Connect with us

Hi, what are you looking for?

ಪ್ರಮುಖ ಸುದ್ದಿ

ಒಂದಷ್ಟು ಬದಲಾವಣೆಯೊಂದಿಗೆ ಮತ್ತೆ ಬರ್ತಿದ್ದಾನೆ ʼಕಾಣದಂತೆ ಮಾಯವಾದನುʼ

sharana samskruthi ustav 2020_suddione banner 1

ಬೆಂಗಳೂರು:ಲವ್ ಫ್ಯಾಂಟಸಿ, ಹಾರಾರ್, ಆಕ್ಷನ್, ಸಸ್ಪೆನ್ಸ್ ಎಲ್ಲಾ ಎಲಿಮೆಂಟ್ಗಳನ್ನು ಇಟ್ಟುಕೊಂಡು ತಯಾರಾಗಿದ್ದ ಸಿನಿಮಾ ʼಕಾಣದಂತೆ ಮಾಯವಾದನುʼ. ನಿರ್ದೇಶನದ ನಂತರ ಮೊದಲ ಬಾರಿಗೆ ವಿಕಾಸ್ ಈ ಸಿನಿಮಾದಿಂದ ನಾಯಕ ನಟನಾಗಿ ಎಂಟ್ರಿಯಾಗಿದ್ದರು. ಜನವರಿ ಕೊನೆಯಲ್ಲಿ ಸಿನಿಮಾ ತೆರೆಗೆ ಬಂದಿದ್ದರು, ಥಿಯೇಟರ್ ಸಮಸ್ಯೆಯನ್ನ ಎದುರಿಸಿತ್ತು. ಒಳ್ಳೆ ಆರಂಭಪಡೆದುಕೊಂಡಿದ್ದರು, ಥಿಯೇಟರ್ ನಲ್ಲಿ ನಿಲ್ಲಲು ಆಗಿರಲಿಲ್ಲ. ಹಾರಾರ್ ಸಬ್ಜೆಕ್ಟ್ ಆದ್ರೂ ಕೂಡ ಡಿಫ್ರೆಂಟ್ ಆಂಗಲ್ ನಲ್ಲಿ ಸಿನಿಮಾ ತೆಗೆದಿದ್ದರು. ಹೀಗಾಗಿ ಜನರಿಗೂ ಅಚ್ಚುಮೆಚ್ಚಾಗಿತ್ತು. ಅಂದು ನೋಡದೆ ಮಿಸ್ ಮಾಡಿಕೊಂಡ ಸಿನಿ ಪ್ರೇಕ್ಷಕರಿಗೆ ʼಕಾಣದಂತೆ ಮಾಯವಾದನುʼ ಮತ್ತೆ ದರ್ಶನ ಕೊಡಲು ಬರ್ತಿದ್ದಾನೆ.

ಕೊರೊನಾ ವೈರಸ್ ಹಾವಳಿ ಎಲ್ಲಾ ಕ್ಷೇತ್ರದ ಮೇಲೂ ತನ್ನದೇ ಆದ ಕರಿಛಾಯೆಯನ್ನು ಬೀರಿತ್ತು. ಎಲ್ಲಾ ದಿನ ಕಳೆದಂತೆ ಎಲ್ಲಾ ಕ್ಷೇತ್ರಗಳಿಗೂ ವಿನಾಯ್ತಿ ಸಿಕ್ಕರು ಮನರಂಜನೆ ಕ್ಷೇತ್ರಕ್ಕೆ ಮಾತ್ರ ಆ ಭಾಗ್ಯ ಸಿಕ್ಕಿರಲಿಲ್ಲ. ಬರೋಬ್ಬರಿ 7 ತಿಂಗಳ ಬಳಿಕ ಥಿಯೇಟರ್ ಗೆ ಓಪನ್ ಭಾಗ್ಯ ಸಿಕ್ಕಿದ್ದು, ಮರೆಯಾದ ಸಿನಿಮಾಗಳಿಗೆ ಮರುಬಿಡುಗೆಯ ಭಾಗ್ಯವು ದೊರೆತಿದೆ. ಅದರ ಸಾಲಿನಲ್ಲೇ ʼಕಾಣದಂತೆ ಮಾಯವಾದನುʼ ಸಹ ನಿಂತಿದ್ದಾನೆ.

ಇದೇ ಅಕ್ಟೋಬರ್ 15 ರಂದು ಚಿತ್ರಮಂದಿರಗಳನ್ನು ತೆರೆಯುತ್ತಿದ್ದು, ಅಂದೇ ಕಾಣದಂತೆ ಮಾಯವಾದನು ಮರುಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕ ರಾಜ್ ಪತ್ತಿಪಾಟಿ ಮಾತನಾಡಿದ್ದು, ವಿಕಾಸ್ ಸಿನಿಮಾಗೆ ಒಳ್ಳೆಯ ರಿವೀವ್ ಬಂದಿತ್ತು. ಜನರು ಮೆಚ್ಚಿಕೊಂಡಿದ್ರು. ಬಟ್ ನಾವು ಒಂದಿಷ್ಟು ಸೀನ್ಗಳನ್ನು ತುಂಬಾ ಟ್ರಿಮ್ ಮಾಡಿದ್ವಿ. ಕಥೆಗೆ ಹೆಚ್ಚು ಇಂಪಾರ್ಟೆನ್ಸ್ ಕೊಟ್ಟು ಕೆಲವು ಸೀನ್ಗಳನ್ನು ಟ್ರಿಮ್ ಮಾಡಿದ್ವಿ. ಆದ್ರೀಗ ಒಂದಿಷ್ಟು ಬದಲಾವಣೆಯೊಂದಿಗೆ ಮರು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಜನರಿಗೆ ಖಂಡಿತ ಮೊದಲಿಗಿಂತ ಈ ಬಾರಿ ಹೆಚ್ಚಾಗಿ ಸಿನಿಮಾ ಇಷ್ಟವಾಗುತ್ತೆ ಅನ್ನೋದು ನಮ್ಮ ಅಭಿಪ್ರಾಯ ಎಂದಿದ್ದಾರೆ.

‘ಕಾಣದಂತೆ ಮಾಯವಾದನುʼ ಚಿತ್ರದಲ್ಲಿ ಲವರ್ ಬಾಯ್, ಆಕ್ಷನ್ ಹೀರೋ ಆಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಸಿಂಧೂ ಲೋಕ್ನಾಥ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪ ಸೋಮ್ ಸಿಂಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Advertisement. Scroll to continue reading.

 

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಪಾಶಾಂಕುಶಾ ಏಕಾದಶಿ ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಏಕಾದಶೀ – 10:46 ವರೆಗೆ ನಕ್ಷತ್ರ: ಶತಭಿಷ – 06:36 ವರೆಗೆ ಯೋಗ: ಧ್ರುವ –...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 3130 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 805947 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 42 ಮಂದಿ ಸಾವನ್ನಪ್ಪಿದ್ದಾರೆ....

ದಿನ ಭವಿಷ್ಯ

ಸೋಮವಾರ ರಾಶಿ ಭವಿಷ್ಯ-ಅಕ್ಟೋಬರ್-26,2020 ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ದಶಮೀ – 08:59 ವರೆಗೆ ನಕ್ಷತ್ರ: ಶತಭಿಷ – ಪೂರ್ಣ ರಾತ್ರಿ ವರೆಗೆ ಯೋಗ:...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 4439 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 802817 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 32 ಮಂದಿ ಸಾವನ್ನಪ್ಪಿದ್ದಾರೆ....

ದಿನ ಭವಿಷ್ಯ

ಸೂರ್ಯೋದಯ: 06:15, ಸೂರ್ಯಸ್ತ: 17:52 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ನವಮೀ – 07:41 ವರೆಗೆ ನಕ್ಷತ್ರ: ಧನಿಷ್ಠ – 28:23+ ವರೆಗೆ ಯೋಗ: ಗಂಡ – 24:29+ ವರೆಗೆ...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 4471 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 798378 ಕ್ಕೆ ಏರಿಕೆಯಾಗಿದೆ. ಮತ್ತು ಇಂದು...

ದಿನ ಭವಿಷ್ಯ

ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-24,2020 ದುರ್ಗಾ ಅಷ್ಟಮಿ, ಮಹಾ ನವಮಿ ಸೂರ್ಯೋದಯ: 06:14, ಸೂರ್ಯಸ್ತ: 17:52 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಅಷ್ಟಮೀ – 06:58 ವರೆಗೆ ನಕ್ಷತ್ರ: ಶ್ರವಣ –...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 5356 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 793907 ಕ್ಕೆ ಏರಿಕೆಯಾಗಿದೆ. ಮತ್ತು ಇಂದು...

ಪ್ರಮುಖ ಸುದ್ದಿ

ಬೆಂಗಳೂರು : ನವೆಂಬರ್ 17ರಿಂದ ಪದವಿ ಕಾಲೇಜು ಆರಂಭಿಸಲು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ...