ಹಿರಿಯೂರು: ಕೊಟ್ಟ ಸಾಲ ಕೇಳಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಕೋಪ ತಾರಕಕ್ಕೇರಿ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಜಗಳದಲ್ಲಿ 65 ವರ್ಷದ ಜಯಣ್ಣ ಮೃತ ಪಟ್ಟಿದ್ದಾರೆ. ಹಿರಿಯೂರು ತಾಲೂಕಿನ ದಿಂಡವಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
2021 ಎಪ್ರಿಲ್ ನಲ್ಲಿ ಒಂದು ಆಕ್ಸಿಡೆಂಟ್ ಆಗಿತ್ತು. ಗಂಗಾಧರ್ ಹಾಗೂ ಅಣ್ಣಪ್ಪನ ನಡುವೆ ಅಪಘಾತ ಸಂಭವಿಸಿ, ಅಣ್ಣಪ್ಪ ಸಾವನ್ನಪ್ಪಿದ್ದ. ಆ ಬಳಿಕ ಗಂಗಾಧರ್ ಊರು ಬಿಟ್ಟು ಓಡಿ ಹೋಗಿದ್ದ. ಜೊತೆಗೆ ಆಕ್ಸಿಡೆಂಟ್ ನಲ್ಲಿ ತೀರಿ ಹೋಗಿದ್ದ ಅಣ್ಣಪ್ಪನ ಬಳಿ ಸಾಲವನ್ನು ಪಡೆದಿದ್ದ. ಅಣ್ಣಪ್ಪ, ಜಯಣ್ಣನ ಮಗನಾಗಿದ್ದ. ಸಾಲ ಕೊಟ್ಟಿದ್ದ ವಿಚಾರ ಜಯಣ್ಣನಿಗೂ ತಿಳಿದಿತ್ತು.
ಊರು ಬಿಟ್ಟಿದ್ದ ಗಂಗಾಧರ್ ಭೂತಪ್ಪನ ಹಬ್ಬಕ್ಕೆ ಹಾಜರಾಗಿದ್ದ. ಸೋಮವಾರದಂದು ಊರಿನಲ್ಲಿ ಕಾಣಿಸಿಕೊಂಡಿದ್ದ. ಗಂಗಾಧರ್ ನನ್ನು ಕಂಡ ಜಯಣ್ಣ, ಮಗನಿಂದ ಪಡೆದ ಸಾಲ ವಾಪಾಸ್ ಕೊಡಬೇಕೆಂದು ಕೇಳಿದ್ದ. ಆದರೆ ಆ ಸಮಯದಲ್ಲಿ ಗಂಗಾಧರ್, ನಾನು ಯಾವ ಹಣವನ್ನು ಕೊಡುವಂತೆಯೇ ಇಲ್ಲ. ಎಲ್ಲಾ ತೀರಿದೆ ಎಂದಿದ್ದ. ಆ ಕ್ಷಣದಲ್ಲಿ ಮಾತಿಗೆ ಮಾತು ಬೆಳೆದಿತ್ತು, ಕೋಪ ತಾರಕಕ್ಕೆ ಏರಿತ್ತು. ಅದರ ಪರಿಣಾಮ ಜಯಣ್ಣನನ್ನು ಕೊಲೆ ಮಾಡಲಾಗಿದೆ.
ಈ ಜಗಳದಲ್ಲಿ ಗಂಗಾಧರ್, ಜಯಣ್ಣನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು, ನೆಲಕ್ಕೆ ಬೀಳಿಸಿದ್ದ. ಇದರಿಂದ ಜಯಣ್ಣ ಅಂಗಾತವಾಗಿ ಬಿದ್ದು ಗಾಯಗೊಂಡಿದ್ದ. ತಕ್ಷಣ ಆತನನ್ನು ಸ್ಥಳೀಯ ದಿಂಡವಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮಾರ್ಗಮಧ್ಯೆ ಜಯಣ್ಣನ ಉಸಿರು ನಿಂತಿದೆ ಎಂದು ಹೇಳಿದರು. ದುರುದ್ದೇಶದಿಂದ ಜಯಣ್ಣನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಆರೋಪಿ ಗಂಗಾಧರ್ ವಿರುದ್ಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…