ಯಶ್ ಪೋಸ್ಟ್ ನಲ್ಲಿ ಕನ್ನಡವೇ ಮಾಯವಾಯ್ತಾ..? ಟ್ರೋಲಿಗರು ಹೇಳ್ತಿರೋದೇನು..?

suddionenews
1 Min Read

ಟ್ರೋಲಿಗರಿಗೂ ಸೆಲೆಬ್ರೆಟಿಗಳಿಗೂ ಅವಿನಾವಭಾವ ಸಂಬಂಧ. ಟ್ರೋಲಿಗರಿಗೆ ಸುಲಭದಲ್ಲೇ ಸಿಗುವವರು ಅಂದ್ರೆ ಅದು ಸೆಲೆಬ್ರೆಟಿಗಳೇ. ಅವ್ರು ಕುಂತ್ರು ನಿಂತ್ರು ಟ್ರೋಲಿಗರಿಗೆ ಆಹಾರವಾಗ್ತಾನೆ ಇರುತ್ತಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಟ್ರೋಲಿಗರಿಗೆ ಗುರಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರನ್ನ ಟ್ರೋಲ್ ಮಾಡಿದ್ದು ಕಡಿಮೆಯೇ. ಆದ್ರೆ ಇದೀಗ ಹುಟ್ಟು ಹಬ್ಬದ ಬೆನ್ನಲ್ಲೇ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕಾರಣ ಇಷ್ಟೇ ಯಶ್ ಮಾಡುವ ಒಂದೊಂದು ಪೋಸ್ಟ್ ನಲ್ಲೂ ಕಾಣೆಯಗಿರುವ ಕನ್ನಡ ಪದಗಳು.

ಹೌದು, ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ ಮೇಲೆ ಹೆಚ್ಚಾಗಿ ಇಂಗ್ಲೀಷ್ ಭಾಷೆಯನ್ನೇ ಬಳಸೋದಕ್ಕೆ ಶುರು ಮಾಡಿದ್ದಾರೆ. ಕನ್ನಡವನ್ನ ಅಪರೂಪದಲ್ಲಿ ಅಪರೂಪವೆಂಬಂತೆ ಬಳಕೆ ಮಾಡುತ್ತಿದ್ದಾರೆ. ಇದು ಟ್ರೋಲಿಗರ ಕೋಪಕ್ಕೆ ಕಾರಣವಾಗಿದೆ.

ಬೆಳೆಯುವಾಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವಿರಲಿ, ರಾಜ್, ವಿಷ್ಣು, ಅಂವಿಯಂತ ದಿಗ್ಗಜರ ಹುಟ್ಟುಹಬ್ಬವಿರಲಿ, ಮರೆಯದೆ ಶುಭಕೋರುತ್ತಿದ್ದ ಹುಡುಗ. ಮೊದಲೆಲ್ಲಾ ಕನ್ನಡದಲ್ಲೇ ಶುಭಕೋರುತ್ತಿದ್ದ, ಇತರೆ ನಟರಿಗೆ ಸಾಕಷ್ಟು ಗೌರವ ಕೊಡುತ್ತಿದ್ದ ನಟ. ಆದ್ರೆ ಇತ್ತೀಚೆಗೆ ಎಲ್ಲವೂ ಬದಲಾಗಿದೆ. ಕನ್ನಡಪರ ಧ್ವನಿ ಎತ್ತದ, ಇಮನಗ್ಲೀಷ್ ನಲ್ಲೇ ಹೆಚ್ಚು ಪೋಸ್ಟ್ ಹಾಕುವ ಹುಡುಗರಾಗಿದ್ದಾರೆ ಎಂದು ಟ್ರೋಲಿಗರು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *