Connect with us

Hi, what are you looking for?

ಪ್ರಮುಖ ಸುದ್ದಿ

ದೇಶದಲ್ಲಿ ನಂಬರ್ ಒನ್ ನಟಿ ಯಾರು ಗೊತ್ತಾ ?

ಮುಂಬೈ:  ಮಹಾಮಾರಿ ಕರೋನಾ ಚಲನಚಿತ್ರೋದ್ಯಮದ ಮೇಲೂ ತೀವ್ರ ಪರಿಣಾಮ ಬೀರಿದೆ. ಲಾಕ್ ಡೌನ್ ಕಾರಣದಿಂದಾಗಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ. ಒಟಿಟಿಯಲ್ಲಿ ಕೆಲವು ಚಲನಚಿತ್ರಗಳು ಬಿಡುಗಡೆಯಾಗಿದ್ದರೂ ಸಹಾ ಬೆಳ್ಳಿ ಪರದೆಯಲ್ಲಿ ನೆಚ್ಚಿನ ನಾಯಕಿಯರನ್ನು ನೋಡಲಾಗದೇ ಅಭಿಮಾನಿಗಳು ನಿರಾಶರಾಗಿದ್ದಾರೆ.

ಇಂಡಿಯಾ ಟುಡೆ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ಚಲನಚಿತ್ರ ವಿಭಾಗದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಜಾಗತಿಕ ತಾರೆಗಳಾದ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಐಶ್ವರ್ಯಾ ರೈ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರನ್ನು ಹಿಂದಿಕ್ಕಿ ಅತ್ಯಂತ ಜನಪ್ರಿಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಸಮೀಕ್ಷೆಯಲ್ಲಿ ದೀಪಿಕಾ ಅವರಿಗೆ ಶೇ 16, ಪ್ರಿಯಾಂಕಾ ಚೋಪ್ರಾ 14, ಕತ್ರಿನಾ ಕೈಫ್ ಶೇ 13, ಐಶ್ವರ್ಯಾ ರೈ ಬಚ್ಚನ್ ಶೇ 10 ಮತ್ತು ಅನುಷ್ಕಾ ಶರ್ಮಾ ಶೇ 9 ಮತ ಪಡೆದಿದ್ದಾರೆ. ಸ್ಟಾರ್ ಕಿಡ್ ಆಲಿಯಾ ಭಟ್ ಜೊತೆಗೆ, ಬಾಲಿವುಡ್ ರಾಣಿ ಕಂಗನಾ ರನೌತ್ 6 ಶೇಕಡಾ ಮತಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

ಕಪೂರ್ ಕುಟುಂಬದ ಕರೀನಾ ಕಪೂರ್ ಖಾನ್ ಕೇವಲ 3 ಶೇಕಡಾ ಮತಗಳನ್ನು ಪಡೆದಿದ್ದಾರೆ. ರಾಮ್‌ಲೀಲಾ ಮತ್ತು ಪದ್ಮಾವತ್‌ನಂತಹ ಚಿತ್ರಗಳೊಂದಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿ ಹೊರಹೊಮ್ಮುತ್ತಿರುವ ದೀಪಿಕಾ ಪಡುಕೋಣೆ, ಪ್ರಭಾಸ್ ಅವರೊಂದಿಗೆ ಟಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಅವರು ‘ಡಾರ್ಲಿಂಗ್’ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು : ನಟಿ ಸಾನ್ವಿ ಶ್ರೀವಾತ್ಸವ್ ಸದ್ಯ ಮಾಲ್ಡೀವ್ಸ್ ಬೀಚ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಿಂದ ಕೊಂಚ ಬಿಡುವ ಪಡೆದಿರುವ ನಟಿ, ಪ್ರವಾಸದಲ್ಲಿದ್ದು, ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ...

ಪ್ರಮುಖ ಸುದ್ದಿ

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ನಿವಾಸದ ಮೇಲೆ ಎನ್ಸಿಬಿ ಅಧಿಕಾರಿಗಳು ನಡೆಸಿದ್ದರು ದಾಳಿ ವೇಳೆ ಭಾರತಿ ನಿವಾಸದಲ್ಲಿ ಕಡಿಮೆ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಎನ್ಸಿಬಿ ಅಧಿಕಾರಿಗಳು ಹರ್ಷನನ್ನು...

ಪ್ರಮುಖ ಸುದ್ದಿ

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ನಡೆಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್ನ ಡ್ರಗ್ಸ್ ಕರ್ಮಕಾಂಡ ಹೊರಬಿದ್ದಿದ್ದು, ಎನ್ಸಿಬಿಯು ಈ...

ಪ್ರಮುಖ ಸುದ್ದಿ

ಮುಂಬೈ: ಬಿಗ್ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ...

ಪ್ರಮುಖ ಸುದ್ದಿ

ಹೆಲ್ಮೆಟ್ ಹಾಕದೆ ಬೈಕ್ ಓಡಿಸುವಾಗ ಸಿಕ್ಕಿಬಿದ್ದರೆ ಪೊಲೀಸರು ದಂಡ ಹಾಕುತ್ತಾರೆ. ಆದ್ರೆ ನಟಿ ತಾಪ್ಸಿ ಪೊನ್ನು ಫೋಟೋ ಹಂಚಿಕೊಂಡಿದ್ದಕ್ಕೆ ದಂಡ ಕಟ್ಟಿದ್ದಾರೆ. https://www.instagram.com/p/CHuQo-npSyT/?utm_source=ig_web_copy_link ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ...

ಪ್ರಮುಖ ಸುದ್ದಿ

ಮುಂಬೈ: ಕೊರೊನಾ ವೈರಸ್ ಇರುವ ಕಾರಣ ವಿದೇಶದಿಂದ ಬಂದವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಳಜಿವಹಿಸಲಾಗುತ್ತದೆ. ಹೀಗಾಗಿ ಜೂಹಿ ಚಾವ್ಲಾ ಮ್ಯಾಚ್ ಮುಗಿಸಿಕೊಂಡು ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗಲೂ ತಪಾಸಣೆ ವಿಚಾರಕ್ಕೆ...

ಪ್ರಮುಖ ಸುದ್ದಿ

ಮುಂಬೈ : ಪ್ರಮುಖ ಮೊಬೈಲ್ ಗೇಮ್ ಪಬ್ಜಿ ಬಳಕೆದಾರರಿಗೊಂದು ಶುಭ ಸುದ್ದಿ. ಭಾರತೀಯ ಗ್ರಾಹಕರಿಗೆ ಹೊಸ ರೂಪದಲ್ಲಿ ಈ ಆಟವು ಮತ್ತೆ ಲಭ್ಯವಾಗಲಿದೆ. ಪಬ್ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಭಾರತದ ಬಳಕೆದಾರರಿಗಾಗಿ ವಿಶೇಷವಾಗಿ...

ಪ್ರಮುಖ ಸುದ್ದಿ

ಮುಂಬಯಿ : ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ನ ಆರು ಆಸ್ತಿಗಳನ್ನು ಅಧಿಕಾರಿಗಳು ಮಂಗಳವಾರ ಹರಾಜು ಹಾಕಿದ್ದಾರೆ. ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ ಕಾಯ್ದೆ (ಸೇಫ್) ಅಡಿಯಲ್ಲಿ ಆರು ಆಸ್ತಿಗಳಿಗೆ ಇಂದು...

ಪ್ರಮುಖ ಸುದ್ದಿ

ಮುಂಬಯಿ : ದೀಪಿಕಾ ಪಡುಕೋಣೆ ಈಗ ಶಾಂತಿಪ್ರಿಯರಾಗಿದ್ದಾರೆ. ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲು ಶಾಂತಿಪ್ರಿಯ ಅಂತ ಹೆಸರು ಬದಲಾಯಿಸಿಕೊಂಡಿದ್ದಾರೆ. ಅದಕ್ಕೆ ಕಾರಣವೊಂದಿದೆ. ಅವರು ಬಾಲಿವುಡ್ ಅಂಗಳಕ್ಕೆ ಪ್ರವೇಶಿಸಿ ಇಂದಿಗೆ 13 ವರ್ಷಗಳು ಕಳೆದಿವೆ....

error: Content is protected !!