Connect with us

Hi, what are you looking for?

ಪ್ರಮುಖ ಸುದ್ದಿ

ಎರಡು ವರ್ಷದಿಂದ ಬಿಟ್ಟಿದ್ದ ಕೂದಲಿಗೆ ಕತ್ತರಿ ಹಾಕಿದ ಧ್ರುವ ಸರ್ಜಾ

ಬೆಂಗಳೂರು: ಪೊಗರು ಸಿನಿಮಾಗಾಗಿ ಉದ್ದ ಕೂದಲು ಬೆಳೆಸಿದ್ದ ಧ್ರುವ ಇದೀಗ ತನ್ನ ಕೂದಲಿಗೆ ಕತ್ತರಿ ಹಾಕಿದ್ದಾರೆ. ಎರಡು ವರ್ಷಗಳಿಂದ ಬೆಳೆಸಿದ್ದ ಕೂದಲಿಗೆ ಕತ್ತರಿ ಹಾಕಿ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡುವುದಾಗಿ ಹೇಳಿದ್ದಾರೆ. ಕೂದಲಿಗೆ ಕತ್ತರಿ ಹಾಕುವ ವಿಡಿಯೋವನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೇರ್ ಕಟ್ ಮಾಡಿಸುವ ಮೊದಲು ವಿಡಿಯೋದಲ್ಲಿ ಮಾತನಾಡಿರುವ ಧ್ರುವ, ‘ಪೊಗರು ಶೂಟಿಂಗ್ ಮುಗೀತು, ಸ್ನೇಹಿತರೆಲ್ಲ ಕುಳಿತು ಕೂದಲು ದಾನ ಮಾಡುವಂತೆ ಹೇಳಿದರು. ಹಾಗಾಗಿ ಈ ನಿರ್ಧಾರ ಮಾಡಿರುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ.

https://www.instagram.com/tv/CH2CRAkHFG3/?utm_source=ig_web_copy_link

ಕ್ಯಾನ್ಸರ್ ನಿಂದ ಬಳಲುತ್ತಿರೋ 15 ವರ್ಷದ ಒಳಗಿನ ಮಕ್ಕಳಿಗೆ, ಕೀಮೋಥೆರಪಿ ಸಮಯದಲ್ಲಿ ಕೂದಲು ಉದುರುತ್ತಿರುತ್ತದೆ. ಅಂತಹ ಮಕ್ಕಳಿಗೆ ವಿಗ್ ಮಾಡಲು ಧ್ರುವ ಸರ್ಜಾ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಬಗ್ಗೆ ಹೇಳಿರುವ ಅವರು 10 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಬಹುದು. ಸಾಕಷ್ಟು ಜನ ದಾನ ಮಾಡಿದ್ದಾರೆ. ಕ್ಯಾನ್ಸರ್ ಬಂದು ಕೂದಲು ಉದುರುವ 15 ವರ್ಷದ ಒಳಗಿನ ಮಕ್ಕಳಿಗೆ ಕೂದಲು ಉಪಯೋಗವಾಗುತ್ತೆ. ಅವರಿಗೆ ಸಹಾಯವಾಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕೂದಲು ಕತ್ತರಿಸುವ ಎಲ್ಲರೂ ಹೀಗೆ ಮಾಡಿದರೆ ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತೆ.’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಪೊಗರು ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದ ಹಿನ್ನಲೆ ಹೇರ್ ಕಟ್ ಮಾಡಿದ್ದಾರೆ. ಪೊಗರು ಸಿನಿಮಾ ಕ್ರಿಸ್ಮಸ್ ಅಥವಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುವ ಸಾಧ್ಯತೆ ಇದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮೇಶ್ ಬಾಬು ತಿಳಿಸಿದ್ದಾರೆ. ತೀವ್ರ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ 64.5...

ಪ್ರಮುಖ ಸುದ್ದಿ

ಬೆಂಗಳೂರು : ಕೋಮುವಾದ ಕೊರೋನಾಗಿಂತಲೂ ಅಪಾಯಕಾರಿಯಾದ ವೈರಸ್’ ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ‘ಅವಧಿ’ ಹಮ್ಮಿಕೊಂಡಿದ್ದ ಎಸ್ ಜಿ ಸಿದ್ದರಾಮಯ್ಯನವರ ‘ಬಿಜ್ಜಳ...

ಪ್ರಮುಖ ಸುದ್ದಿ

ಬೆಂಗಳೂರು :ಮನುಷ್ಯ ಸಂಕುಲವನ್ನು ಭಯದ ಕೂಪಕ್ಕೆ ತಳ್ಳಿದ್ದ ಕೊರೊನಾ ಮಹಾಮಾರಿಗೆ ಅಂತ್ಯವಾಡುವ ಕಾಲ ಸನಿಹವಾಗಿದೆ. ಈಗಾಗಲೇ ಲಸಿಕೆ ಪ್ರಯೋಗ ಕೊನೆ ಹಂತದಲ್ಲಿದ್ದು ಶೀಘ್ರ ಜನರಿಗೆ ಸಿಗುವ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿದ...

ಪ್ರಮುಖ ಸುದ್ದಿ

ಕಲಬುರಗಿ: ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ. ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ...

ಪ್ರಮುಖ ಸುದ್ದಿ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ ಸೋಮವಾರ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಗರದ ಖಾಸಗಿ...

ಪ್ರಮುಖ ಸುದ್ದಿ

ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈಗಾಗಲೇ ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿವೆ....

ಪ್ರಮುಖ ಸುದ್ದಿ

ಬೆಂಗಳೂರು: ಇಂದು ರೆಬಲ್ ಸ್ಟಾರ್ ದರ್ಶನ್ ಅವರ ಎರಡನೇ ಪುಣ್ಯ ತಿಥಿ. ಈ ವೇಳೆ ಚಿತ್ರರಂಗದ ಗಣ್ಯರು ಅಂಬರೀಶ್ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ. ಅಂಬರೀಶ್ ಹಿರಿಯ ಮಗನ ಹಾಗೆ ಇದ್ದ ಪ್ರೀತಿಯ ದರ್ಶನ್,...

ಪ್ರಮುಖ ಸುದ್ದಿ

ಬೆಂಗಳೂರು :ರಾಜ್ಯದಲ್ಲಿ ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳು ರಚನೆಯಾದ ಬೆನ್ನಲ್ಲೇ ‘ಒಕ್ಕಲಿಗೆ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ಘೋಷಿಸುತ್ತಿದ್ದಂತೆ ಎಲ್ಲ ಜಾತಿ ನಾಯಕರು ನಮ್ಮ ಸಮುದಾಯಕ್ಕೂ...

ಪ್ರಮುಖ ಸುದ್ದಿ

ಬೆಂಗಳೂರು: ಕಲಿಯುಗ ಕರ್ಣ, ಮಂಡ್ಯದ ಗಂಡು, ಅಂಬಿ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಂಡಿರುವ ಅಭಿಮಾನ ಆರಾಧ್ಯ ದೈವ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯತಿಥಿ. ಅವರು ಅಗಲಿ 2 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ...

error: Content is protected !!