Connect with us

Hi, what are you looking for?

ಪ್ರಮುಖ ಸುದ್ದಿ

ರಿಯಲ್ ಹೀರೋ ಸೋನು ಸೂದ್ ಆಸ್ತಿ ಎಷ್ಟು ಗೊತ್ತಾ ?

ಬೆಂಗಳೂರು : ತೆರೆಯಮೇಲೆ ಖಳನಾಯಕನ ಪಾತ್ರ. ನಿಜ ಜೀವನದಲ್ಲಿ ನಿಜವಾದ ನಾಯಕನ ಪಾತ್ರ. ಕರೋನಾದಿಂದಾಗಿ ಲಾಕ್‌ಡೌನ್ ಹೇರಿದಾಗ ಜನರು ತಾವು ಇರುವ ಸ್ಥಳದಲ್ಲಿ ಇರಬೇಕಾದ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ಮನೆ, ಹಣ, ಮತ್ತು ತಿನ್ನಲು ಆಹಾರ ಹೀಗೆ ಉಳ್ಳವರ ಸ್ಥಿತಿ ಚೆನ್ನಾಗಿತ್ತು. ಆದರೆ ಹೊಟ್ಟೆ ಪಾಡಿಗಾಗಿ ಎಲ್ಲರನ್ನೂ ಬಿಟ್ಟು ಊರಿಂದ ಊರಿಗೆ ಪರಸ್ಥಳಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ವಲಸೆ ಕಾರ್ಮಿಕರ ಪರಿಸ್ಥಿತಿ ಮಾತ್ರ ಹೇಳತೀರದು.

ಸರ್ಕಾರದ ಸಹಾಯ ದೊರೆಯದೆ, ರೈಲುಗಳು, ಬಸ್ಸುಗಳು ಇಲ್ಲದೆ ತಮ್ಮ ಸ್ವಂತ ಊರಿಗೆ ಸೇರಿಕೊಳ್ಳಲಾಗದೆ, ಇದ್ದಲ್ಲಿಯೇ ಇದ್ದು ಹೊಟ್ಟೆಗೆ ಹಿಟ್ಟಿಲ್ಲದೆ, ಇರಲು ಆಶ್ರಯವಿಲ್ಲದೆ ಬದುಕಿಗೊಂದು ಭದ್ರತೆಯಿಲ್ಲದೆ ಅವರು ಆ ಸಮಯದಲ್ಲಿ ಅವರು ಅನುಭವಿಸಿದ ಯಾತನೆ ವರ್ಣಾತೀತ.

ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರಿಗೆಲ್ಲ ಆಸರೆಯಾಗಿ ಬಂದಿದ್ದು ಅವರ ಪಾಲಿಗೆ ನಿಜವಾದ ನಾಯಕನಾಗಿದ್ದು ಇದೇ ಖಳನಾಯಕ.ಸಿನಿಮಾಗಳಲ್ಲಿ ಹೀರೋಗಳೆಂದು ಹೇಳಿಕೊಳ್ಳುವ ಸಾಕಷ್ಟು ಹೀರೋಗಳು ಹೆಚ್ಚಿನ ಜನರಿಗೆ ಮಾಡಲಾಗದಂತಹ ಸಹಾಯವನ್ನು ಅವರು ಮಾಡಿದ್ದಾರೆ. ಈ ಮೂಲಕ ನಿಜವಾದ ನಾಯಕ ಎಂದು ಸಾಬೀತಾಗಿದೆ.

ಎಲ್ಲಾ ವಲಸೆ ಕಾರ್ಮಿಕರು ನಮಗೆ ಯಾರು ದಿಕ್ಕು, ಯಾರು ಆಸರೆಯಾಗುತ್ತಾರೆಂದು ಎದುರು ನೋಡುತ್ತಿದ್ದಾಗ ನಾನಿರುವುದು ನಿಮಗಾಗಿ ಎಂದು ಸೋನು ಸೂದ್ ಅವರಿಗೆ ಆಸರೆಯಾಗಿ ನಿಂತು ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ಸೇರಿಸಿದರು.

ಅಂದಿನಿಂದ ಯಾರು ಸಹಾಯ ಕೇಳಿದರೂ ಉದಾರತನದಿಂದಾಗಿ ಸಹಾಯವನ್ನು ಮಾಡುತ್ತಿದ್ದಾರೆ. ಅಲ್ಲಿಯವರು, ಇಲ್ಲಿಯವರು ಎಂಬ ಭೇದವಿಲ್ಲದೆ
ತೊಂದರೆಯಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

ಮೊನ್ನೆ ಮೊನ್ನೆಯಷ್ಟೆ ಆಂಧ್ರಪ್ರದೇಶದಲ್ಲಿ, ತೊಂದರೆಯಲ್ಲಿದ್ದ ರೈತ ಕುಟುಂಬಕ್ಕೆ ಟ್ರಾಕ್ಟರ್ ಖರೀದಿಸಿ ಸಹಾಯ ಮಾಡುವ ಮೂಲಕ ಮತ್ತೊಮ್ಮೆ ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ರೀತಿಯಾಗಿ ಎಲ್ಲರಿಗೂ ಸಹಾಯ ಮಾಡುತ್ತಿರುವ ಸೋನು ಸೂದ್ ಅವರ ಆಸ್ತಿ ಎಷ್ಟು ? ಎಷ್ಟು ಆಸ್ತಿಯಿದ್ದರೆ ಮಾತ್ರ ಹೀಗೆ ಯಾರಿಗೆಂದರವರಿಗೆ ಸಹಾಯ ಮಾಡುತ್ತಾರಾ ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಸೋನು ಸೂದ್ ಕುರಿತು ಇತ್ತೀಚೆಗೆ ಬಾಲಿವುಡ್ ಮಾಧ್ಯಮ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ಅವರ ಒಟ್ಟು ಆಸ್ತಿ ರೂ. 130 ಕೋಟಿ ರೂ.ಗಳು. ಕಳೆದ 20 ವರ್ಷಗಳಿಂದ ಚಲನಚಿತ್ರ ರಂಗದಲ್ಲಿರುವ ಸೋನು ಸೂದ್ ಅವರು ಚಲನಚಿತ್ರಗಳಲ್ಲಿ ನಟಿಸುವ ಮೂಲಕವೇ ಆ ಹಣವನ್ನು ಸಂಪಾದಿಸಿದ್ದಾರೆಂದು ತಿಳಿದು ಬಂದಿದೆ. ನೆಗೆಟಿವ್ ಪಾತ್ರಗಳನ್ನು ಮಾಡುವುದರಲ್ಲಿ ಉತ್ತಮ ಹೆಸರು ಹೊಂದಿರುವ ಸೋನು ಸೂದ್ ಅತಿ ಹೆಚ್ಚು ಸಂಭಾವನೆ ಪಡೆಯುವ ಖಳನಾಯಕರಲ್ಲಿ ಒಬ್ಬರು.

ಚಲನಚಿತ್ರಗಳಿಂದ ಗಳಿಸಿದ ಹಣದಿಂದ ಸೋನು ಸೂದ್ ಮುಂಬಯಿಯಲ್ಲಿ ಹೋಟೆಲ್‌ಗಳನ್ನು ತೆರೆದಿದ್ದಾರೆ. 2020 ರಲ್ಲಿ ಅವರ ಆಸ್ತಿಯ ಮೌಲ್ಯ ರೂ. 130 ಕೋಟಿ, ಈಗಾಗಲೇ 10 ಕೋಟಿ ರೂ.ವರೆಗೆ ಖರ್ಚು ಮಾಡಲಾಗಿದೆ ಎಂದು ತೋರುತ್ತದೆ.ಇನ್ನು ಮುಂದೆಯೂ ಕೂಡಾ ಯಾರಾದರೂ ಸಹಾಯ ಕೇಳಿದರೆ ನಾನಿದ್ದೇನೆ ಎನ್ನುತ್ತಾರೆ ರಿಯಲ್ ಹೀರೋ ಸೋನು ಸೂದ್.

1 Comment

1 Comment

Leave a Reply

Your email address will not be published. Required fields are marked *

You May Also Like

ಆರೋಗ್ಯ

ಅಂಟುವಾಳ ಕಾಯಿ ಎಲ್ಲರಿಗೂ ಚಿರಪರಿಚಿತ. ಪ್ರಾಚೀನ ಕಾಲದಿಂದಲೂ ಬಟ್ಟೆ ತೊಳೆಯಲು ಹಾಗೂ ಬೆಳ್ಳಿ ಆಭರಣಗಳನ್ನು ತೊಳೆಯಲು ಈ ಕಾಯಿಯನ್ನು ಬಳಸುತ್ತಿದ್ದಾರೆ. ಇದಲ್ಲದೇ ಸೀಗೆ ಕಾಯಿ, ನೆಲ್ಲಿಕಾಯಿ ಕಾಯಿ ಸೇರಿಸಿ ಶಾಂಪೂ ತರಹ ಬಳಸುತ್ತಾರೆ....

ಪ್ರಮುಖ ಸುದ್ದಿ

ಬೆಂಗಳೂರು: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸಿಎಂ ಯಡಿಯೂರಪ್ಪ ಅವರು 500 ಕೋಟಿ ಅನುದಾನವನ್ನು ನೀಡಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ...

ಪ್ರಮುಖ ಸುದ್ದಿ

ಬೆಂಗಳೂರು : ನಟಿ ಸಾನ್ವಿ ಶ್ರೀವಾತ್ಸವ್ ಸದ್ಯ ಮಾಲ್ಡೀವ್ಸ್ ಬೀಚ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಿಂದ ಕೊಂಚ ಬಿಡುವ ಪಡೆದಿರುವ ನಟಿ, ಪ್ರವಾಸದಲ್ಲಿದ್ದು, ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ...

ಪ್ರಮುಖ ಸುದ್ದಿ

ಬೆಂಗಳೂರು : ಕರೊನಾ ಲಾಕ್‍ಡೌನ್ ನಂತರ ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆಯಿಂದ ಬಿಡುಗಡೆಯಾದ ‘ಆಕ್ಟ್-1978’ ಚಿತ್ರವು ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಗ್ ಬಜೆಟ್ ಚಿತ್ರಗಳ ರೀಲಿಸ್‍ಗೂ ಮುನ್ನ ‘ಆಕ್ಟ್-1978’ ತೆರೆ...

ಪ್ರಮುಖ ಸುದ್ದಿ

ಬೆಂಗಳೂರು :ರಾಜ್ಯದಲ್ಲಿ ಡಿಸೆಂಬರ್‍ವರೆಗೂ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಸಿಎಂ ಹೇಳಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶೀಘ್ರವೇ ಎಸ್.ಎಸ್ ಎಲ್ ಸಿ ಮತ್ತು ದ್ವಿತೀಯ...

ಪ್ರಮುಖ ಸುದ್ದಿ

ಬೆಂಗಳೂರು: ಇಂದು ಶಾಲೆಗಳನ್ನು ಪ್ರಾರಂಭ ಮಾಡುವ ವಿಚಾರಕ್ಕೆ ಅಭಿಪ್ರಾಯ ಪಡೆಯಲು ಸಭೆ ಕರೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಡಿಸೆಂಬರ್ ಅಂತ್ಯದವರೆಗೂ ಶಾಲೆಗಳು ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ...

ಪ್ರಮುಖ ಸುದ್ದಿ

ಬೆಂಗಳೂರು :ತಜ್ಞರ ಅಭಿಪ್ರಾಯದಂತೆ ಡಿಸೆಂಬರ್‌ವರೆಗೆ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದರು. ಶಾಲಾ-ಕಾಲೇಜು ಪ್ರಾರಂಭ ಕುರಿತು ಸಿಎಂ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು. ಸಭೆ...

ಪ್ರಮುಖ ಸುದ್ದಿ

ಬೆಂಗಳೂರು : ಸಂಕಷ್ಟದಲ್ಲಿರುವ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.26ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ಹೇಳಿದ್ದಾರೆ. ದಾಬಸ್ಪೇಟೆಯಲ್ಲಿ ಆಯೋಜಿಸಿದ್ದ ಸಿಐಟಿಯು ಬಹಿರಂಗ ಅಧಿವೇಶನದಲ್ಲಿ...

ಪ್ರಮುಖ ಸುದ್ದಿ

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಇಳಿಮುಖ ಕಾಣುತ್ತಿದ್ದರೂ ಸಹ ಶಾಲೆ ಪ್ರಾರಂಭಿಸಲು ಡಿಸೆಂಬರ್ ಸಹ ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು...

error: Content is protected !!