವುದಂತೂ ಸತ್ಯ !

 

 

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸಿಎಂ ಯಡಿಯೂರಪ್ಪ ಅವರು 500 ಕೋಟಿ ಅನುದಾನವನ್ನು ನೀಡಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ...

ಪ್ರಮುಖ ಸುದ್ದಿ

ಬೆಂಗಳೂರು : ನಟಿ ಸಾನ್ವಿ ಶ್ರೀವಾತ್ಸವ್ ಸದ್ಯ ಮಾಲ್ಡೀವ್ಸ್ ಬೀಚ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಿಂದ ಕೊಂಚ ಬಿಡುವ ಪಡೆದಿರುವ ನಟಿ, ಪ್ರವಾಸದಲ್ಲಿದ್ದು, ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ...

ಪ್ರಮುಖ ಸುದ್ದಿ

ಬೆಂಗಳೂರು : ಕರೊನಾ ಲಾಕ್‍ಡೌನ್ ನಂತರ ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆಯಿಂದ ಬಿಡುಗಡೆಯಾದ ‘ಆಕ್ಟ್-1978’ ಚಿತ್ರವು ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಗ್ ಬಜೆಟ್ ಚಿತ್ರಗಳ ರೀಲಿಸ್‍ಗೂ ಮುನ್ನ ‘ಆಕ್ಟ್-1978’ ತೆರೆ...

ಪ್ರಮುಖ ಸುದ್ದಿ

ಬೆಂಗಳೂರು :ರಾಜ್ಯದಲ್ಲಿ ಡಿಸೆಂಬರ್‍ವರೆಗೂ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಸಿಎಂ ಹೇಳಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶೀಘ್ರವೇ ಎಸ್.ಎಸ್ ಎಲ್ ಸಿ ಮತ್ತು ದ್ವಿತೀಯ...

ಪ್ರಮುಖ ಸುದ್ದಿ

ಬೆಂಗಳೂರು: ಇಂದು ಶಾಲೆಗಳನ್ನು ಪ್ರಾರಂಭ ಮಾಡುವ ವಿಚಾರಕ್ಕೆ ಅಭಿಪ್ರಾಯ ಪಡೆಯಲು ಸಭೆ ಕರೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಡಿಸೆಂಬರ್ ಅಂತ್ಯದವರೆಗೂ ಶಾಲೆಗಳು ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ...

ಪ್ರಮುಖ ಸುದ್ದಿ

ಬೆಂಗಳೂರು :ತಜ್ಞರ ಅಭಿಪ್ರಾಯದಂತೆ ಡಿಸೆಂಬರ್‌ವರೆಗೆ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದರು. ಶಾಲಾ-ಕಾಲೇಜು ಪ್ರಾರಂಭ ಕುರಿತು ಸಿಎಂ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು. ಸಭೆ...

ಪ್ರಮುಖ ಸುದ್ದಿ

ಬೆಂಗಳೂರು : ಸಂಕಷ್ಟದಲ್ಲಿರುವ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.26ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ಹೇಳಿದ್ದಾರೆ. ದಾಬಸ್ಪೇಟೆಯಲ್ಲಿ ಆಯೋಜಿಸಿದ್ದ ಸಿಐಟಿಯು ಬಹಿರಂಗ ಅಧಿವೇಶನದಲ್ಲಿ...

ಪ್ರಮುಖ ಸುದ್ದಿ

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಇಳಿಮುಖ ಕಾಣುತ್ತಿದ್ದರೂ ಸಹ ಶಾಲೆ ಪ್ರಾರಂಭಿಸಲು ಡಿಸೆಂಬರ್ ಸಹ ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು...

ಪ್ರಮುಖ ಸುದ್ದಿ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ. ದೆಹಲಿ ಮೂಲದ ಹದಿಮೂರು ಅಧಿಕಾರಿಗಳ ತಂಡ ದಾಳಿ...

error: Content is protected !!